ಮೈಸೂರು : ಕ್ರಿಯಾ ಮಾಧ್ಯಮ, ಬೆಂಗಳೂರು ಸಹಯೋಗದೊಂದಿಗೆ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಸಿಲ್ವರ್ ಫಿಶ್ ಪುಸ್ತಕದಂಗಡಿಯೊಂದು ಉದ್ಘಾಟನೆಗೊಳ್ಳುತ್ತಿದೆ. ಈ ಮಳಿಗೆಯಲ್ಲಿ ಕನ್ನಡ ವಿಭಾಗದ ಪುಸ್ತಕಗಳು ಸಹ ಲಭ್ಯವಾಗಲಿದೆ. ಈ ಪುಸ್ತಕ ಮಳಿಗೆಯಲ್ಲಿ ಕ್ರಿಯಾ ಮಾಧ್ಯಮದ ಪುಸ್ತಕಗಳು ಒಳಗೊಂಡು ವಿವಿಧ ಪ್ರಕಾರದ ಪುಸ್ತಕಗಳನ್ನು ಮಾರಾಟ ಇಡಲಾಗಿದೆ.
ಮಳಿಗೆ ಉದ್ಘಾಟನೆಯೊಂದಿಗೆ ಡಾ. ಬಸವರಾಜ ಸಬರದ ಅವರು ʻಬಯಲ ಬೆಳಕುʼ ಹಾಗೂ ಡಾ. ವಿಜಯಶ್ರೀ ಸಬರದ ಅವರ ʻಶಿವಶರಣೆಯರ ಸಾಹಿತ್ಯ ಚರಿತ್ರೆʼ ಎಂಬ ಎರಡು ಪುಸ್ತಕಗಳು ಬಿಡುಗಡೆಯಾಗಲಿದೆ.
ಮಳಿಗೆ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ 2023ರ ಜನವರಿ 29ರಂದು, ಸಂಜೆ 4 ಗಂಟೆಗೆ ಆರಂಭವಾಗಲಿದ್ದು, ಮೈಸೂರು ರಂಗಾಯಣದ ಮಾಜಿ ನಿರ್ದೇಶಕರು, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ. ಬಸವಲಿಂಗಯ್ಯ ಉದ್ಘಾಟನೆ ಮಾಡಲಿದ್ದಾರೆ.
ಇದನ್ನು ಓದಿ: “ಬಯಲೊಳಗೆ ಬಯಲಾಗಿ” – ದೇಶದ ವಾಸ್ತವತೆಗೆ ತೀರ ಹತ್ತಿರವಾಗಿರುವ ಗಜ಼ಲ್ ಸಂಕಲನ
ಬಯಲ ಬೆಳಕು ಪುಸ್ತಕವನ್ನು ಪ್ರಸಿದ್ಧ ಸಂಸ್ಕೃತಿ ಚಿಂತಕರಾದ ಪ್ರೊ. ಎಂ.ಎಸ್.ಶೇಖರ್ ಹಾಗೂ ಶಿವಶರಣೆಯರ ಸಾಹಿತ್ಯ ಚರಿತ್ರೆ ಪುಸ್ತಕವನ್ನು ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಮೈಸೂರು ವಿಶ್ವವಿದ್ಯಾಲಯದ ಪ್ರೊ. ಎನ್. ಕೆ. ಲೋಲಾಕ್ಷಿ ಪರಿಚಯ ಮಾಡಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಲೇಖಕರಾದ ಡಾ. ಬಸವರಾಜ ಸಬರದ ಹಾಗೂ ಡಾ. ವಿಜಯಶ್ರೀ ಸಬರದ ಅವರು ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮವು ಜನಶಕ್ತಿ ಮೀಡಿಯಾ ಫೆಸ್ಬುಕ್ ಪೇಜ್ನಲ್ಲಿ ನೇರಪ್ರಸಾರಗೊಳ್ಳಲಿದೆ.
ಪುಸ್ತಕ ಮಳಿಗೆ ವಿಳಾಸ: ಸಿಲ್ವರ್ ಫಿಶ್ ಬುಕ್ಸ್, ಫಾರ್ಮರ್ಸ್ ಹೌಸ್, ನಂ. 1ಎ, 13ನೇ ಕ್ರಾಸ್, ಕಾಳಿದಾಸ ರಸ್ತೆ, ವಿವಿ ಮೊಹಲ್ಲಾ, ಮೈಸೂರು.