ಜನಮತ 2023 : ಬಿಬಿಎಂಪಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ

ಬೆಂಗಳೂರು: ಇಂದಿನ ಯುವಪೀಳಿಗಿಯೇ ಭಾರತದ ಭವಿಷ್ಯದ ಹರಿಕಾರರು ಎಂಬುದ ಜನಜನಿತ. ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಯುವಜನತೆ ಮತಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಇಂದಿನ ಯುಗದಲ್ಲಿ ಯುವ ಪೀಳಿಗೆ ಮತದಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೋಟಾ ಪ್ರಸ್ತುತತೆ, ಚುನಾಯಿತ ಪ್ರತಿನಿಧಿಗಳ ಶೈಕ್ಷಣಿಕ ಅಗತ್ಯತೆಗಳು, ಸಾರ್ವಜನಿಕರಿಗೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ವಾಸ್ತವಿಕ ಸಮಗ್ರ ಮಾಹಿತಿ, ಚುನಾವಣಾ ವೆಚ್ಚದ ಮೇಲಿನ ಮಿತಿ ಮತ್ತು ಪಕ್ಷಗಳು ನೀಡುವ ಭರವಸೆಗಳ ಹೊಣೆಗಾರಿಕೆ, ಉಚಿತಗಳ ಬಗ್ಗೆ ತರ್ಕಬದ್ಧತೆ ಮತ್ತು ಪ್ರಾಯೋಗಿಕತೆಯ ಕುರಿತು ಯುವ ಮತದಾರರ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಆನ್ಲೈನ್ ಮತದಾನದ ಬಗ್ಗೆ ಕೂಡ ಅರಿವು ಮೂಡಿಸಲಾಯಿತು.

ಇದನ್ನೂ ಓದಿ : ಜನಮತ 2023 : 80 ವರ್ಷ ಮೇಲ್ಪಟ್ಟ ಹಿರಿಯರಿಂದ ಮತದಾನ ಆರಂಭ

ವಿದ್ಯಾರ್ಥಿಗಳಿಗೆ ಮತದಾನ ಮತ್ತು ಚುನಾವಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕಗಳನ್ನು ಸಹ ಪ್ರದರ್ಶಿಸಲಾಯಿತು. ಬೀದಿ ನಾಟಕವು ಮಹಿಳಾ ಮತದಾರರಿಗೆ ಪಿಂಕ್ ಬೂತ್ ಮತ್ತು ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಮಾಹಿತಿ ನೀಡಿತು.

Donate Janashakthi Media

Leave a Reply

Your email address will not be published. Required fields are marked *