ಜಮೀನಿನಲ್ಲಿ ಲೇಔಟ್ : ರೈತರ ಪ್ರತಿಭಟನೆ

ಬೆಂಗಳೂರು : ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ರೈತರ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡುತ್ತಿರುವ ಖಾಸಗಿ ಕಂಪನಿ ವಿರುದ್ಧ ಪಟ್ಟಣಗೆರೆ ರೈತರು ಪ್ರತಿಭಟನೆ ನಡೆಸಿದ್ದಾರೆ.

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಸಹ ಪಟ್ಟಣಗೆರೆ ಗ್ರಾಮದ 3 ಎಕರೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಲು ಟ್ರಿಂಕೋ ಇನ್‌ ಫ್ರಾ.ಪ್ರೈವೆಟ್ ಲಿ. ಮುಂದಾಗಿತ್ತು. ಲೇಔಟ್‌ನಲ್ಲಿ ಜೆಸಿಬಿಗಳ ಮೂಲಕ ಕಾಮಗಾರಿ ನಿರ್ವಹಿಸಲು ಯತ್ನಿಸಲಾಗುತ್ತಿದೆ ಎಂದು ರೈತರು ದೂರಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಪಟ್ಟಣಗೆರೆ ಗ್ರಾಮದ ಸರ್ವೇ ನಂ 68 (ಹಳೇ ನಂ 10) ರಲ್ಲಿ 3 ಏಕರೆ ರೈತರ ಜಮೀನಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ.

ಈ ವಿವಾದಿತ ಜಮೀನಿನಲ್ಲಿ ಯಾವುದೇ ಥರಹದ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ತಡೆಯಾಜ್ಞೆ ನೀಡಲಾಗಿದೆ. ಆದರೂ ಸಹ ಸಹ, M/s Trinco Infra Priviate Limited ಸಂಸ್ಥೆ ಲೇಔಟ್ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ. ಕೆಲ ಗೂಂಡಾಗಳು ರೈತರ ಮೇಲೆ ದಬ್ಬಾಳಿಕೆ ಮಾಡುವ ಯತ್ನ ನಡೆಸಿದ್ದಾರೆ.

ಯಾವುದೇ ಲೇಔಟ್‌ ಕೂಡಾ ನಿರ್ಮಿಸದೇ ರೈತರುಗಳೇ ಈ ಜಮೀನನ್ನು ಹೊಂದುವ ಅಭಿಲಾಷೆ ಹೊಂದಿದ್ದರೂ ನಮ್ಮಿಂದ ನಮ್ಮ ಜಮೀನನ್ನು ಕಿತ್ತುಕೊಳ್ಳಲು ಹುನ್ನಾರ ನಡೆದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮಗೈಗೊಂಡ ನಮ್ಮ ಭೂಮಿಯನ್ನು ನಮಗೆ ಉಳುಮೆ ಮಾಡಲು ಅವಕಾಶ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *