ರಾಣೇಬೆನ್ನೂರು: ಶಿಕ್ಷಣದ ಬಲವರ್ಧನೆಗೆ ವಿದ್ಯಾರ್ಥಿ ಚಳುವಳಿ ಬಲಗೊಳ್ಳಬೇಕು ಎಂದು ವಕೀಲ ಮೃತ್ಯಂಜಯ ಗುದಿಗೇರ ಕರೆ ನೀಡಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನ ಸದಸ್ಯತ್ವ ಅಭಿಯಾನಕ್ಕೆ” ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಆಳವಾದ ಅಧ್ಯಯನಕ್ಕೆ ಮುಂದಾಗಬೇಕು. ಊರು, ಕುಟುಂಬ, ದೇಶ, ಸಮಾಜದ ಬಗ್ಗೆ ಕಳಕಳಿ ಹೊಂದಬೇಕು ಅಭ್ಯಾಸ ಜೊತೆಯಲ್ಲಿ ಹೋರಾಟ ನಡೆಸುತ್ತಾ ಶಿಕ್ಷಣದ ಬಲವರ್ಧನೆಗೆ ಮುಂದಾಗಬೇಕು ಆ ಮೂಲಕ ದೇಶ ಕಟ್ಟಲು ಆಶ್ರಯಾಗಬೇಕು. ಹೋರಾಟಗಳು ಮುಖ್ಯವಾಗಬೇಕು, ಶಿಕ್ಷಣ ಎಲ್ಲರಿಗೂ ಸಿಗುವಂತೆ ಹೋರಾಟ ನಡೆಸಿ ಅನ್ಯಾಯವನ್ನು ಪ್ರಶ್ನೆಸುವ ಮನೋಭಾವ ಬಳಸಿಕೊಳ್ಳಿ ವಿದ್ಯಾರ್ಥಿಗಳು ತಮ್ಮ ಅನ್ಯಾಯಕ್ಕೆ ನ್ಯಾಯವನ್ನು ಕಂಡುಕೊಳ್ಳಲು ಹೋರಾಟದಿಂದ ಮಾತ್ರ ಸಾದ್ಯ ಎಂದರು.
ಇದನ್ನೂ ಓದಿ:ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಎಸ್‌ಎಫ್‌ಐ ಬೃಹತ್ ಪ್ರತಿಭಟನೆ
ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಾದ ಬಸ್ಸ್, ಸ್ಕಾಲರ್ಶಿಪ್, ಹಾಸ್ಟೆಲ್, ಗ್ರಂಥಾಲಯ, ಕುಡಿಯುವ ನೀರು, ಪಠ್ಯಕ್ರಮ ಹಲವಾರು ಸಮಸ್ಯೆಗಳ ಇತ್ಯರ್ಥಕ್ಕೆ ಸೇರಿದಂತೆ ಸೌಹಾರ್ದತೆಯ ಸ್ನೇಹ ಐಕ್ಯತೆಯಿಂದ ಈ ದೇಶ ನಾಡು ನುಡಿ, ಶಿಕ್ಷಣದ ಉಳಿವಿಗಾಗಿ ಹೋರಾಟದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಎಸ್ಎಫ್ಐ ವಿದ್ಯಾರ್ಥಿ ಚಳುವಳಿ ಸೇರಿರಿ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸೋಣ, ಕ್ಯಾಂಪಸ್ ಡೆಮಾಕ್ರಸಿ ಗಟ್ಟಿಗೊಳಿಸೋಣ ಎಂದು ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಪನ್ಯಾಸಕರಾದ ಎಚ್.ಎಂ.ದೊಡ್ಡಬಿಲ್ಲಾ, ಚುಂದು ನಾಯಕ ಮಾತನಾಡಿ, ಎಸ್ಎಫ್ಐ ವಿದ್ಯಾರ್ಥಿ ಚಳುವಳಿ ಹೆಮ್ಮರವಾಗಿ ಬೆಳೆಯಲ್ಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ವಿದ್ಯಾರ್ಥಿಗಳು ಅಸಂಘಟಿತರಾಗಿ. ಸಂಘಟನೆ ಮೂಲಕ ಶಿಕ್ಷಣದ ಹಕ್ಕುಗಳನ್ನು ಪಡೆಯಬೇಕು ಕಾಲೇಜ್ ಅಭಿವೃದ್ಧಿ ಮಂಡಳಿ ಮೂಲಕ ಕಾಲೇಜಿನ ಅಭಿವೃದ್ಧಿಗಾಗಿ ನಿಮಗೆ ಕೈ ಜೋಡಿಸುತ್ತೇವೆ ಎಂದು ಶುಭಕೋರಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಮಂಜುನಾಥ, ಎಂ.ಎಂ. ಮುಲ್ಲಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಶ್ರೀಧರ ಸಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ತಾಲೂಕು ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ ಮಾತನಾಡಿದರು.
ಮುಖಂಡರಾದ ಪ್ರಜ್ವಲ್ ಶಿವಣ್ಣನವರ, ಎಸ್ಎಫ್ಐ ತಾಲೂಕು ಸಹಕಾರ್ಯದರ್ಶಿ ಹರ್ಷ ಹೊಂಗಲ್, ಅಕ್ಷಯಕುಮಾರ್ ಹುಲ್ಲತ್ತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದರು ಎಂದು ತಾಲೂಕು ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ ತಿಳಿಸಿದ್ದಾರೆ.