ಚನ್ನಪಟ್ಟಣ : ಜೆಡಿಎಸ್ ಜನರ ದಾರಿ ತಪ್ಪಿಸುತ್ತಿದ – ಚಲುವರಾಯಸ್ವಾಮಿ

Please follow and like us:
ಚನ್ನಪಟ್ಟಣ: ಜೆಡಿಎಸ್‌ ಪಕ್ಷಕ್ಕಾಗಿ ದುಡಿದ ಹಿರಿಯ ಮುಖಂಡರು ಚನ್ನಪಟ್ಟಣದಲ್ಲಿ ಆಸ್ತಿ ಮಾರಿಕೊಂಡಿದ್ದಾರೆ, ಅವರಿಗೆ ಜೆಡಿಎಸ್ ಏನು ಮಾಡಿಲ್ಲ. ಆ ಪಕ್ಷದಿಂದ ಅಭಿವೃದ್ಧಿ ಹೊಂದಿದ ಉದಾಹರಣೆ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ತಿಳಿಸಿದ್ದಾರೆ.

ನಗರದ ರಾಜಕೆಂಪೇಗೌಡ ಬಡಾವಣೆಯಲ್ಲಿ ಕಾರ್ಯಕರ್ತರು, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು,    ಇಲೂರು ಅಣೆಕಟ್ಟು ಉದ್ಘಾಟನೆ ಮಾಡಿ, ನಾವೇ ಕಟ್ಟಿಸಿದ್ದು ಎಂದೇಳಿ ಜೆಡಿಎಸ್ ನವರು ಚನ್ನಪಟ್ಟಣ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು. ಜನತೆ

ಇದನ್ನೂ ಓದಿ: ವಾಯುಭಾರ ಕುಸಿತದಿಂದ 4 ದಿನ ಭಾರೀ ಮಳೆ: ಐಎಂಡಿ ಎಚ್ಚರಿಕೆ

ಎಚ್.ಡಿ.ದೇವೇಗೌಡರು ಹಿರಿಯರು, ಅವರು ತಿಳಿಹೇಳುವ ಜ್ಞಾನವಿದೆ ಆದರೆ ಅವರ ಮೊಮ್ಮಕ್ಕಳು ಹಾಸನದಲ್ಲಿ 350ರಿಂದ 380 ಒಕ್ಕಲಿಗ ಹೆಣ್ಣುಮಕ್ಕಳ ಕಣ್ಣೀರು ಹಾಕಿಸಿದ್ದಾರೆ.

ಇದು ಸಮುದಾಯಕ್ಕೆ ದುಃಖದ ಸಂಗತಿ ಎಂದು ಬೇಸರಗೊಂಡರು. ದೇವೇಗೌಡರು, ಕುಮಾರಸ್ವಾಮಿ ಚುನಾವಣೆ ಸಲುವಾಗಿ ಯಾರು ಏನೇ ಹೇಳಿದರೂ ಕಿವಿಕೊಡಬೇಡಿ, ಕುಮಾರಸ್ವಾಮಿ ಸಮಕಾಲಿನವರು ಜೆಡಿಎಸ್ ನಲ್ಲಿ ಯಾರು ಉಳಿದಿಲ್ಲ. ಚನ್ನಪಟ್ಟಣ ಅಭಿವೃದ್ಧಿಗೆ ಯೋಗೇಶ್ವರ್ ಗೆಲ್ಲಿಸಿ ಎಂದು ಮನವಿ ಮಾಡಿದರು.

ಇದನ್ನೂ ನೋಡಿ: ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *