ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ :ಜೈ ಭೀಮ್

ನಟ ಸೂರ್ಯ ನಿರ್ಮಾಣ , ಟಿ.ಜೆ. ಜ್ಞಾನವೇಲ್ ನಿರ್ದೇಶನದ ಹಾಗೂ ಜಸ್ಟೀಸ್ ಚಂದ್ರು ಅವರು ನ್ಯಾಯ ಒದಗಿಸಿ ಕೊಟ್ಟಂತಹ ನೈಜ ಘಟನೆಯನ್ನಾಧರಿಸಿ ನಿರ್ಮಾಣವಾದ ಜೈ ಭೀಮ್ ಚಿತ್ರವು 2021ರಲ್ಲಿ  ಯು ಟ್ಯೂಬ್ ನಲ್ಲಿ ಹಾಗು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಯಿತು.

ಈ ಚಿತ್ರದ ಬಿಡುಗಡೆ ಮುಂಚೆಯೇ ಹೆಚ್ಚು ವಿವಾದಕ್ಕೀಡಾಗಿತ್ತು ಜಾತ್ಯತೀತವಾದ ಈ ದೇಶದಲ್ಲಿ ಇಂತಹ ಸಿನಿಮಾಗಳನ್ನು ಸ್ವೀಕರಿಸುವ ಸಂಕಷ್ಟದಲ್ಲಿ  ಈ ಚಿತ್ರ ಬಿಡುಗಡೆ ಹೊಂದಿ ಸದ್ದು ಮಾಡಿತ್ತು ವೀಕ್ಷಕರ ಕಣ್ಣೀರು ಚಿತ್ರದೊಂದಿಗೆ ಬೆರೆಯುವಂತೆ ಮಾಡಿತ್ತು.

ಚಿತ್ರಕಥೆ,ನಿರ್ದೇಶಕ,ನಿರ್ಮಾಪಕ ರಾದ ದಾದ ಸಾಹೇಬ್ ಪಾಲ್ಕೆಯವರ ಪರಂಪರೆಯನ್ನು ಆಚರಿಸುವ ಉದ್ದೇಶದಿಂದ ಆರಂಭವಾದ ದಾದ ಸಾಹೇಬ್ ಪಾಲ್ಕೆಯವರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ಸೂಯರ್ಯರವರ ಕಾನೂನು ಚಿತ್ರ ಜೈ ಭೀಮ್ ಚಿತ್ರವು ಎರಡು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪೋಷಕ ನಟನಾಗಿ ನಟಿಸಿದ ನಟ ಮಣಿಕಂಡನ್ ಗೆ ‘ಅತ್ಯುತ್ತಮ ಪೋಷಕ ನಟ’ .12ನೇ ದಾದಾ ಸಾಹೇಬ್ ಪಾಲ್ಕೆ ಚಲನಚಿತ್ರೋತ್ಸವದಲ್ಲಿ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಲಭಿಸಿದೆ.

‘ಅತ್ಯುತ್ತಮ ಚಿತ್ರ’ಎಂದುಆಸ್ಕರ್ ಅವಾರ್ಡ್ ಗೆ ಆಯ್ಕೆಯಾಗಿ ಕೊನೆ ಸುತ್ತಿನಲ್ಲಿ ನಾಮನಿರ್ದೇಶನ ಪಟ್ಟಿಯಿಂದ ಹೊರಗುಳಿಯಿತು ಎಂಬ ಇರಾದೆಯನ್ನು ಇದೀಗ  ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು ಹೋಗಲಾಡಿಸಿದೆ.

1995ರ ನೈಜ ಘಟನೆ ಆದರಿಸಿದ ಕಥೆಯಿದು. ಇಲಿ, ಹಾವು ಹಿಡಿದು, ಇಟ್ಟಂಗಿ ಬಡೆದು ಬದುಕುವ ಇರುಳರು ಎಂಬ ಮುಗ್ದ ಬುಡಕಟ್ಟು ಜನಾಂಗ ಪೋಲಿಸರ ಕಪಿಮುಷ್ಠಿಗೆ ಸಿಲುಕಿ ನರಳಿದ ಇತಿಹಾಸ ಈ ಸಿನಿಮಾದಲ್ಲಿದೆ. ಕಮರ್ಷಿಯಲ್ ಸಿನಿಮಾದ ಅಂಶಗಳನ್ನು ಪಕ್ಕಕ್ಕಿಟ್ಟು, ಹೀರೋಯಿಸಂ ಬಿಟ್ಟು ಸ್ಟಾರ್ ನಟ ಸೂರ್ಯ ಕೇವಲ ಸಹಜವಾದ ಅಭಿನಯದ ಮೂಲಕ ಹೀರೋಯಿಸಂ ತೋರಿಸಿರೋದು ಅನೇಕರ ಮೆಚ್ಚುಗೆಗೆ ಕಾರಣವಾಗಿದೆ.

Donate Janashakthi Media

Leave a Reply

Your email address will not be published. Required fields are marked *