ದೆಹಲಿ : ನ್ಯಾಯಾಲಯದ ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಪದೇ ಪದೇ ತಿರಸ್ಕರಿಸುತ್ತಿದೆ. ಇಂಥ ನಡೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಟುವಾಗಿ ಹೇಳಿದೆ. ನ್ಯಾಯ ಮಂಡಳಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಈ ಸಂಬಂಧ ನ್ಯಾಯಾಲಯ ನೀಡಿರುವ ಸೂಚನೆಗಳನ್ನು ಅನುಷ್ಠಾನಗೊಳಿಸುವ ಬದಲು ಕೇಂದ್ರ ಸರ್ಕಾರವು ಹೊಸ ಕಾಯಿದೆ ರೂಪಿಸಲು ಅಥವಾ ರದ್ದು ಮಾಡಲಾದ ಅವಕಾಶಗಳನ್ನೇ ಪುನಃ ಕಾಯಿದೆಯಲ್ಲಿ ಸೇರಿಸುವ ಮೂಲಕ ಪುನಃ ಸಾಂವಿಧಾನಿಕ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತಿರುವುದು ದುರದೃಷ್ಟಕರ ಎಂದೂ ಹೇಳಿದೆ.
ಇದನ್ನೂ ಓದಿ : ಎಸ್‌ಐಆರ್ ಕೆಲಸದ ಒತ್ತಡ ತಾಳಲಾರದೆ ಮಹಿಳಾ ಅಧಿಕಾರಿ ಆತ್ಮಹತ್ಯೆ
ನ್ಯಾಯ ಮಂಡಳಿಗಳ ಸುಧಾರಣಾ ಕಾಯಿದೆ 2021 ರಲ್ಲಿನ ಪ್ರಮುಖ ಅವಕಾಶಗಳನ್ನು ಸುಪ್ರೀಂಕೋರ್ಟ್ ಬುಧವಾರ ರದ್ದುಪಡಿಸಿದೆ. ಕೆಲ ಸಣ್ಣ ಬದಲಾವಣೆಗಳೊಂದಿಗೆ ಹೊಸ ಕಾಯಿದೆ ರಚಿಸಿ, ನ್ಯಾಯಾಲಯ ನೀಡಿರುವ ತೀರ್ಪುಗಳನ್ನು ಸಂಸತ್ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಕಟುವಾಗಿ ಹೇಳಿದೆ.
ನ್ಯಾಯ ಮಂಡಳಿ ವ್ಯವಸ್ಥೆಯನ್ನು ರೂಪಿಸುವಾಗ ಅಥವಾ ಬದಲಾಯಿಸುವಾಗ ಸಂಸತ್ತು ಸಾಂವಿಧಾನಿಕ ಅಗತ್ಯಗಳಾದ ಸ್ವಾತಂತ್ರ್ಯ, ನಿಷ್ಪಕ್ಷಪಾತ ಮತ್ತು ಪರಿಣಾಮಕಾರಿ ತೀರ್ಪುಗಳಿಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳಬೇಕು. ಈ ಮೂಲಭೂತ ಮೌಲ್ಯಗಳನ್ನು ದುರ್ಬಲಗೊಳಿಸುವಂತಹ ಕಾನೂನು ಸಾಂವಿಧಾನಿಕ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ನಾಶಗೊಳಿಸುತ್ತದೆ.
ಸುಗ್ರೀವಾಜ್ಞೆ ರೂಪದಲ್ಲಿ ತಂದಿದ್ದ ಈ ಕಾನೂನನ್ನು ಸುಪ್ರೀಂಕೋರ್ಟ್ 2021 ರ ಜುಲೈ ತಿಂಗಳಲ್ಲಿ ರದ್ದು ಮಾಡಿತ್ತು. ಈಗ ಮತ್ತೆ ಅದೇ ಹಳೆಯ ಕಾನೂನನ್ನೇ “ಹಳೆ ಹೆಂಡ (ವೈನ್) ವನ್ನು ಹೊಸ ಬಾಟಲಿಯಲ್ಲಿ ನೀಡುವಂತೆ” ರೂಪಿಸಲಾಗಿದೆ.
‘ಸುಪ್ರೀಂಕೋರ್ಟಿನ ನಿರ್ಧಾರಗಳನ್ನು ಕಡೆಗಣಿಸುವ ವಿವೇಚನೆ ಸಂಸತ್ತಿಗೆ ಇದೆ’ ಎಂದ ಸರ್ಕಾರದ ಅಟಾರ್ನಿ ಜನರಲ್ ಅವರ ವಾದವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ತಳ್ಳಿಹಾಕಿದರು. ಕಾನೂನುಗಳ ನ್ಯಾಯ ವಿಮರ್ಶೆಯು ಸಂವಿಧಾನದ ಮೂಲಭೂತ ವೈಶಿಷ್ಟ್ಯತೆ ಎನ್ನುವುದನ್ನು ನೆನಪಿಸಿದರು.
ಸಂವಿಧಾನದ ಶ್ರೇಷ್ಠತೆಯನ್ನು ಸಂಸತ್ತು ಕಡೆಗಣಿಸಲಾಗದು ಎಂದ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಜರ್ ಅವರ ಮಾತುಗಳನ್ನು ಉಲ್ಲೇಖಿಸಿದರು “ಸಂವಿಧಾನವನ್ನು ಅನುಸರಿಸುವಲ್ಲಿ ಕಾರ್ಯಾಂಗ ಪ್ರಾಮಾಣಿಕವಾಗಿದ್ದರೆ, ಸುಪ್ರೀಂಕೋರ್ಟ್ ನೀಡಿದ ನ್ಯಾಯ ನಿರ್ಣಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು” ಎಂದರು.
ಇದನ್ನೂ ನೋಡಿ : ಹಾಸನ ಜನರ ಧ್ವನಿಯಾದ ಕಾರ್ಮಿಕ ಚಳವಳಿ Janashakthi Media
