ತಪಾಸಣೆ ವೇಳೆ ನಡೆದ ದುರ್ಘಟನೆ : ಮಹಿಳಾ ಪೊಲೀಸ್‌ ಅಧಿಕಾರಿ ಮೇಲೆ ಹರಿದ ಪಿಕಪ್‌ ವಾಹನ

ರಾಂಚಿ: ಗಣಿಗಾರಿಕೆ ಮಾಫಿಯಾಗೆ ಪೊಲೀಸ್​ ಅಧಿಕಾರಿಯೊಬ್ಬರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಪಾಸಣೆಯ ವೇಳೆ ಪಿಕಪ್​ ವಾಹನ ಹರಿಸಿ, ಮಹಿಳಾ ಸಬ್​​ ಇನ್ಸ್​ಪೆಕ್ಟರ್​ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್​ ರಾಜಧಾನಿ ರಾಂಚಿಯಲ್ಲಿ ಜುಲೈ 20ರಂದು ನಡೆದಿದೆ.

ಬುಧವಾರ ಬೆಳಗ್ಗೆ ನಸುಕಿನ ಜಾವದಲ್ಲಿ ತುಪುದನಾ ಏರಿಯಾದಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೃತ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಸಂಧ್ಯಾ ತೊಪ್ನೋ ಎಂದು ಗುರುತಿಸಲಾಗಿದೆ. ಡಿಸಿಪಿ ಶ್ರೇಣಿಯ ಹರಿಯಾಣ ಪೊಲೀಸ್​ ಅಧಿಕಾರಿ ಸುರೇಂದ್ರ ಸಿಂಗ್​ ಅವರು ನುಹ್​ ಏರಿಯಾದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಮಾಫಿಯಾವನ್ನು ತಡೆಯಲು ಹೋದಾಗ ಅವರ ಮೇಲೆ ಟ್ರಕ್​ ಹರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಈ ಘಟನೆ ನಡೆದ ಒಂದು ದಿನದ ಬೆನ್ನಲ್ಲೇ ರಾಂಚಿಯಲ್ಲಿ ಅದೇ ರೀತಿಯ ಘಟನೆ ನಡೆದಿದೆ.

ಇದನೂ ಓದಿ: ಗಣಿಗಾರಿಕೆ ತಡೆಯಲು ಹೋದ ಪೊಲೀಸ್ ಅಧಿಕಾರಿ ಮೇಲೆ ಹರಿದ ಲಾರಿ

ಸಂಧ್ಯಾ ಅವರ ಮೇಲೆ ಪಿಕಪ್​ ವಾಹನ ಹರಿಸಿ, ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿ ನೆರವಿನಿಂದ ಪೊಲೀಸರು ಬಂಧಿಸಿದ್ದು, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಧ್ಯಾ ಅವರು ತುಪುದುನಾ ಹೊರ ವಲಯದ ಉಸ್ತುವಾರಿ ವಹಿಸಿದ್ದರು ಎಂದು ರಾಂಚಿಯ ಎಸ್​ಎಸ್​ಪಿ ತಿಳಿಸಿದ್ದಾರೆ. ಸಂಧ್ಯಾ ಅವರ ಸಾವಿಗೆ ಜಾರ್ಖಂಡ್​ ಪೊಲೀಸ್​ ಇಲಾಖೆ ಕಂಬನಿ ಮಿಡಿದಿದೆ. ಸಂಧ್ಯಾ ಕುಟುಂಬದಲ್ಲೂ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *