ದೈನಿಕ್ ಜಾಗರಣ್, ಇಂಡಿಯಾ ಟುಡೇ ಮತ್ತು ರಿಪಬ್ಲಿಕ್‌ ಟಿವಿಗೆ ನೋಟಿಸ್ ಕಳುಹಿಸಿದ ಜೆಡಿಯು ನಾಯಕ ಲಲನ್ ಸಿಂಗ್!

ಪಾಟ್ನಾ: ಜೆಡಿಯು ನಾಯಕ ಲಲನ್‌ ಸಿಂಗ್ ಅವರು ಬಿಹಾರದ ಸಮ್ಮಿಶ್ರ ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ತಪ್ಪಾಗಿ ವರದಿ ಮಾಡಿದ್ದ ದೈನಿಕ್ ಜಾಗರಣ್, ಇಂಡಿಯಾ ಟುಡೇ ಮತ್ತು ರಿಪಬ್ಲಿಕ್ ಟಿವಿಗೆ ಲಲನ್ ಸಿಂಗ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಮಾಧ್ಯಮ ಸಂಸ್ಥೆಗಳಿಗೆ ಕ್ಷಮೆಯಾಚಿಸುವಂತೆ ಅಥವಾ ತಮ್ಮ ವರದಿಗಳಿಗೆ ಪುರಾವೆಗಳನ್ನು ಪ್ರಸ್ತುತಪಡಿಸುವಂತೆ ಲಲನ್ ಸಿಂಗ್ ಅವರು ಕೇಳಿಕೊಂಡಿದ್ದು, ಒಂದು ವೇಳೆ ವಿಫಲವಾದರೆ 15 ದಿನಗಳ ನಂತರ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಲಲನ್ ಸಿಂಗ್ ಅವರು ಶಾಸಕರ ಗುಂಪಿನೊಂಡಿಗೆ ಸಭೆ ನಡೆಸಿದ್ದಾರೆ ಎಂದು ದೈನಿಕ್ ಜಾಗರಣ್, ಇಂಡಿಯಾ ಟುಡೇ ಮತ್ತು ರಿಪಬ್ಲಿಕ್ ಟಿವಿ ಸುಳ್ಳು ವರದಿ ಮಾಡಿದ್ದವು. ಈ ಪಿತೂರಿಯ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ತಿಳಿದಿತ್ತು ಮತ್ತು ಅದಕ್ಕಾಗಿಯೇ ಅವರು ಲಲನ್ ಸಿಂಗ್ ಅವರನ್ನು ಜೆಡಿಯು ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿದ್ದಾರೆ ಎಂದು ವರದಿಗಳು ಹೇಳಿತ್ತು.

ಇದನ್ನೂ ಓದಿ: ಅಯ್ಯಪ್ಪ ವ್ರತಧಾರಿಗಳಿಗೆ ಮಸೀದಿಯಲ್ಲಿ ಆಸರೆ, ಪೂಜೆ ಮಾಡಲು ಅವಕಾಶ

ದೈನಿಕ್ ಜಾಗರಣ್‌ಗೆ ಲಲನ್ ಸಿಂಗ್ ನೀಡಿದ ನೋಟಿಸ್‌ನಲ್ಲಿ ಗ್ರೂಪ್ ಅಧ್ಯಕ್ಷ ಮೋಹನ್ ಗುಪ್ತಾ, ಸಂಪಾದಕ ವಿಷ್ಣು ಪ್ರಕಾಶ್ ತ್ರಿಪಾಠಿ, ಸ್ಥಳೀಯ ಸಂಪಾದಕ ಪ್ರದೀಪ್ ಕುಮಾರ್ ಶುಕ್ಲಾ, ಬಿಹಾರ ಸಂಪಾದಕ ಅಲೋಕ್ ಮಿಶ್ರಾ ಮತ್ತು ಹಲವಾರು ಸಿಬ್ಬಂದಿಯನ್ನು ಹೆಸರಿಸಲಾಗಿದೆ.

ರಿಪಬ್ಲಿಕ್ ನೆಟ್‌ವರ್ಕ್‌ನ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಮತ್ತೊಂದು ನೋಟಿಸ್ ಕಳುಹಿಸಲಾಗಿದ್ದು, ಇಂಡಿಯಾ ಟುಡೇ ಅಧ್ಯಕ್ಷ ಅರೂನ್ ಪುರಿ, ಆಂಕರ್ ಚಿತ್ರಾ ತ್ರಿಪಾಠಿ ಮತ್ತು ಪಾಟ್ನಾ ಬ್ಯೂರೋ ಮುಖ್ಯಸ್ಥ ರೋಹಿತ್ ಕುಮಾರ್ ಅವರಿಗೆ ಮೂರನೇ ನೋಟಿಸ್ ಕಳುಹಿಸಲಾಗಿದೆ.

ಇದನ್ನೂ ಓದಿ: ಮಧ್ಯಪ್ರದೇಶ | ಅಕ್ರಮವಾಗಿ ನಡೆಸುತ್ತಿದ್ದ ಹಾಸ್ಟೆಲ್‌ನಿಂದ 26 ಬಾಲಕಿಯರು ನಾಪತ್ತೆ!

“ನನ್ನ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ನನ್ನ ಕೋರಿಕೆಯ ಮೇರೆಗೆ ಗೌರವಾನ್ವಿತ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಧ್ಯಕ್ಷ ಸ್ಥಾನವನ್ನು ತೊರೆಯಲು ನನಗೆ ಅವಕಾಶ ಮಾಡಿಕೊಟ್ಟರು. ಜೊತೆಗೆ ಅವರೇ ಸ್ವತಃ ಅಧ್ಯಕ್ಷರಾಗಲು ಒಪ್ಪಿಕೊಂಡರು. ಮುಖ್ಯಮಂತ್ರಿಗಳ ಈ ನಿರ್ಧಾರ ನನಗೆ ಸಂತಸದ ವಿಷಯ. ಆದರೆ, ಕೆಲವು ಟಿವಿ ಚಾನೆಲ್‌ಗಳು ಮತ್ತು ಪತ್ರಿಕೆಗಳು ಆಧಾರರಹಿತ ಮತ್ತು ಕಟ್ಟುಕಥೆಗಳನ್ನು ಸೃಷ್ಟಿಸುವ ಮೂಲಕ ನನ್ನ ಇಮೇಜ್‌ಗೆ ಕಳಂಕ ತರಲು ಪ್ರಯತ್ನಿಸಿದವು” ಎಂಧು ಅವರು ಹೇಳಿದ್ದಾರೆ.

”ಪಕ್ಷದಲ್ಲಿ ವಿವಾದ ಸೃಷ್ಟಿಸುವ ಉದ್ದೇಶದಿಂದ ಸುದ್ದಿ ಪ್ರಸಾರ ಮಾಡಲಾಗಿದೆ. ನಾನು ಹುಟ್ಟು ಹಾಕಿ ಬೆಳೆಸಿದ ಪಕ್ಷಕ್ಕೆ ನನ್ನನ್ನು ವಿಲನ್ ಮಾಡಲು ಮಾಧ್ಯಮಗಳು ಪ್ರಯತ್ನಿಸಿದವು. ನನ್ನ ವರ್ಚಸ್ಸು ಹಾಳು ಮಾಡುವ ಉದ್ದೇಶದಿಂದ ಕಪೋಲಕಲ್ಪಿತ ಮತ್ತು ವಾಸ್ತವ ರಹಿತ ಸುದ್ದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಹಿಂದಿ ಸುದ್ದಿ ವಾಹಿನಿ ಆಜ್ ತಕ್, ರಿಪಬ್ಲಿಕ್ ಭಾರತ್ ಮತ್ತು ದೈನಿಕ್ ಜಾಗರಣ್ ಪತ್ರಿಕೆಗಳಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ” ಎಂದು ಅವರ ಹೇಳಿದ್ದಾರೆ.

ವಿಡಿಯೊ ನೋಡಿ: ಕಲಾಸಕ್ತರ ಕಣ್ಮನ ತಣಿಸಿದ ಚಿತ್ರಸಂತೆ : ಹರಿದು ಬಂದ ಕಲಾ ಪ್ರೇಮಿಗಳ ಸಾಗರ Janashakthi Media

Donate Janashakthi Media

Leave a Reply

Your email address will not be published. Required fields are marked *