ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿ ಸಂಭವಿಸಿದ ಜಿಲೆಟಿನ್ ಸ್ಫೋಟ ದುರಂತಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಿಜೆಪಿ ಮುಖಂಡ, ಗುಡಿಬಂಡೆ ನಾಗರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಫೋಟಗೊಂಡ ಹಿರೇನಾಗವೇಲಿ ಬಳಿಯ ಕ್ವಾರಿಯ ಮಾಲೀಕರಲ್ಲೊಬ್ಬನಾದ ಪ್ರಮುಖ ಆರೋಪಿ ಬಿಜೆಪಿ ಮುಖಂಡ ಹಾಗೂ ದಕ್ಷಿಣ ರೈಲ್ವೆ ಸಲಹಾ ಸಮಿತಿ ಸದಸ್ಯ ಗುಡಿಬಂಡೆ ನಾಗರಾಜ್‌ನನ್ನು ಪೊಲೀಸರು ಬಂಧಿಸಿದ್ದು, ನಾಗರಾಜ್ ಜೊತೆ ಬಾಂಬ್ ಸ್ಫೋಟಕಕಾರ ತಮಿಳುನಾಡು ಮೂಲದ ಗಣೇಶ್ ಎಂಬಾತನನ್ನೂ ಬಂಧಿಸಲಾಗಿದೆ. ಒಟ್ಟು ಈವರೆಗೆ 8 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ : ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಯಾವಾಗ? ಕಲ್ಲು ಕ್ವಾರಿಯ ಕರಾಳತೆ ಹೇಗಿದೆ?
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನೂ ಸಸ್ಪೆಂಡ್ ಮಾಡಲಾಗಿದ್ದು, ಗುಡಿಬಂಡೆ ಸಬ್ ಇನ್ಸ್ಪೆಕ್ಟರ್ ಗೋಪಾಲ ರೆಡ್ಡಿ ಮತ್ತು ಇನ್ಸಪೆಕ್ಟರ್ ಮಂಜುನಾಥ್ ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿಗಳು. ಇನ್ನು ಬಂಧಿಸಲ್ಪಟ್ಟಿರುವ ಉಳಿದ 8 ಆರೋಪಿಗಳ ಪೈಕಿ ಪ್ರಮುಖ ಆರೋಪಿ ನಾಗರಾಜ್ ,ರಿಯಾಜ್ , ಮಧುಸೂದನ್ ರೆಡ್ಡಿ , ಪ್ರವೀಣ್ , ವೆಂಕಟೇಶ ರಡ್ಡಿ , ರಾಘವೇಂದ್ರ ರಡ್ಡಿ, ಗಣೇಶ್ ಮತ್ತು ವೆಂಕಟಶಿವರೆಡ್ಡಿ ಸೇರಿದ್ದಾರೆ.
ಗುಡಿಬಂಡೆ ನಾಗರಾಜ್, ರಾಘವೇಂದ್ರ, ಗಂಗೋಜಿರಾವ್, ಮತ್ತೋರ್ವ ಸೇರಿದಂತೆ ನಾಲ್ವರ ಒಡೆತನದ ಭ್ರಮರ ವರ್ಷಿಣಿ ಕ್ವಾರಿಗೆ ಫೆಬ್ರವರಿ 7ರಂದು ದಾಳಿ ನಡೆಸಿ ಅಕ್ರಮ ಸ್ಫೋಟಕ ಜಪ್ತಿ ಮಾಡಿ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.