ಬೆಂಗಳೂರು : ನ್ಯಾಯಾಂಗ ಪ್ರಜಾಪ್ರಭುತ್ವದ ರಕ್ಷಣೆಯ ಒಂದು ಕವಚವಾಗಿ ಕೆಲಸ ಮಾಡಬೇಕಿರುವುದು ಆಲ್ ಆಲ್ ಇಂಡಿಯಾ ಲಾಯರ್ಸ್ ಯನಿಯನ್ ಕೆಲಸವಾಗಿದೆ ಎಂದು ಆಲ್ ಇಂಡಿಯಾ ಲಾಯರ್ಸ್ ಯುನಿಯನ್ (AILU) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ P V ಸುರೇಂದ್ರನಾಥನ್ ಅವರು ಹೇಳಿದರು.
ನಗರದ ಬೆಂಗಳೂರು ಗೇಟ್ ಹೋಟೆಲ್ ನಲ್ಲಿ All India Lawyer union ಅಧ್ಯಯನ ಶಿಬಿರ ಉದ್ಘಾಟಿಸಿ, ನ್ಯಾಯಾಂಗದ ಮೇಲೆ ಕೃತಕ ಬುದ್ದಿ ಮತ್ತೆಯ ಪರಿಣಾಮದ ಕುರಿತು ಮಾತನಾಡಿದರು.
ಮಧ್ಯಾನದ ಗೋಷ್ಟಿ ಯಲ್ಲಿ ನಿವೃತ್ತ ನ್ಯಾಯಮೂರ್ತಿ H N ನಾಗಮೋಹನದಾಸ್ ಅವರು ಮಾತನಾಡಿ ಪ್ರಾಚೀನ ಭಾರತದಲ್ಲಿ ಒಂದು ರೀತಿಯ ವ್ಯವಸ್ಥಿತ ವಾದ ನ್ಯಾಯ ವಿತರಣಾ ಪದ್ದತಿ ಇತ್ತು. ರಾಜನೇ ಸ್ವತಃ ವ್ಯಾಜ್ಯ ಗಳನ್ನು ತಿರ್ಮಾನ ಮಾಡುವ ನ್ಯಾಯಾಲಯಗಳು ಇದ್ದವು. ರಾಜನ ಪರವಾಗಿ ರಾಜ ಮುದ್ರಿಕೆಯನ್ನು ಬಳಸಿ ನ್ಯಾಯ ವಿತರಣೆ ಮಾಡುವ ಮುದ್ರಿಕೆ ನ್ಯಾಯಾಲಯಗಳು ಇದ್ದವು ಎಂದರು.
ಇದನ್ನೂ ಓದಿ : ರಾಗಿಕಣ | ಗ್ರಾಮೀಣ ಸೊಗಡು ತಿಳಿಸುವ ಸಂತೆ

ದೇಶದ ಸಾಮಾನ್ಯ ಜನರು ಕಾನೂನಿನ ಅಜ್ಞಾನದಿಂದ ತಮ್ಮ ಹಕ್ಕುಗಳ ಲಾಭವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಹಕ್ಕುಗಳನ್ನು ಮತ್ತೊಬ್ಬರು ಕಸಿದು ಕೊಂಡಾಗ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೋಸ ,ವಂಚನೆ ಮತ್ತು ಶೋಷಣೆಗೆ ಸಿಕ್ಕಿ ನರಳುತ್ತಿದ್ದಾರೆ. ಅಂತಹ ಸಂಧರ್ಭದಲ್ಲಿ ಯುವ ವಕೀಲರು ಮುಂಚೂಣಿಯಲ್ಲಿ ನಿಂತು ಜನರಲ್ಲಿ ಕಾನೂನು ಅರಿವು ತಿಳುವಳಿಕೆ ಮೂಡವ ಹಾಗೆ ಮಾಡಬೇಕು ಎಂದುರು.
ಸಂವಿಧಾನ ಅಪವ್ಯಾಖ್ಯಾನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನ ಮೇಲೆ ದಾಳಿ ಮತ್ತು ಬದಲಾಯಿಸಬೇಕೆಂಬ ಧ್ವನಿ ಕೇಳಿ ಬರುತ್ತಿದೆ. ಸಂವಿಧಾನದ ಅನುಚ್ಛೇದಗಳನ್ನು ಅಪವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಮಗೆ ಉಳಿದಿರುವುದು ಸಂವಿಧಾನ ಒಂದೇ . ಆ ಸಂವಿಧಾನವನ್ನು ರಕ್ಷಿಸಬೇಕು. ಯುವ ವಕೀಲರು ನ್ಯಾಯಾಲಯದ ಒಳಗೆ ಮತ್ತು ಹೋರಗೆ ಸಂವಿಧಾನ ಮತ್ತು ಮೂಲ ತತ್ವಗಳನ್ನು ರಕ್ಷಿಸುವ ಕೆಲಸವಾಗಬೇಕಾಗಿದೆ. ಸಮಾಜದ ಕಟ್ಟಕಡೆಯಲ್ಲಿರುವ ಜನರ ಧ್ವನಿಯಾಗಬೇಕು. ಸರ್ಕಾರದ ಕಾರ್ಯಗಳು ಮತ್ತು ಯೋಜನೆಯನ್ನು ಈ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸರ್ಕಾರ ಮತ್ತು ಅಂಚಿನಲ್ಲಿರುವ ಜನರ ನಡುವೆ ಸೇತುವೆಯಾಗಿ ಕೆಲಸಮಾಡಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು K R ವೆಂಕಟೇಶ ಗೌಡ ವಹಿಸಿದರು. ವೇದಿಕೆಯಲ್ಲಿ AILU ಜಿಲ್ಲಾ ಕಾರ್ಯದರ್ಶಿ T N ಶಿವರೇಡ್ಡಿ, AILU ರಾಜ್ಯಾಧ್ಯಕ್ಷ ಹರಿಂದ್ರ, ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ಇದ್ದರು , ಶರಣಬಸಪ್ಪ ಮರದ ಕಾರ್ಯಕ್ರಮವನ್ನು ನಿರ್ವಹಿಸಿದರು.
ಇದನ್ನೂ ನೋಡಿ : ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರಕಾರ | ತಳ ಸಮುದಾಯಕ್ಕೆ ಎಸಗುತ್ತಿರುವ ದ್ರೋಹ Janashakthi Media
