ಜೆಡಿಎಸ್ ಗೆ ಪರಿಷತ್ ಸಭಾಪತಿ ಸ್ಥಾನ ಬಿಟ್ಟುಕೊಟ್ಟ ಬಿಜೆಪಿ!?

ಉಪಸಭಾಪತಿ ಚುನಾವಣೆಗೆ ಜೆಡಿಎಸ್ ನಿಂದ ಷರತ್ತು ಬದ್ಧ ಬೆಂಬಲ 

ಬೆಂಗಳೂರು ಜ 28 : ಬಿಜೆಪಿಯಿಂದ ವಿಧಾನಪರಿಷತ್ ಉಪಸಭಾಪತಿ ಸ್ಥಾನಕ್ಕೆ ಎಂ,ಕೆ ಪ್ರಾಣೇಶ್ ಆಯ್ಕೆಯಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಉಪಸಭಾಪತಿ ಸ್ಥಾನಕ್ಕೆ ವಿಧಾನಸೌಧದಲ್ಲಿ ಎಂಕೆ ಪ್ರಾಣೇಶ್ ನಾಮಪತ್ರ ಸಲ್ಲಿಸಲಿದ್ದಾರೆ.

ವಿಧಾನಪರಿಷತ್ ಉಪಸಭಾಪತಿ ಆಯ್ಕೆ ಕುರಿತಂತೆ ಮೇಲ್ಮನೆಯಲ್ಲಿ ಬಿಜೆಪಿಗೆ ಜೆಡಿಎಸ್ ಅನಿವಾರ್ಯವಾಗಿದೆ. ಹಾಗಾಗಿ ಜೆಡಿಎಸ್ ಷರತ್ತು ಬದ್ಧ ಬೆಂಬಲಕ್ಕೆ ಮುಂದಾಗಿದ್ದು ಸಭಾಪತಿ ಸ್ಥಾನಕ್ಕೆ ಬೇಡಿಕೆ ಇಟ್ಟಿತ್ತು ಹಾಗಾಗಿ ಬಿಜೆಪಿ ಜೆಡಿಎಸ್ ಗೆ ಸಭಾಪತಿ ಸ್ಥಾನ ಬಿಟ್ಟು ಕೊಟ್ಟಿದೆ ಎಂಬ ಗುಸು ಗುಸು ಮಾತುಗಳು ವಿಧಾನಸೌಧ‌ದ ಪಡಸಾಲೆಯಲ್ಲಿ ಕೇಳುತ್ತಿದೆ.

ಇದನ್ನೂ ಓದಿ : ಜ29 ರಂದು ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ

ಬಿಜೆಪಿ ಬೆಂಬಲದೊಂದಿಗೆ ಸಭಾಪತಿ ಸ್ಥಾನ ಅಲಂಕರಿಸಲು ಬಸವರಾಜ ಹೊರಟ್ಟಿ ಸಿದ್ದತೆ ನಡೆಸಿದ್ದಾರೆ. ಇನ್ನೂ. ಸಭಾಪತಿ ಸ್ಥಾನವನ್ನು ಪಡೆಯಲು ಒಂದೆಡೆ ಜೆಡಿಎಸ್ ಭಾರೀ ಕಸರತ್ತು ನಡೆಸುತ್ತಿತ್ತು. ಈ ಬಗ್ಗೆ ಸಿಎಂ ಅವರನ್ನು ಭೇಟಿಯಾಗಿದ್ದ ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಬೇಡಿಕೆಯನ್ನು ಅಧಿಕೃತವಾಗಿ ಸಿಎಂ ಮುಂದಿಟ್ಟಿದ್ದರು.

ಬಹುದಿನಗಳಿಂದಲೂ ಬಿಜೆಪಿ ಜೆಡಿಎಸ್ ವಿಲೀನ ಮೈತ್ರಿ ವಿಚಾರ ಚರ್ಚೆಯಾಗುತ್ತಿತ್ತು, ಅದನ್ನು ತಳ್ಳಿಹಾಕುತ್ತಲೆ ಬಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಈಗ ನಿಧಾನಕ್ಕೆ ಹಳೆದೋಸ್ತಿಯನ್ನು ಕುದಿರಿಸಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಈ ದೋಸ್ತಿ ಮುಂದುವರೆಯಬಹುದು ಎಂದು ಜೆಡಿಎಸ್ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *