ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಬಂಧನ

  • ವದಗಾಂ ಕ್ಷೇತ್ರದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಬಂಧನ
  • ಅಸ್ಸಾಂನಲ್ಲಿ ಮೇವಾನಿ ವಿರುದ್ಧ ವಿವಿಧ ಪ್ರಕರಣಗಳು ದಾಖಲು
  • ಬಂಧನಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ

ಅಹಮದಾಬಾದ್: ಗುಜರಾತ್‌ ಶಾಸಕ, ದಲಿತ ಮುಖಂಡ  ಅವರನ್ನು ಗುಜರಾತ್‌ನ ಪಾಲಂಪುರ್‌ನಲ್ಲಿನ ಸರ್ಕೀಟ್ ಹೌಸ್‌ನಲ್ಲಿ ಬುಧವಾರ ರಾತ್ರಿ ಅಸ್ಸಾಂ  ಪೊಲೀಸರು ಬಂಧಿಸಿದ್ದಾರೆ. ಅವರನ್ನು ರಾತ್ರಿ ಅಹಮದಾಬಾದ್‌ಗೆ ಕರೆದೊಯ್ಯಲಾಗಿದ್ದು, ಗುರುವಾರ ಅಸ್ಸಾಂಗೆ ಕರೆದೊಯ್ದಿದ್ದಾರೆ.

ದಲಿತ ಮುಖಂಡರಾಗಿ ಗುರುತಿಸಿಕೊಂಡಿರುವ, ರಾಷ್ಟ್ರೀಯ ದಲಿತ ಅಧಿಕಾರ್ ಮೋರ್ಚಾ ರಾಜಕೀಯ ಪಕ್ಷದ ಸಂಚಾಲಕರೂ ಆಗಿರುವ ಜಿಗ್ನೇಶ್ ಮೇವಾನಿ ಅವರ ಬಂಧನದ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಧಿಕಾರಿಗಳ ಮನವಿ ಮೇರೆಗೆ ಟ್ವಿಟ್ಟರ್ ಸಂಸ್ಥೆಯು ಅವರು ಮಾಡಿದ್ದ ಇತ್ತೀಚಿನ ಕೆಲವು ಟ್ವೀಟ್‌ಗಳನ್ನು ತಡೆಹಿಡಿದಿತ್ತು.

ತಮಗೆ ಎಫ್‌ಐಆರ್ ಪ್ರತಿ ಅಥವಾ ಪೊಲೀಸ್ ಪ್ರಕರಣದ ಪ್ರತಿ ಇದುವರೆಗೂ ದೊರಕಿಲ್ಲ ಎಂದು ಮೇವಾನಿ ಅವರ ಸಹವರ್ತಿಗಳು ತಿಳಿಸಿದ್ದಾರೆ. ಅವರನ್ನು ಗುವಾಹಟಿಗೆ ಕರೆದೊಯ್ದ ಬಳಿಕ ಎಫ್‌ಐಆರ್ ಪ್ರತಿ ಲಭ್ಯವಾಗುವ ನಿರೀಕ್ಷೆ ಇದ್ದು, ಅವರ ಬಂಧನಕ್ಕೆ ಸ್ಪಷ್ಟ ಕಾರಣ ತಿಳಿಯಲಿದೆ. ಅವರ ವಿರುದ್ಧ ಅಸ್ಸಾಂನಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಗುಜರಾತ್ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಮೇವಾನಿ ಅವರು ನಿರಂತರ ವಾಗ್ದಾಳಿಗಳನ್ನು ನಡೆಸುತ್ತಿದ್ದರು. ಅಸ್ಸಾಂನ ಕೊಕ್ರಾಜಾರ್ ಜಿಲ್ಲೆಯ ಪೊಲೀಸರ ತಂಡವೊಂದು ರಾತ್ರಿ 11.30ರ ವೇಳೆಗೆ ಸರ್ಕೀಟ್ ಹೌಸ್‌ನಿಂದ ಬಂಧಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *