ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆ: ಅತೀ ಹೆಚ್ಚು ಮತ ಪಡೆದ ಕರ್ನಾಟಕ ಮೂಲದ ವಿದ್ಯಾರ್ಥಿನಿ ಗೌರಿ

ದೆಹಲಿ : ಜೆನಯು ವಿದ್ಯಾರ್ಥಿ ಚುನಾವಣೆಯಲ್ಲಿ ಕರ್ನಾಟಕದ ವಿದ್ಯಾರ್ಥಿನಿ ಗೌರಿ School of Social Science (SSS)ನಲ್ಲಿ ಕೌನ್ಸಿಲರ್ ಸ್ಥಾನದಲ್ಲಿ ಗರಿಷ್ಠ ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾಳೆ. 5 ಕೌನ್ಸಿಲರ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೌರಿ ಇತರರಗಿಂತ ಅತಿ ಹೆಚ್ಚು ಅಂದರೆ, ಒಟ್ಟು 1200 ಮತಗಳಲ್ಲಿ, ಸುಮಾರು 723 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ . ದೆಹಲಿ 

ಇದನ್ನೂ ಓದಿ : JNUSU 2025 : ಮೂರು ಸ್ಥಾನಗಳಲ್ಲಿ ಎಡ ಒಕ್ಕೂಟ ಮುನ್ನಡೆ; ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇರ ಸ್ಪರ್ಧೆ

ಎಂಎ ಸಮಾಜಶಾಸ್ತ್ರದ ವಿದ್ಯಾರ್ಥಿನಿಯಾದ ಗೌರಿ, ಎಡಪಂಥಿಯ “ಕಲೆಕ್ಟಿವ್” ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತೆ. ಗೌರಿಯ ಪ್ರಾಮಾಣಿಕತೆ ಮತ್ತು ಸೈದ್ಧಾಂತಿಕ ಬದ್ಧತೆಯಿಂದ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ತನ್ನ ಅಭ್ಯಾಸದ ಜೊತೆ ತನ್ನ ವಿಶ್ವವಿದ್ಯಾಲಯ ಮತ್ತು ದೇಶದ ಜ್ವಲಂತ ಸಮಸ್ಯೆಗಳ ಹೋರಾಟಗಳಲ್ಲೂ  ಗೌರಿ ಸಕ್ರಿಯರಾಗಿದ್ದಾರೆ.

1999ರಲ್ಲಿ ಬಳ್ಳಾರಿ ಮೂಲದ ಸಯ್ಯದ್ ನಾಸಿರ್ ಹುಸೆನ್ JNU ವಿದ್ಯಾರ್ಥಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ SFI ಯಿಂದ ಸ್ಫರ್ಧಿಸಿ ವಿಜಯಶಾಲಿಯಾಗಿದ್ದರು. ತದನಂತರ ಕರ್ನಾಟಕದಿಂದ ಯಾರು ಕೂಡ JNU ವಿದ್ಯಾರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಿರಲಿಲ್ಲ.  ಗೌರಿಯ ಗೆಲುವು ಕರ್ನಾಟಕದ ಎಡ ಚಳುವಳಿ ಬೆಳವಣಿಗೆಗೆ ಸ್ಪೂರ್ತಿ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ನೋಡಿ : ಬಿಹಾರ ಚುನಾವಣೆ | ಭರಪೂರ ಭರವಸೆ -ಬದಲಾವಣೆಯತ್ತ ಮತದಾರರ ಒಲವು Janashakthi Media | Bihar Election 2025

Donate Janashakthi Media

Leave a Reply

Your email address will not be published. Required fields are marked *