ನವದೆಹಲಿ: ಚೆನ್ನೈನಲ್ಲಿ ನಡೆದ ನ್ಯಾಯಮೂರ್ತಿ ಎಸ್. ನಟರಾಜನ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ ಮಾತನಾಡಿ, ನ್ಯಾಯಮೂರ್ತಿಗಳು ರಾಜಕೀಯ ಅಭಿಪ್ರಾಯಗಳಿಂದ ದೂರ ಇರಬೇಕು. ಇದರ ಜೊತೆಗೆ ನಿಷ್ಪಕ್ಷಪಾತವಾಗಿರುವುದು ನ್ಯಾಯಾಲಯದ ಸ್ವಾತಂತ್ರ್ಯಕ್ಕೆ ಬಹಳ ಮುಖ್ಯ ಅಂಶವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯ
ನ್ಯಾಯಾಂಗದ ಅಧಿಕಾರವನ್ನು ಯಾರ ಒತ್ತಡಕ್ಕೂ ಮಣಿಯದೆ ಚಲಾಯಿಸುವುದು ನ್ಯಾಯಮೂರ್ತಿಯೊಬ್ಬರಿಗೆ ಇರುವ ಪರಮಾಧಿಕಾರ. ಹಾಗೆಯೇ ಅದು ಅವರ ಆದ್ಯ ಕರ್ತವ್ಯವೂ ಹೌದು ಎಂದು ಅವರು ಹೇಳಿದರು. ರಾಜಕೀಯ
ಭಿನ್ನ ನಿಲುವು, ಭಿನ್ನಾಭಿಪ್ರಾಯಗಳನ್ನು ಆ ನ್ಯಾಯಮೂರ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ನೆಲೆಯಲ್ಲಿ ನೋಡಬೇಕು. ಇಬ್ಬರು ನ್ಯಾಯಮೂರ್ತಿಗಳ ನಡುವಿನ ಭಿನ್ನ ನಿಲುವುಗಳು ಅಥವಾ ಭಿನ್ನಾಭಿಪ್ರಾಯಗಳು ನ್ಯಾಯಾಂಗದ ಪ್ರಬುದ್ಧತೆಯನ್ನು ಸೂಚಿಸುತ್ತದೆ ಎಂದು ನ್ಯಾ. ಬಿ.ವಿ. ನಾಗರತ್ನ ಅವರು ವಿಶ್ಲೇಷಿಸಿದರು.
ಇದನ್ನೂ ಓದಿ: ಹಿರಿಯ ಪತ್ರಕರ್ತ, ದಲಿತರ ಧ್ವನಿ ವಿ ಟಿ ರಾಜಶೇಖರ್ ನಿಧನ
ನ್ಯಾಯಮೂರ್ತಿಗಳು ತಮ್ಮ ನ್ಯಾಯದತ್ತ ಅಧಿಕಾರ ಚಲಾಯಿಸುವ ಸಂದರ್ಭದಲ್ಲಿ ಬೇರೆಯವರ ಅಭಿಪ್ರಾಯಗಳಿಗೆ ಮಣಿಯಬಾರದು. ಅಂತಿಮವಾಗಿ, ನ್ಯಾಯಮೂರ್ತಿಯೊಬ್ಬರ ನಂಬಿಕೆ, ಧೈರ್ಯ ಮತ್ತು ಅವರ ಸ್ವಾತಂತ್ರ್ಯವೇ ನ್ಯಾಯಾಂಗದ ಮುಂದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತವೆ ಎಂದು ಅವರು ಹೇಳಿದರು.
ನ್ಯಾಯಾಂಗ Vs ಕಾರ್ಯಾಂಗ
ನ್ಯಾಯಾಂಗ ಮತ್ತು ಕಾರ್ಯಾಂಗ ಅಧಿಕಾರ ವಿಭಜನೆಯ ಕುರಿತು ಮಾತನಾಡಿದ ನ್ಯಾ. ಬಿ.ವಿ. ನಾಗರತ್ನ, ನ್ಯಾಯಾಂಗದ ನಿರ್ಧಾರಗಳನ್ನು ಕಾರ್ಯಾಂಗ ಸರಳವಾಗಿ ತಳ್ಳಿ ಹಾಕುವಂತಿಲ್ಲ. ಯಾವುದೇ ಕಾನೂನು ತಿದ್ದುಪಡಿ ಮಾಡುವ ಅಧಿಕಾರ ಕಾರ್ಯಾಂಗಕ್ಕೆ ನೀಡಲಾಗಿದೆ. ಆದರೆ, ಕಾನೂನಿನ ವ್ಯಾಖ್ಯಾನದ ಪ್ರಶ್ನೆ ಬಂದಾಗ, ನ್ಯಾಯಾಂಗ ಮಧ್ಯಪ್ರವೇಶ ಮಾಡಬಹುದು. ಆಗ, ನ್ಯಾಯಾಂಗದೇ ಪರಮಾಧಿಕಾರವಾಗುತ್ತದೆ ಎಂದು ಅವರು ವಿಶ್ಲೇಷಿಸಿದರು.
ಕಾರ್ಯಾಂಗ ತನ್ನ ಎಲ್ಲೆ ಮೀರಿದೆ ಎನ್ನುವುದಕ್ಕೆ ಬುಲ್ಡೋಜರ್ ನ್ಯಾಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಬುಲ್ಡೋಜರ್ ನ್ಯಾಯ ಒದಗಿಸುವ ಅಧಿಕಾರಿಗಳ ಕ್ರಮವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವ ಐತಿಹಾಸಿಕ ತೀರ್ಪನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಆರೋಪಿಗಳನ್ನು ಶಿಕ್ಷಿಸಲು ವಿಚಾರಣೆ ನಡೆಸದೆ ಅವರ ಮನೆ ಅಥವಾ ಅಂಗಡಿಗಳನ್ನು ನೆಲಸಮ ಮಾಡಿರುವುದು ಅಪರಾಧ ಪ್ರಕ್ರಿಯೆಯಲ್ಲಿ ಒಪ್ಪತಕ್ಕದ್ದಲ್ಲ ಎಂದು ಅವರು ಹೇಳಿದರು.
ಇದನ್ನೂ ನೋಡಿ: SCZIEF Conference| wealth is not the value of development – Says Ashsok Dhavale | AIIEA