ಬೆಂಗಳೂರು: ಒಬ್ಬ ವ್ಯಕ್ತಿ ಸಾರ್ವಜನಿಕವಾಗಿ ಒಳ್ಳೆಯ ಕೆಲಸ ಗಳು ಮಾಡುತ್ತಿದ್ದರೆ ಅಥವಾ ಜನಪ್ರತಿನಿಧಿ ಶಾಸಕ, ಮಂತ್ರಿ ಉತ್ತಮ ಕೆಲಸ ಮಾಡುತ್ತಿದ್ದರೆ, ಅದನ್ನು ಮಾಧ್ಯಮದ ಮೂಲಕ ತಿಳಿಸುತ್ತಿದ್ದೀರಿ. ಈ ಮಧ್ಯೆ ಹಲವು ಪತ್ರಿಕೆಗಳು, ಟಿವಿ ಚಾನೆಲ್‌ಗಳು, ಯೂ ಟ್ಯೂಬ್‌ಗಳು ಬಹಳಷ್ಟಿವೆ. ಮಾಧ್ಯಮಗಳಿಲ್ಲದೆ ಏನೂ ಇಲ್ಲ. ನೇರ, ನಿಷ್ಠೆ, ಪ್ರಾಮಾಣಿಕವಾಗಿ ಜನತೆಗೆ ತಲುಪಿಸುವ ಕಾರ್ಯನಿರ್ವಹಿಸುತ್ತಿರುವುದು ಪತ್ರಿಕಾ ಧರ್ಮವೆಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಯವರು ತಿಳಿಸಿದರು. ಸತ್ಯ
ಸಂಪಾದಕ ಸ್ಥಾನಕ್ಕೆ ಏರುವುದು ಬಹಳ ಕಷ್ಟ. ಸಂಪಾದಕರಾಗಲು ಕನಿಷ್ಠ 15-20 ವರ್ಷ ಅನುಭವವಿರಬೇಕು. ಸಂಪಾದಕರೆಂದರೆ ಹೆಚ್ಚು ಜವಾಬ್ದಾರಿ. ನಿಮ್ಮ ಭವಿಷ್ಯ ಉತ್ತಮವಾಗಲಿ ಎಂದು ವಿವಿಧ ಪತ್ರಿಕೆ, ಟಿವಿ ಚಾನೆಲ್‌ಗಳ ಸಂಪಾದಕರು ಹಾಗೂ ಪ್ರೆಸ್ ಕ್ಲಬ್ ಉನ್ನತಿಗೆ ಶ್ರಮಿಸಿದವರನ್ನು ಹಾರೈಸಿದರು. ಸತ್ಯ
ಬೆಂಗಳೂರು ಪ್ರೆಸ್‌ಕ್ಲಬ್‌ವತಿಯಿಂದ 2025ರ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿಯವರು, ವಿವಿಧ ಪತ್ರಿಕೆ, ಮಾಧ್ಯಮಗಳಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂಪಾದಕರು ಹಾಗೂ ಪ್ರೆಸ್ ಕ್ಲಬ್ ಉನ್ನತಿಗಾಗಿ ಶ್ರಮಿಸಿದ ಹಿರಿಯ ಪತ್ರಕರ್ತರನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು. ಸತ್ಯ
ಇದನ್ನೂ ಓದಿ: ತುಪ್ಪದಕೋಣ ಗ್ರಾಮಸ್ಥರ ಮೇಲೆ ಶಿರಾ ಟೌನ್ ಪೊಲೀಸರ ದೌರ್ಜನ್ಯ
1993-94 ರಲ್ಲಿ ವೀರಪ್ಪ ಮೊಯಿಲಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ, ಪ್ರೆಸ್ ಕ್ಲಬ್‌ಗೆ ಕಾಂಪೌಂಡ್ ಸಹ ಇರಲಿಲ್ಲ. ಅಂದಿನಿಂದಲೂ ಪ್ರೆಸ್ ಕ್ಲಬ್ ಜೊತೆ ಅವಿನಾಭಾವ ಸಂಬಂಧವಿದೆ. ಮಾಜಿ ಸದಸ್ಯ ಪೊನ್ನಪ್ಪರವರಿಗೂ ಸನ್ಮಾನಿಸಿರುವುದು ಸಂತಸ ತಂದಿದೆ. ನಾವಿಬ್ಬರೂ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದೇವೆಂದು ಹಳೆಯ ನೆನಪು ಮೆಲುಕು ಹಾಕಿದರು. ಪ್ರೆಸ್‌ಕ್ಲಬ್ ಅಭಿವೃದ್ಧಿಗಾಗಿ ಪೊನ್ನಪ್ಪ, ಪಿ, ತ್ಯಾಗರಾಜ್, ಮಣಿ, ಶಿವರಾಜು, ಸಮೀವುಲ್ಲಾ, ಶಾಂತಲಾ ಧರ್ಮರಾಜ್, ಸದಾಶಿವ ಶೆಣೈ, ವೆಂಕಟೇಶ್, ಬಾಲಸುಬ್ರಹ್ಮಣ್ಯಂ, ರಮೇಶ್, ಮೃತ್ಯುಂಜಯ, ಷಣ್ಮುಗಪ್ಪ, ದಿನೇಶ್‌ರವರನ್ನು ನೆನೆದರು. ಶ್ರೀಧರ್‌ರವರು ಬಹಳ ವರ್ಷಗಳಿಂದ ಪ್ರೆಸ್ ಕ್ಲಬ್ ಬೆಳವಣಿಗೆಗೆ ಶ್ರಮಿಸಿದ್ದಾರೆಂದರು.
ಮಾಜಿ ಸಚಿವ ಸಿ.ಎಸ್. ಪುಟ್ಟರಾಜುರವರು ಮಾತನಾಡುತ್ತಾ, ಪತ್ರಿಕಾ ಮಾಧ್ಯಮ ಮಹತ್ತರವಾದ ಜವಾಬ್ದಾರಿ ನಿರ್ವಹಿಸದೇ ಇದ್ದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು. ಮಾಧ್ಯಮಗಳು ಜನರು ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಪುಟ್ಟರಾಜು, ಸಪ್ತಗಿರಿ ಗೌಡ್ರು, ದಯಾನಂದ್, ಅಶೋಕ್ ಕುಮಾರ್, ಶ್ರೀಧರ್, ಶಿವಕುಮಾರ್ ಬೆಳ್ಳಿತಟ್ಟೆ, ಪ್ರೆಸ್ ಕ್ಲಬ್ ಪದಾಧಿಕಾರಿಗಳು, ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ನೋಡಿ: ಬಿಹಾರ ಚುನಾವಣೇ | “ವಿಶೇಷ ತೀವ್ರ ಪರಿಷ್ಕರಣೆ”ಎನ್‌ಡಿಎ ಕೂಟದ ಹೊಸ ನಾಟಕ Janashakthi Media
