ಜನಮತ 2023 : ಕುಟುಂಬ ಸದಸ್ಯರಿಗೆ ಮಣೆ ಹಾಕಿದ ಬಿಜೆಪಿ, ಜೆಡಿಎಸ್‌ನಿಂದ ಪಟ್ಟಿ ಬಿಡುಗಡೆ

ಬೆಂಗಳೂರು: ಬಿಜೆಪಿ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿರುವ ಜೆಡಿಎಸ್‌ ಈ ಬಾರಿ ಬಿಜೆಪಿ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಷ್ಟು ಮಂದಿ ಕುಟುಂಬ ಹಿನ್ನೆಲೆ ಹೊಂದಿರುವವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಬಹಿರಂಗಪಡಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌, ಕರ್ನಾಟಕಕ್ಕೆ ಬಂದಾಗೆಲ್ಲಾ ಕುಟುಂಬ ರಾಜಕಾರಣ ಎಂದು ನಿರಂತರ ಬೊಬ್ಬಿರಿಯುವ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಹೇಳುವುದು ಒಂದು, ಮಾಡುವುದು ಒಂದು. ರಾಜ್ಯ ಚುನಾವಣೆಗೆ ಬಿಜೆಪಿ ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವ ಪಟ್ಟಿ ನೀಡಿದ್ದೇವೆ, ಬಿಜೆಪಿ ನಾಯಕರು ನೈತಿಕತೆಯನ್ನು ಪ್ರಶ್ನಿಸಿಕೊಳ್ಳಲಿ ಎಂದು ತಿರುಗೇಟು ನೀಡಿದೆ.

ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 189 ಮಂದಿಗೆ ಟಿಕೆಟ್, 52 ಮಂದಿ ಹೊಸಬರಿಗೆ ಮಣೆ

1. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕುಟುಂಬ ರಾಜಕಾರಣದ ಕೂಸು, ಅವರ ತಂದೆ ಮಾಜಿ ಸಿಎಂ ಆಗಿದ್ದವರು.
2. ಬಿಎಸ್‌ ಯಡಿಯೂರಪ್ಪ ತನ್ನ ಪುತ್ರನಿಗೆ ಶಾಸಕ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದು, ಅವರ ಮತ್ತೊಬ್ಬ ಪುತ್ರ ಸಂಸದರಾಗಿದ್ದಾರೆ.
3. ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದ್ದು, ಅವರ ಸೋದರನ ಮಗ ತೇಜಸ್ವಿ ಸೂರ್ಯ ಸಂಸದರಾಗಿದ್ದಾರೆ.
4. ಎಂಎಲ್‌ಎ ಜ್ಯೋತಿ ಗಣೇಶ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ, ಅವರ ತಂದೆ ಬಸವರಾಜ್ ಸಂಸದರಾಗಿದ್ದಾರೆ.
5. ಇಬ್ಬರು ಜಾರಕಿಹೊಳಿ ಸಹೋದರರಿಗೆ ಮತ್ತೆ ಎಂಎಲ್‌ಎ ಟಿಕೆಟ್ ನೀಡಲಾಗಿದೆ.

6. ಕತ್ತಿ ಕುಟುಂಬದಲ್ಲಿ, ಉಮೇಶ್ ಕತ್ತಿ ಅವರ ಮಗ ಹಾಗೂ ಸಹೋದರನಿಗೆ ಎಂಎಲ್‌ಎ ಟಿಕೆಟ್ ನೀಡಲಾಗಿದೆ.
7. ಇಬ್ಬರು ರೆಡ್ಡಿ ಸಹೋದರರಿಗೆ ಎಂಎಲ್‌ಎ ಟಿಕೆಟ್ ನೀಡಲಾಗಿದೆ.
8. ಹರ್ಷವರ್ಧನ್‌ಗೆ ಎಂಎಲ್‌ಎ ಟಿಕೆಟ್ ನೀಡಲಾಗಿದ್ದು, ಅವರ ಮಾವ ಶ್ರೀನಿವಾಸ್ ಪ್ರಸಾದ್ ಸಂಸದರಾಗಿದ್ದಾರೆ.
9. ಬಿಜೆಪಿ ಸಂಸದ ಅಣ್ಣಾಸಾಹೇಬರ ಪತ್ನಿ ಶಶಿಕಲಾ ಜೊಲ್ಲೆಗೆ ಟಿಕೆಟ್ ನೀಡಲಾಗಿದೆ.
10. ಮಾಜಿ ಸಚಿವರ ಪುತ್ರ ಪ್ರೀತಂ ನಾಗಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ : ಜನಮತ 2023 : 23 ಅಭ್ಯರ್ಥಿಗಳ ಬಿಜೆಪಿ 2ನೇ ಪಟ್ಟಿ ಬಿಡುಗಡೆ

11. ಸಂಸದ ಉಮೇಶ್ ಜಾಧವ್ ಮಗ ಅವಿನಾಶ್ ಜಾಧವ್‌ಗೆ ಟಿಕೆಟ್ ನೀಡಲಾಗಿದೆ.
12. ಮಾಜಿ ಸಿಎಂ ಮಗ ಕುಮಾರ್ ಬಂಗಾರಪ್ಪ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ.
13. ಮಾಜಿ ಸಚಿವರ ಮಗ ದತ್ತಾತ್ರೇಯ ಪಾಟೀಲ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ.
14. ಸುರೇಶ್ ಬಾಬು ಮತ್ತು ಶ್ರೀರಾಮುಲು, ಅವರ ಸೋದರಳಿಯ ಮತ್ತು ಚಿಕ್ಕಪ್ಪನಿಗೆ ಟಿಕೆಟ್ ನೀಡಲಾಗಿದೆ.
15. ಮಾಜಿ ಶಾಸಕನ ಪುತ್ರ ಅರವಿಂದ್ ಬೆಲ್ಲದ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ.

16. ಚಂದ್ರಕಾಂತ ಪಾಟೀಲ್‌ಗೆ ಟಿಕೆಟ್ ನೀಡಲಾಗಿದ್ದು, ಅವರು ತಂದೆ ಶಾಸಕ.
17. ಮಾಜಿ ಸಚಿವರ ಮಗ ಸಪ್ತಗಿರಿ ಗೌಡರಿಗೆ ಟಿಕೆಟ್.
18. ಮಾಜಿ ಶಾಸಕರ ಪುತ್ರ ಅಮೃತ್ ದೇಸಾಯಿಗೆ ಮತ್ತೆ ಟಿಕೆಟ್.
19. ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ್ ಸಿಂಗ್‌ಗೆ ಟಿಕೆಟ್.
20. ಮಾಜಿ ಸಚಿವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *