ನವದೆಹಲಿ: ಸಿಪಿಐ(ಎಂ) ಪಕ್ಷದ ಜಾನ್ ಬ್ರಿಟಾಸ್ ಮತ್ತು ಡಾ. ವಿ ಶಿವದಾಸನ್ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರಿಬ್ಬರಿಗೂ ಉಪರಾಷ್ಟ್ರಪತಿಗಳು ಹಾಗೂ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಪ್ರಮಾಣ ವಚನವನ್ನು ಬೋಧಿಸಿದರು.
ಇದನ್ನು ಓದಿ: ಡಿಜಿಟಲ್ ಕಲಿಕೆಗೆ ತೊಡಕಾಗದಂತೆ ತುರ್ತು ಕ್ರಮಗಳ ಪರಿಹಾರಕ್ಕೆ ಪ್ರಯತ್ನ: ಪಿಣರಾಯಿ ವಿಜಯನ್
ಕೇರಳ ರಾಜ್ಯದಿಂದ ರಾಜ್ಯಸಭಾ ಸದಸ್ಯರಾದ ಹಿರಿಯ ಪತ್ರಕರ್ತರೂ ಆಗಿದ್ದ ಜಾನ್ ಬ್ರಿಟಾಸ್ ಅವರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಎಡಪಂಥೀಯ ಪತ್ರಿಕೋದ್ಯಮದಲ್ಲಿ ಪರಿಚಿತರಾಗಿರುವವರು. ಬ್ರಿಟಾಸ್ ತಮ್ಮ 22ನೇ ವಯಸ್ಸಿನಲ್ಲಿ ದೇಶಭಕ್ತ ಬರಹಗಾರದಿಂದ ಖ್ಯಾತಿಯನ್ನು ಗಳಿಸಿದ್ದರು. ಪತ್ರಿಕಾ ರಂಗದಲ್ಲಿ ಹಲವು ವರ್ಷಗಳ ಕಾಲ ಅವರು ದೆಹಲಿಯನ್ನು ಪ್ರತಿನಿಧಿಸಿ ಕಾರ್ಯನಿರ್ವಹಿಸಿದ್ದವರು.
ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರಾದ ಡಾ. ವಿ ಶಿವದಾಸನ್ ಜನತೆ ನಡುವಿನ ಹೋರಾಟದ ಮೂಲಕ ಅವರು ನಿರಂತರವಾಗಿ ಚಳುವಳಿಯೊಂದಿಗೆ ಗುರುಸಿಕೊಂಡಿದ್ದವರು. ಪಾಲಾ ಸರ್ಕಾರ ಶಾಲೆಯಲ್ಲಿ ವಿದ್ಯಾಭ್ಯಾಸದ ಸಂದರ್ಭದಲ್ಲಿಯೇ ಅವರು ವಿದ್ಯಾರ್ಥಿ ಸಂಘಟನೆಯ ಮೂಲಕ ಹೋರಾಟಗಳನ್ನು ಸಂಘಟಿಸಿದವರು.
ಆರೋಗ್ಯ ಸಮಸ್ಯೆಗಳಿಂದಾಗಿ ಪಿವಿ ಅಬ್ದುಲ್ ವಹಾಬ್ ಅವರು ಇಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಿಲ್ಲ.