ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದಲ್ಲಿ ಜಾಮೀನು ಸಲ್ಲಿಸಿದ್ದು, ಒಂದೊಮ್ಮೆ ಜಾಮೀನು ತಿರಸ್ಕೃತಗೊಂಡರೆ ಬಂಧನದ ಭೀತಿ ಎದುರಾಗಲಿದೆ.
ಈ ಹಿನ್ನೆಲೆಯಲ್ಲಿ ಮುರುಘಾಮಠದಲ್ಲಿ ಹಲವು ಕ್ಷಣ ಕ್ಷಣಕ್ಕೂ ಸಭೆ, ಗೌಪ್ಯ ಸಭೆ ಇತ್ಯಾದಿಗಳು ದಿನವೀಡಿ ನಡೆಯುತ್ತಿವೆ. ಫೋಕ್ಸೋ ಪ್ರಕರಣದ A1 ಆರೋಪಿ ಮುರುಘಾ ಸ್ವಾಮೀಜಿ ಜೊತೆ ನಾಲ್ಕನೇ ಆರೋಪಿ ಪರಮಶಿವಯ್ಯ ಪ್ರತ್ಯಕ್ಷರಾಗಿದ್ದು ಅವರೊಟ್ಟಿಗೆ ಪ್ರತ್ಯಕ ಸಭೆ ನಡೆಸಲು ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಒಳಗೆ ತೆರಳಿದ ಬಗ್ಗೆ ವರದಿಯಾಗಿದೆ.
ಸ್ವಾಮೀಜಿ ವಿರುದ್ಧ ಪೋಸ್ಕೋ, ಅಟ್ರಾಸಿಟಿ ಸೇರಿದಂತೆ ಗಂಭೀರ ಪ್ರಕರಣಗಳು ದಾಖಲಾಗಿವೆ. ಸಿಆರ್‌ಪಿಸಿ ಸೆಕ್ಷನ್ 164 ಹೇಳಿಕೆ ಆಧರಿಸಿ ಇಂದು ಪೊಲೀಸರು ನೊಟೀಸ್ ಜಾರಿ ನೀಡಬಹುದು ಎನ್ನಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಮಠಕ್ಕೆ ಪೊಲೀಸ್ ಕಣ್ಗಾವಲಿದೆ.
ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ವಿಚಾರ ಸಂಬಂಧ ಚಿತ್ರದುರ್ಗ ಎಸ್ಪಿ ಪರಶುರಾಮ್ಗೆ ಎನ್ಸಿಪಿಸಿಆರ್ ನೋಟಿಸ್ ಜಾರಿ ಮಾಡಲಾಗಿದೆ. ಆರೋಪಿಯ ವಿರುದ್ಧ ಪೊಲೀಸರು ಕೈ ಗೊಂಡ ಕ್ರಮ ಏನು? ಸಂತ್ರಸ್ತ ಬಾಲಕಿಯರ ಪ್ರಸ್ತುತ ಸ್ಥಿತಿ ಏನು? ಪ್ರಸ್ತುತ ಪಕರಣ ಯಾವ ಹಂತದಲ್ಲಿದೆ? ದಾಖಲಿಸಿರುವ ಎಫ್ಐಆರ್ ಪ್ರತಿಯಲ್ಲೇನಿದೆ? ಸಂತ್ರಸ್ತ ಬಾಲಕಿಯರಿಂದ ದಾಖಲಿಸಿಕೊಂಡ 164 ಹೇಳಿಕೆ ಏನು? ಪ್ರಕರಣದ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ 9 ಪ್ರಶ್ನೆ ಕೇಳಿ 7 ದಿನದಲ್ಲಿ ಉತ್ತರಿಸಲು NCPCR ನೋಟಿಸ್ ನೀಡಿದೆ. ಸುಮೊಟೊ ಕೇಸ್ ದಾಖಲಿಸಿಕೊಂಡು NCPCR ನೋಟಿಸ್ ಹಿನ್ನೆಲೆ ಪೊಲೀಸ್ ಇಲಾಖೆ ಹೈಅಲರ್ಟ್ ಆಗಿದೆ.