ಜನವಿರೋಧಿ ಸಾಂಸ್ಕೃತಿಕ ತಾಂಡವವನ್ನು ಸೋಲಿಸಬೇಕಿದೆ – ಡಾ. ಜಿ.ರಾಮಕೃಷ್ಣ

ಬೆಂಗಳೂರು :ಜನವಿರೋಧಿ ಸಾಂಸ್ಕೃತಿಕ ತಾಂಡವವನ್ನು ನಾವು ಎದುರಿಸುತ್ತಿದ್ದೇವೆ, ಅದನ್ನು ಸೋಲಿಸಬೇಕಿದೆ ಅದಕ್ಕಾಗಿ ಹೋರಾಟ ನಡೆಸಬೇಕಿದೆ ಎಂದು  ಹಿರಿಯ ಚಿಂತಕ ಡಾ. ಜಿ.ರಾಮಕೃಷ್ಣ ಕರೆ ನೀಡಿದರು. ಜನವಿರೋಧಿ

ಜನಶಕ್ತಿ ಪ್ರಕಾಶನದ ಹೊರ ತಂದಿರುವ ಲೇಖಕ ಸಿ.ಸಿದ್ದಯ್ಯರವರ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಿಜೆಪಿ ಆರ್ಥಿಕ ನೀತಿಯನ್ನು ಜನರಿಗೆ ಅರ್ಥ ಮಾಡಿಸಬೇಕಿದೆ. ಸಾರ್ವಜನಿಕ ವ್ಯವಸ್ಥೆಯನ್ನು ಕ್ಷೀಣಿಸಿ,ಖಾಸಗಿ ಕ್ಷೇತ್ರವನ್ನು ಬಲಪಡಿಸಬೇಕು ಎಂಬುದು ಬಿಜೆಪಿಯ ಆರ್ಥಿಕ ನೀತಿಯಾಗಿದೆ. ಬಿಜೆಪಿಯ ಈ ಅಪಾಯಕಾರಿ ನೀತಿಯನ್ನು ಮನೆ ಮನೆಗೆ ಕೊಂಡಯ್ಯಬೇಕಿದೆ ಎಂದರು.

ಕಾವ್ಯ ಪುರುಷ ರಾಮನನ್ನು ದೇವರನ್ನಾಗಿಸಿದ್ದಾರೆ. ನಾನು ಕಾವ್ಯ ಬರೆಯುತ್ತಿರುವೆ ಎಂದು ವಾಲ್ಮೀಕಿ ಹೇಳಿದರೂ, ಅವರು ಅದನ್ನು ತಿರುಚಿ ಪುರಾಣ ಪುರುಷನನ್ನಾಗಿಸಿದ್ದಾರೆ. ಇದಕ್ಕಿಂತ ದೊಡ್ಡ ಕಿತಾಪತಿ ಕೆಲಸ ಇನ್ನೊಂದಿಲ್ಲ. ರಾಮ ದೇವರಲ್ಲ ಎಂದರೆ ಜೈಲಿಗಟ್ಟುತ್ತಾರೆ. ಸರ್ಕಾರದ ನೀತಿಗಳನ್ನು ಪ್ರಶ್ನಿಸಿದರೆ ದೇಶದ್ರೋಹಿ ಅಂತಾರೆ, ಇಡಿ ದಾಳಿ ಮಾಡಿಸುತ್ತಾರೆ ನಮ್ಮ ಜೀವನ ದುರ್ಭರ ಮಾಡುವ ಗುರಿಯನ್ನು ಬಿಜೆಪಿ ಎಂದಿದೆ. ಇದರ ವಿರುದ್ಧ ಚಳುವಳಿ ಬಲಗೊಳ್ಳಬೇಕಿದೆ ಎಂದರು.

ಈ ಮೂರು ಕೃತಿಗಳು 10 ವರ್ಷದಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಜನರಿಗೆ ತಂದಿಟ್ಟ ಸಂಕಷ್ಟಗಳನ್ನು ಲೇಖಕರು ಎಳೆ ಎಳೆಯಾಗಿ ವಿವರಿಸಿದ್ದಾರೆ. ಬಡಜನರನ್ನು ಕಷ್ಟಕ್ಕೆ ದೂಡಿ, ಅಂಬಾನಿ, ಆದಾನಿ ಪರವಾದ ನೀತಿಗಳನ್ನು ಹೇಗೆ ತಂದಿದ್ದಾರೆ ಎಂಬುದನ್ನು ವಿವರಿಸಿದ್ದಾರೆ, ಹಾಗಾಗಿ ಈ ಮೂರು ಕೃತಿಗಳು ಜನಕ್ಕೆ ಮುಟ್ಟಿಸಬೇಕು. ಇದನ್ನು ಜನರು ಸ್ವಿಕರಿಸುವಂತೆ ಮಾಡಬೇಕು ಎಂದರು.

ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಶಕ್ತಿ ವಾರಪತ್ರಿಕೆ ಸಂಪಾದಕ ಡಾ. ಕೆ. ಪ್ರಕಾಶ್ ವಹಿಸಿದ್ದರು. ವೇದಿಕೆಯ ಮೇಲೆ ಲೇಖಕ ಸಿದ್ದಯ್ಯ, ಚಿಂತಕರಾದ ಕೆ.ನೀಲಾ, ಗೋಪಾಲಕೃಷ್ಣ ಅರಳಹಳ್ಳಿ, ಸೈಯ್ಯದ್ ಮುಜೀಬ್, ಯಾದವ ಶೆಟ್ಟಿ, ಎಸ್. ವೈ ಗುರುಶಾಂತ್ ಇದ್ದರು.

ಮೂರು ಕೃತಿಗಳು ಯಾವವು: “ಅಚ್ಛೇ ದಿನಗಳಿಗೆ ಕಾದ 10 ವರ್ಷಗಳಲ್ಲಿ ನಡೆದದ್ದೇನು” ಎಂಬ ಶೀರ್ಷಿಕೆಯಡಿಯಲ್ಲಿ ‘ಜನಶಕ್ತಿ ಪ್ರಕಾಶನ’ ಮೂರು ಪುಸ್ತಕಗಳನ್ನು ಹೊರತಂದಿದೆ. ಲೇಖಕರಾದ ಸಿ.ಸಿದ್ದಯ್ಯನವರು ಬರೆದಿರುವ ಮೂರು ಪುಸ್ತಕಗಳು ಈ ಕೆಳಗಿನಂತಿವೆ.

1)ಮೋದಿ ಯೋಜನೆಗಳ ಕಾಳು ಜೊಳ್ಳು‘ಉಜ್ವಲ’ ದಿಂದ ‘ಅಗ್ನಿಪಥ್’ ವರೆಗಿನ 15 ಯೋಜನೆಗಳ ಉದ್ದೇಶ, ಸ್ವರೂಪ, ಜಾರಿಯ ನಿಜ ಚಿತ್ರ

2) ‘ನಾ ಖಾವುಂಗಾ ನಾ ಖಾನೇ ದೂಂಗಾ’ ಎಲ್ಲಿಗೆ ಬಂತು?

3) ಅದಾನಿ-ಅಂಬಾನಿಗಳಿಗೆ ಅಚ್ಛೇದಿನ್- ದೈತ್ಯ ಕಾರ್ಪೊರೆಟ್ ಗಳಿಗೆ ಮೋದಿ ಸರಕಾರದ 10 ವರ್ಷಗಳ ಸೇವೆಯ ರೆಕಾರ್ಡ್

ಈ ಮೂರು ಪುಸ್ತಕಗಳು ಮಹಾಲಕ್ಷ್ಮಿ ಲೇಔಟ್ ನ ಇಎಮ್ಎಸ್ ಭವನದಲ್ಲಿ ಮಾರಾಟಕ್ಕೆ ಲಭ್ಯ ಇವೆ.

Donate Janashakthi Media

Leave a Reply

Your email address will not be published. Required fields are marked *