ಬೆಂಗಳೂರು: ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೋಗುವ ವೇಳೆ ಕ್ಯಾಬ್‌ನಲ್ಲಿ ಬಂದ ಪಾನಮತ್ತ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕ್ಯಾಬ್ ಚಾಲಕ ಅತ್ಯಾಚಾರ ನಡೆಸಿದ ಹೀನ ಕೃತ್ಯವು ಮಂಗಳವಾರ ರಾತ್ರಿ ಪೂರ್ವ ವಿಭಾಗ ವ್ಯಾಪ್ತಿಯಲ್ಲಿ ನಡೆದಿದೆ.
ಪಾರ್ಟಿ ಮುಗಿಸಿ ಮಲ್ಲೇಶ್‌ಪಾಳ್ಯದಲ್ಲಿರುವ ಮನೆಗೆ ಹೋಗಲು ಯುವತಿಯು ಕ್ಯಾಬ್ ಹತ್ತಿದಳು. ಕ್ಯಾಬ್ ಚಾಲಕ ಯುವತಿ ಪಾನಮತ್ತಳಾಗಿರುವುದನ್ನು ಗಮನಿಸಿ ಆಕೆಯನ್ನು ಆಕೆ ಬುಕ್ ಮಾಡಿದ್ದ ಜಾಗಕ್ಕೆ ಕರೆದುಕೊಂಡು ಹೋಗದೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಚಾರ ಎಸಗಿದ್ದಾನೆ. ಈ ಸಂಬಂಧ ಜೀವನ್‌ಭಿಮಾ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ದೂರು ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಆರೋಪಿಯನ್ನು 24 ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಕ್ಯಾಬ್ ಚಾಲಕ ದೇವರಾಜ್ ಎಂಬ ವ್ಯಕ್ತಿಯನ್ನು ಜೀವನ್‌ಭೀಮಾನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.