ಹಣದುಬ್ಬರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡ ಜೋ ಬೈಡನ್‌

ವಾಷಿಂಗ್ಟನ್‌: ಹಣದುಬ್ಬರ ಕುರಿತು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಾಳ್ಮೆ ಕಳೆದುಕೊಂಡು ನಿಂದಿಸಿರುವ ಘಟನೆ ನಡೆದಿದೆ. ಸೋಮವಾರ ಪತ್ರಿಕಾಗೋಷ್ಠಿಯ ನಂತರ ಪತ್ರಕರ್ತರು ಕೊಠಡಿಯಿಂದ ಹೊರಬರುವ ಸಂದರ್ಭದಲ್ಲಿ ʻಫಾಕ್ಸ್‌ ನ್ಯೂಸ್‌ʼನ ವರದಿಗಾರ ಅಧ್ಯಕ್ಷ ಜೋ ಬೈಡನ್‌ ಅವರನ್ನು ಹಣದುಬ್ಬರವು ರಾಜಕೀಯ ಹೊಣೆಗಾರಿಕೆಯೇ ಎಂದು ಪ್ರಶ್ನೆ ಮಾಡಿದರು. ಇದರಿಂದ ಆಕ್ರೋಶಗೊಂಡ ಅಧ್ಯಕ್ಷ ಬೈಡನ್‌ ಕೆಟ್ಟದಾಗಿ ನಿಂದನೆ ಮಾಡಿದ್ದಾರೆ.

ತಮ್ಮ ಮೈಕ್ರೋಫೋನ್‌ ಆಫ್‌ ಆಗಿದೆ ಎಂದುಕೊಂಡಿದ್ದ ಜೋ ಬೈಡನ್‌, ಮೊದಲೇ ಪತ್ರಕರ್ತರ ಪ್ರಶ್ನೆಗೆ ಉದ್ವೇಗಕ್ಕೆ ಒಳಗಾಗಿದ್ದರು. ಈ ವೇಳೆ ಫಾಕ್ಸ್‌ ನ್ಯೂಸ್‌ ನ ವರದಿಗಾರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ʻʻಹಣದುಬ್ಬರ ಅನ್ನೋದು ಡೊಡ್ಡ ಆಸ್ತಿಯೇʼʼ ಎಂದು ಕಿಡಿಕಾಡಿದ್ದಾರೆ. ಬಳಿಕ ಕೆಳಗೆ ನೋಡುತ್ತಾ ಆಶ್ಲೀಲವಾಗಿ (ʻʻWhat a stupid son of a b*tch.’’) ಬೈದಿದ್ದಾರೆ. ಇದು ಕ್ಯಾಮೆರಾ ವಿಡಿಯೋದೊಂದಿಗೆ ರೆಕಾರ್ಡ್‌ ಸಹ ಆಗಿದೆ.

ಈ ರೀತಿಯಾಗಿ ಅಮೆರಿಕದ ಅಧ್ಯಕ್ಷ ಮಾತನಾಡಿದಾಗ ಫಾಕ್ಸ್‌ ನ್ಯೂಸ್‌ ಪತ್ರಕರ್ತ ಪೀಟರ್‌ ಡೋಸ್ಸಿ ಕೂಡ ಅದೇ ಕೋಣೆಯಲ್ಲಿದ್ದರು. ಆದರೆ ಕೊಠಡಿಯಲ್ಲಿ ಗದ್ದಲವಿದ್ದ ಕಾರಣ ಅಧ್ಯಕ್ಷರು ಏನು ಹೇಳಿದರೂ ಕೇಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರೆ. ಆದರೆ, ಹಣದುಬ್ಬರ ವಿಚಾರದಲ್ಲಿ ಜೋ ಬೈಡನ್‌ ಪ್ರತಿಕ್ರಿಯೆ ಏನೆಂಬುದನ್ನು ತಿಳಿಯಬೇಕಾದರೆ ಈ ವಿಡಿಯೋ ನೋಡಬಹುದಾಗಿದೆ ಎಂದು ಪತ್ರಕರ್ತರು ಹೇಳಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *