ನ್ಯಾಯಾಧೀಶ ಶೇಖ‌ ಕುಮಾರ್‌ ಯಾದವ್‌ ವಿವಾದಾತ್ಮಕ ಹೇಳಿಕೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತೀವ್ರ ತರಾಟೆ

ನವದೆಹಲಿ: ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕ್ರಮವೊಂದರಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೇಖ‌ ಕುಮಾರ್‌ ಯಾದವ್‌ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿನ್ನ ಹೈಕೋರ್ಟ್ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್‌ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ಮುಂದೆ ಹಾಜರಾಗಿದ್ದರು. ಮೂಲಗಳ ಪ್ರಕಾರ, ಈ ವೇಳೆ ಶೇಖರ್ ಕುಮಾರ್ ಯಾದವ್ ಅವರಿಗೆ ಸಿಜೆಐ ಕ್ಲಾಸ್ ತೆಗೆದುಕೊಂಡಿದ್ದು, ನ್ಯಾಯಾಲಯದ ಹೊರಗೆ ಹೇಳಿಕೆ ನೀಡುವಾಗಲೂ ಸಾಂವಿಧಾನಿಕ ಸ್ಥಾನಮಾನ, ಜವಾಬ್ದಾರಿಯ ಬಗ್ಗೆ ಎಚ್ಚರಿಕೆಯಿಂದ ಇದು, ವಿಶೇಷ ಕಾಳಜಿ ವಹಿಸಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.

ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಅವರ ನಡೆಯ ಬಗ್ಗೆ ಸುಪ್ರೀಂ ಕೋರ್ಟ್ ಸಿಜೆಐ ಸಂಜೀವ್ ಖನ್ನಾ ಅವರು ತೀವ್ರ ಅತೃಪ್ತಿ ತೋರಿದ್ದು, ಅವರು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್‌ ಅವರು ನೀಡಿದ ವಿವರಣೆಯಿಂದ ಕೊಲಿಜಿಯಂ ತೃಪ್ತರಾಗಲಿಲ್ಲ, ಮತ್ತು ಅವರು ಭಾಷಣದಲ್ಲಿ ಹೇಳಿದ ಕೆಲವು ವಿಷಯಗಳಿಗೆ ಛೀಮಾರಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಸಿಜೆಐ ಖನ್ನಾ ನೇತೃತ್ವದ ಕೂಲಿಜಿಯಂ, ಸಾಂವಿಧಾನಿಕ ಹುದ್ದೆಯನ್ನು ಹೊಂದುವುದು, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಡವಳಿಕೆ, ವರ್ತನೆ ಮತ್ತು ಭಾಷಣವನ್ನು ನಿರಂತರ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಹೀಗಾಗಿ ಶೇಖರ್ ಯಾದವ್ ಅವರು ಉನ್ನತ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದು, ನ್ಯಾಯಾಲಯದಲ್ಲಿ ಅಥವಾ ಸಾರ್ವಜನಿಕ ಸಮಾರಂಭದಲ್ಲಿ ಹೈಕೋರ್ಟ್‌ ನ್ಯಾಯಾಧೀಶರು ನೀಡುವ ಪ್ರತಿಯೊಂದು ಹೇಳಿಕೆಯು ಕಚೇರಿಯ ಘನತೆಗೆ ಅನುಗುಣವಾಗಿರಬಾರದು. ಯಾರ ನಂಬಿಕೆಗೆ ಧಕ್ಕೆ ತರಬಾರದು ಎಂದು ನ್ಯಾಯಮೂರ್ತಿ ಯಾದವ್ ಅವರಿಗೆ ತಿಳಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ನ್ಯಾಯಮೂರ್ತಿ ಯಾದವ್ ಹೇಳಿಕೆಗಳನ್ನು ತಪ್ಪಿಸಬಹುದು: ಕೊಲಿಜಿಯಂ

ಈ ಹಿಂದೆ, ಡಿಸೆಂಬರ್ 10 ರಂದು, ಮಾಧ್ಯಮ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಸುಪ್ರೀಂ ಕೋರ್ಟ್‌ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆಯನ್ನು ನಡೆಸಿತ್ತು. ಈ ಕುರಿತು ಅಲಹಾಬಾದ್ ಹೈಕೋರ್ಟ್‌ನಿಂದ ವರದಿಯನ್ನೂ ಕೇಳಲಾಗಿತ್ತು. ಇದೀಗ ಅಧಿಕೃತ ಹೇಳಿಕೆಯಲ್ಲಿ, ‘ಅಲಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್‌ ಅವರು ನೀಡಿದ ಭಾಷಣದ ಕುರಿತು ಪತ್ರಿಕೆಗಳ ವರದಿಗಳನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಹೈಕೋರ್ಟ್‌ನಿಂದ ವಿವರಗಳು ಮತ್ತು ಮಾಹಿತಿಯನ್ನು ಕೋರಲಾಗಿದ್ದು, ಸದ್ಯ ಈ ಪುಕರಣ ತನಿಖೆಯಲ್ಲಿದೆ.

ನಿಗದಿತ ಪ್ರೋಟೋಕಾಲ್ ಪ್ರಕಾರ, ನ್ಯಾಯಾಧೀಶರ ವಿರುದ್ಧದ ಯಾವುದೇ ವಿವಾದಾತ್ಮಕ ವಿಷಯದ ಕುರಿತು ಸಂಬಂಧಪಟ್ಟ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್ ಕೊಲಿಜಿಯಂ ವರದಿಯನ್ನು ಕೇಳಿದಾಗ, ಅವರು ತಮ್ಮ ವಾದವನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಮುಂದೆ ಮಂಡಿಸಲು ಅವಕಾಶವನ್ನು ನೀಡಲಾಗುತ್ತದೆ. ಡಿಸೆಂಬರ್ 8 ರಂದು ವಿಎಚ್‌ ಪಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾಯಮೂರ್ತಿ ಯಾದವ್, ಇತರ ವಿಷಯಗಳ ಜೊತೆಗೆ, ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಮುಖ್ಯ ಉದ್ದೇಶ ಸಾಮಾಜಿಕ ಸಾಮರಸ್ಯ, ಲಿಂಗ ಸಮಾನತೆ ಮತ್ತು ಜಾತ್ಯತೀತತೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಎಚ್‌ಪಿ ಕಾನೂನು ಕೋಶ ಮತ್ತು ಹೈಕೋರ್ಟ್ ಘಟಕದ ಪ್ರಾಂತೀಯ ಸಮ್ಮೇಳನವನ್ನು ಉದ್ದೇಶಿಸಿ ಅವರು
ಮಾತನಾಡಿದ್ದರು.

ನ್ಯಾಯಾಧೀಶ ಶೇಖರ್ ಯಾದವ್ ಅವರ ವೀಡಿಯೊಗಳು ವೈರಲ್ ಆದ ಮರುದಿನ, ಅವರ ಭಾಷಣಕ್ಕೆ ಸಂಬಂಧಿಸಿದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು, ಇದು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಕಾರಣವಾಯಿತು. ಬಹುಮತಕ್ಕೆ ಅನುಗುಣವಾಗಿ ಕಾನೂನು ಕೆಲಸ ಮಾಡುತ್ತದೆ ಎಂದು ನ್ಯಾಯಾಧೀಶ ಶೇಖರ್ ಯಾದವ್‌ ಹೇಳಿದ್ದರು. ವಿರೋಧ ಪಕ್ಷದ ನಾಯಕರು ಅವರ ಹೇಳಿಕೆಗಳ ಬಗ್ಗೆ, ಕಠಿಣ ಪ್ರಶ್ನೆಗಳನ್ನು ಎತ್ತಿದ್ದರು ಮತ್ತು ಅದನ್ನು ‘ದ್ವೇಷಪೂರಿತ ಭಾಷಣ’ ಎಂದು ಟೀಕಿಸಿದ್ದರು.

ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಕಾರ್ಯವೈಖರಿ ಬಗ್ಗೆ ಆಂತರಿಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ‘ನ್ಯಾಯಾಂಗ ಹೊಣೆಗಾರಿಕೆ ಮತ್ತು ಸುಧಾರಣೆಗಳ ಅಭಿಯಾನ’ ಎಂಬ ಸರ್ಕಾರೇತರ ಸಂಸ್ಥೆಯ ಸಂಚಾಲಕ ವಕೀಲ ಪ್ರಶಾಂತ್ ಭೂಷಣ್ ಅವರು ಸಿಜೆಐ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ನೋಡಿ : Sushila Gopalan Memorial Lecture: Every Day Struggle Of Women & Children in Times of conflict

Donate Janashakthi Media

Leave a Reply

Your email address will not be published. Required fields are marked *