ನ್ಯಾಯಶಾಸ್ತ್ರಜ್ಞ ಫಾಲಿ ಎಸ್. ನಾರಿಮನ್ (95) ನಿಧನ

ನವದಹೆಲಿ: ನ್ಯಾಯಶಾಸ್ತ್ರಜ್ಞ ಮತ್ತು ಹಿರಿಯ ಸಾಂವಿಧಾನಿಕ ವಕೀಲ ಫಾಲಿ ಎಸ್. ನಾರಿಮನ್ ಅವರು ಬುಧವಾರ ರಾಷ್ಟ್ರರಾಜಧಾನಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. 1991 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ನಾರಿಮನ್ ಅವರು 2007 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೊಲಿಜಿಯಂ ವ್ಯವಸ್ಥೆಗೆ ಕಾರಣವಾದ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ಕೇಸ್ ಮತ್ತು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಅಸಂವಿಧಾನಿಕ ಎಂದ NJAC ತೀರ್ಪು ಸೇರಿದಂತೆ ಮಹತ್ವದ ಪ್ರಕರಣದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ನಾರಿಮನ್ ಅವರು 1950 ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಪ್ರಾರಂಭಿಸಿದ್ದರು. 1961 ರಲ್ಲಿ ಹಿರಿಯ ವಕೀಲರಾದ ಅವರು, 1972 ರಿಂದ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಪ್ರಾರಂಭಿಸಿದರು. ಇದೇ ವೇಳೆ ಅವರು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಆಗಿ ನೇಮಕಗೊಂಡರು. 1975 ರಲ್ಲಿ ಅವರು ಇಂದಿರಾ ಗಾಂಧಿ ಸರ್ಕಾರದ ತುರ್ತು ಪರಿಸ್ಥಿತಿಯ ಘೋಷಣೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಎಎಸ್‌ಜಿ ಹುದ್ದೆಗೆ ರಾಜೀನಾಮೆ ನೀಡಿದರು.

ಇದನ್ನೂ ಓದಿ: ತೆಲಂಗಾಣ | ಕಂಪೆನಿ ತೊರೆದ ದಲಿತ ಉದ್ಯೋಗಿಗಳಿಗೆ ಬೆಲ್ಟ್ ಮತ್ತು ಟೈರ್ ಟ್ಯೂಬ್‌ಗಳಿಂದ ತೀವ್ರ ಥಳಿತ

ನಾರಿಮನ್ ಅವರು ದಿ ಸ್ಟೇಟ್ ಆಫ್ ನೇಷನ್, ಗಾಡ್ ಸೇವ್ ದಿ ಹಾನ್’ಬಲ್ ಸುಪ್ರೀಂ ಕೋರ್ಟ್, ಮತ್ತು ಅವರ ಆತ್ಮಚರಿತ್ರೆ ಬಿಫೋರ್ ಮೆಮೊರಿ ಫೇಡ್ಸ್ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಹಿರಿಯ ನ್ಯಾಯಶಾಸ್ತ್ರಜ್ಞ ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂತಾಪ ಸೂಚಿಸಿದ್ದಾರೆ. “ಖ್ಯಾತ ನ್ಯಾಯಶಾಸ್ತ್ರಜ್ಞ, ಹಿರಿಯ ವಕೀಲ ಮತ್ತು ಸಾಂವಿಧಾನಿಕ ನಾಗರಿಕ ಹಕ್ಕುಗಳ ಪ್ರತಿಪಾದಕ ಫಾಲಿ ಎಸ್ ನಾರಿಮನ್ ಅವರ ನಿಧನ ಕಾನೂನು ವ್ಯವಸ್ಥೆಗೆ ದೊಡ್ಡ ನಷ್ಟವಾಗಿದೆ. ಪದ್ಮವಿಭೂಷಣ ಪುರಸ್ಕೃತರಾದ ಅವರು ತಮ್ಮ ತತ್ವಗಳಿಗೆ ಬದ್ದರಾಗಿದ್ದರು. ಈ ವಿಚಾರದಲ್ಲಿ ಅಚಲ ಬದ್ಧತೆ ಶ್ಲಾಘನೀಯವಾಗಿತ್ತು. ಅವರ ಕುಟುಂಬ, ಸ್ನೇಹಿತರು ಮತ್ತು ದೇಶವಾಸಿಗಳಿಗೆ ನನ್ನ ತೀವ್ರ ಸಂತಾಪಗಳು” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಸಂತಾಪ ವ್ಯಕ್ತಪಡಿಸಿದ್ದು,”ಕಾನೂನಿನಲ್ಲಿ ಅವರ ಏಳು ದಶಕಗಳ ಅನುಭವ, ಅದರಲ್ಲೂ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಅವರ ಅನುಭವವು ಐತಿಹಾಸಿಕ ಮತ್ತು ಗಮನಾರ್ಹವಾಗಿದೆ. ಅವರು ಅನೇಕ ಮಹತ್ವದ ತೀರ್ಪುಗಳಿಗೆ ಕಾರಣಕರ್ತರಾಗಿದ್ದು, ನ್ಯಾಯಶಾಸ್ತ್ರಕ್ಕೆ ಅವರ ಕೊಡುಗೆಗಳು ಮುಂದಿನ ಪೀಳಿಗೆಗೆ ನೆನಪಿನಲ್ಲಿ ಉಳಿಯುತ್ತವೆ. ಅವರ ಕುಟುಂಬ, ಸ್ನೇಹಿತರು ಮತ್ತು ಅವರ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ | ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಬಿಜೆಪಿ

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದು, ಪ್ರಖ್ಯಾತ ನ್ಯಾಯಶಾಸ್ತ್ರಜ್ಞ ಮತ್ತು ಖ್ಯಾತ ಸಾಂವಿಧಾನಿಕ ವಕೀಲರಾದ ಫಾಲಿ ನಾರಿಮನ್ ಅವರು ನಿಧನರಾಗಿದ್ದಾರೆಂದು ತಿಳಿದು ಆಘಾತವಾಗಿದೆ ಎಂದು ಹೇಳಿದ್ದಾರೆ. “ಅವರ ಬುದ್ಧಿವಂತಿಕೆಯು ನಮ್ಮ ರಾಷ್ಟ್ರದ ಕಾನೂನು ವ್ಯವಸ್ಥೆಯ ಬಿಲ್ಡಿಂಗ್ ಬ್ಲಾಕ್ಸ್‌ಗಳಲ್ಲಿ ಒಂದಾಗಿದೆ. ಅವರ ನಿಧನದಿಂದ ಅಪಾರ ನಷ್ಟವಾಗಿದೆ, ಆದರೆ ಅವರ ನೆನಪು ಎಲ್ಲಾ ಭಾರತೀಯರ ಹೃದಯ ಮತ್ತು ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ. ಅವರ ಕಾರ್ಯಗಳು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ. ನನ್ನ ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇವೆ” ಎಂದು ಹೇಳಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು, “ಪ್ರಸಿದ್ಧ ಕಾನೂನು ದಿಗ್ಗಜ ಮತ್ತು ಖ್ಯಾತ ನ್ಯಾಯಶಾಸ್ತ್ರಜ್ಞ ಫಾಲಿ ಎಸ್. ನಾರಿಮನ್ ಅವರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಪ್ರತಿಷ್ಠಿತ ಸಾಂವಿಧಾನಿಕ ವಕೀಲರು ತಮ್ಮ ಕಾನೂನು ಬುದ್ಧಿವಂತಿಕೆಗಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟರು. ದೇಶದಲ್ಲಿ ಅನೇಕ ಕಾನೂನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ನನ್ನ ಪ್ರಾರ್ಥನೆಗಳು ದುಃಖಿತ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇವೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ‘ತತ್ವಜ್ಞಾನಿ ಬಸವಣ್ಣ ಸಾಂಸ್ಕೃತಿಕ ನಾಯಕ’ ಹಿನ್ನೆಲೆ ಮತ್ತು ಆಗಬೇಕಾದ ಕೆಲಸಗಳು – ವಿಶ್ಲೇಷಣೆ : ಮೀನಾಕ್ಷಿ ಬಾಳಿ

Donate Janashakthi Media

Leave a Reply

Your email address will not be published. Required fields are marked *