ಬೆಂಗಳೂರು | ಹೃದಯಾಘಾತ ಸಂಭವಿಸಿ ಖ್ಯಾತ ನಿರ್ದೇಶಕ  ಜೋ ಸೈಮನ್  ನಿಧನ

ಬೆಂಗಳೂರು : ಹೃದಯಾಘಾತ ಸಂಭವಿಸಿ ಖ್ಯಾತ ಕನ್ನಡ ಸಿನಿಮಾ ನಿರ್ದೇಶಕ  ಜೋ ಸೈಮನ್  ನಿಧನರಾಗಿದ್ದಾರೆ.80 ವರ್ಷ ವಯಸ್ಸಾಗಿದ್ದ ಅವರು ಫಿಲಂ ಚೇಂಬರ್ ನ ಸಭೆಯಲ್ಲಿ ಭಾಗಿಯಾಗಿದ್ದ ವೇಳೆಯೇ ಮೃತಪಟ್ಟಿದ್ದಾರೆ. ಕುಸಿದು ಬಿದ್ದ ಜೋಸೆಮನ್ ರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ವೇಳೆ ಅಲ್ಲಿದ್ದ ಸದಸ್ಯರುಅವರನ್ನು ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ದರು. ಇಂದು ಬೆಂಗಳೂರಿನ ಫಿಲಂ ಚೇಂಬರ್ ನಲ್ಲಿ ಸಭೆ ಆಯೋಜಿಸಲಾಗಿತ್ತು ಆರೋಗ್ಯದ ನಡುವೆಯೇ ಸಭೆಗೆ ಹಾಜರಾಗಿದ್ದ ಜೋ ಸೈಮನ್‌ ಏಕಾಏಕಿ ಕುಸಿದು ಬಿದ್ದರು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಜೋಸೈಮನ್ ನಿಧನರಾಗಿದ್ದರು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ನಾಯಕನಿಗೆ ರಾಜ್ಯ ಸಚಿವರ ಸ್ಥಾನಮಾನ ಹಿಂಪಡೆದ ರಾಜ್ಯ ಸರ್ಕಾರ

ಹಲವು ದಶಕಗಳ ಕಾಲ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ವಿಭಿನ್ನ ಶೈಲಿ ಮತ್ತು ಸಾಹಸ ಪ್ರಧಾನ ಕಥೆಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು.

ವಿಷ್ಣುವರ್ಧನ್ ಅವರ ಆಕ್ಷನ್ ಇಮೇಜ್ ಅನ್ನು ಮತ್ತಷ್ಟು ಬಲಪಡಿಸಿದ ನಿರ್ದೇಶಕರಲ್ಲಿ ಜೋ ಸೈಮನ್ ಪ್ರಮುಖರು. ನಟ ವಿಷ್ಣುವರ್ಧನ್ ಅವರಿಗೆ “ಸಾಹಸ ಸಿಂಹ” ಎಂಬ ಬಿರುದನ್ನು ನೀಡಿದವರು ಜೋ ಸೈಮನ್ ಎಂಬುದು ವಿಶೇಷ. ಅವರಿಬ್ಬರ ಜೊತೆಯ ಕೆಲಸ ಹಲವು ಹಿಟ್ ಚಿತ್ರಗಳನ್ನು ನೀಡಿತ್ತು

ಜೋ ಸೈಮನ್ ನಿರ್ದೇಶನದ ಸಾಹಸ ಸಿಂಹ, ಹಾಂಕಾಂಗ್‌ನಲ್ಲಿ ಏಜೆಂಟ್ ಅಮರ್, ಸಿಂಹ ಜೋಡಿ, ಸ್ನೇಹದ ಕಡಲಲ್ಲಿ, ರವಿವರ್ಮ, ಊರಿಗೆ ಉಪಕಾರಿ ಸೇರಿದಂತೆ ಹಲವು ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ. ಈ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡು, ಅವರ ನಿರ್ದೇಶನದ ಕೌಶಲ್ಯಕ್ಕೆ ಸಾಕ್ಷಿಯಾಗಿವೆ.

ನಟ ಅಂಬರೀಶ್ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಜೋ ಸೈಮನ್ ಅವರ ಜೊತೆ ಕೆಲಸ ಮಾಡಿದ್ದರು. ಅವರು ಕಲಾವಿದರೊಂದಿಗೆ ಸ್ನೇಹಭಾವದಿಂದ ವರ್ತಿಸಿ, ಕಥೆಗೆ ತಕ್ಕಂತೆ ಅವರ ಅಭಿನಯವನ್ನು ಹೊರತಂದ ನಿರ್ದೇಶಕರಾಗಿ ಹೆಸರು ಮಾಡಿದ್ದರು.

ಜೋ ಸೈಮನ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದೆ. ಅವರ ಸಿನಿಮಾಗಳು ಮತ್ತು ನೆನಪುಗಳು ಸದಾ ಸಿನಿಪ್ರೇಕ್ಷಕರ ಮನದಲ್ಲಿ ಜೀವಂತವಾಗಿರುತ್ತವೆ.

ಇದನ್ನೂ ನೋಡಿ : “ಮ್ಯಾಗ್ನೆಟ್ ಯೋಜನೆಗೆ ವಿರೋಧ – ಆಂದೋಲನವಾಗುತ್ತಿರುವ ಸರ್ಕಾರಿ ಶಾಲೆ ಉಳಿಸಿ ಹೋರಾಟ” Janashakthi Media

Donate Janashakthi Media