ಗದಗ:ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಜಿಲ್ಲೆಯ ಸುಮಾರು 12000 ಕಾರ್ಮಿಕರಿಗೆ ವಿತರಣೆ ಆಗಬೇಕಿರುವ ಆಹಾರ ಕಿಟ್ ಗಳನ್ನು ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಮನೆಯಲ್ಲಿಟ್ಟುಕೊಂಡಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಆರೋಪಿಸಿದರು.
ಈ ಕುರಿತು ಗದಗ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಾರ್ಮಿಕರಿಗೆ ಸಿಗಬೇಕಾದ ಕಿಟ್ ಗಳು ಜನಪ್ರತಿನಿಧಿಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಮನೆಯಲ್ಲಿ ಸಂಗ್ರಹಿಸಿಟ್ಟಿರುವ ಶಂಕೆಯಿದ್ದು, ಅಧಿಕಾರಿಗಳು ಮೊದಲು ಅವನ್ನು ಪತ್ತೆ ಮಾಡಿ ಕಾರ್ಮಿಕ ಇಲಾಖೆಯ ಸುಪರ್ದಿಗೆ ಪಡೆದುಕೊಂಡು ಇಲಾಖೆ ಮೂಲಕವೇ ಅವುಗಳನ್ನು ಅರ್ಹ ಫಲಾನುಭವಿ ಕಾರ್ಮಿಕರಿಗೆ ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.ಕಾರ್ಮಿಕರ ಕಿಟ್ ಗಳಲ್ಲೂ ಸ್ವಾರ್ಥ ರಾಜಕಾರಣ ಮಾಡುತ್ತಿರುವುದು ತೀವ್ರ ಖಂಡನಾರ್ಹವಾದುದು ಎಂದು ಜಿಲ್ಲಾ ಸಿ.ಐ.ಟಿಯು.ಹೇಳಿದೆ.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಎಂ.ಬಿ.ಬನ್ನೂರ ಭಾಗಿಯಾಗಿದ್ದರು.