ನವದೆಹಲಿ: 2024–25ನೇ ಸಾಲಿನ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಚುನಾವಣೆ ಮುಗಿದಿದ್ದು, ಶೇ 70ರಷ್ಟು ಮತದಾನವಾಗಿದೆ.
ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣಾ ಸಮಿತಿ ಪ್ರಕಾರ ಶೇ 69.6ರಷ್ಟು ವಿದ್ಯಾರ್ಥಿಗಳು ಹಕ್ಕು ಚಲಾಯಿಸಿದರು. 2023ರಲ್ಲಿ ಶೇ 73ರಷ್ಟು ಮತದಾನವಾಗಿತ್ತು.
ಇದನ್ನೂ ಓದಿ: ಇನ್ಮುಂದೆ ಅನಧಿಕೃತ, ಅಕ್ರಮ ಬಡಾವಣೆ ನಿರ್ಮಾಣ ಮಾಡಿದ್ರೆ ಮುಟ್ಟುಗೋಲು: ಸಚಿವ ಕೃಷ್ಣಭೈರೇಗೌಡ
7,906 ವಿದ್ಯಾರ್ಥಿಗಳಲ್ಲಿ 5,500 ವಿದ್ಯಾರ್ಥಿಗಳು ಮತದಾನಕ್ಕೆ ಅರ್ಹರಾಗಿದ್ದರು. ಒಟ್ಟು 42 ಕೌನ್ಸೆಲರ್ ಸ್ಥಾನಗಳಿಗೆ 200 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತಎಣಿಕೆ ಪ್ರಕ್ರಿಯೆಯು ಶುಕ್ರವಾರ ರಾತ್ರಿ ಆರಂಭವಾಗಿದೆ. ಕೌನ್ಸೆಲರ್‌ಗಳ ಸ್ಥಾನದ ಫಲಿತಾಂಶ ಮೊದಲಿಗೆ ಪ್ರಕಟವಾಗಲಿದೆ. ಅಂತಿಮ ಫಲಿತಾಂಶ ಸೋಮವಾರ, ಏ. 28ರಂದು ಹೊರಬೀಳುವ ಸಂಭವವಿದೆ.
ಇದನ್ನೂ ನೋಡಿ: ಶಾಂತಿ ಸ್ಥಾಪಿಸುವ ಬದಲು ಪ್ರಚೋದಿಸುತ್ತಿರುವ ಗೋಧಿ ಮೀಡಿಯಾ ಬಗ್ಗೆ ಕಾಶ್ಮೀರಿ ಜನರ ಆಕ್ರೋಶ Janashakthi Media