ತಮಿಳುನಾಡು: ದೇಶದಲ್ಲಿ ಐಷಾರಾಮಿ ಬ್ರ್ಯಾಂಡ್ನ ಹೆಜ್ಜೆ ಗುರುತು ಗಮನಾರ್ಹ ವಿಸ್ತರಣೆ ಕಾಣುತ್ತಿದೆ. ಟಾಟಾ ಮೋಟರ್ಸ್ ಅವರ ಹೊಸ ಜಾಗ್ವಾರ್ ಲ್ಯಾಂಡ್ ರೋವರ್ ಉತ್ಪಾದನಾ ಘಟಕ ತಮಿಳುನಾಡಿನ ರಾಣಿಪೇಟೆ ಜಿಲ್ಲೆಯಲ್ಲಿ ಇಂದು ಉದ್ಘಾಟನೆಯಾಗಲಿದೆ. ಇದರಿಂದ 5,000 ನೇರ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಭರವಸೆ ವ್ಯಕ್ತವಾಗಿದೆ. ಜಾಗ್ವಾರ್
ಈ ಘಟಕದ ಉದ್ಘಾಟನೆ ಮೂಲಕ 5ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ. ಇದಕ್ಕಿಂತ ಇನ್ನೇನು ಬೇಕು. ಜೆಎಲ್ಆರ್ ಸುತ್ತಲು ಮತ್ತಷ್ಟು ಪೂರಕ ಘಟಕಗಳು ಬರುತ್ತಿದೆ ಎಂದು ಕೈಗಾರಿಕ ಸಚಿವ ಟಿಆರ್ಬಿ ರಾಜಾ ತಿಳಿಸಿದ್ದಾರೆ.
ಇದನ್ನೂ ಓದಿ : 2ನೇ ತರಗತಿಯ ವಿದ್ಯಾರ್ಥಿಗೆ 150 ಛಡಿಯೇಟು ನೀಡಿದ ಶಿಕ್ಷಕ; ಪ್ರಕರಣ ದಾಖಲು
ಈ ಯೋಜನೆಯ ತ್ವರಿತ ಅನುಷ್ಠಾನ ಮತ್ತು ನಿಯಂತ್ರಕ ಅನುಮತಿಗಳ ಬಳಿಕ ಯೋಜನೆ ದಾಖಲೆಯ ಸಮಯದಲ್ಲಿ ಪೂರ್ಣಗೊಂಡಿದೆ. ಜಿಲ್ಲೆಯ ಪಣಪಕ್ಕಂನಲ್ಲಿ ಟಾಟಾ ಮೋಟಾರ್ಸ್ ಸ್ಥಾವರ ಅಧಿಕೃತವಾಗಿ ಇಂದು ಉದ್ಘಾಟನೆಯಾಗುತ್ತಿದೆ. ಈ ಯೋಜನೆಯು ವಿವಿಧ ಜಿಲ್ಲೆಗಳಲ್ಲಿ ವಿಸ್ತೃತ ಬೆಳವಣಿಗೆಯನ್ನು ಉತ್ತೇಜಿಸುವ ರಾಜ್ಯದ ಗುರಿಯೊಂದಿಗೆ ಹೊಂದಿಕೆಯಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ರಾಣಿಪೇಟೆ ಘಟಕವು ಜಾಗ್ವಾರ್ ಲ್ಯಾಂಡ್ ರೋವರ್ನ ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಪ್ರಮುಖ ಜಾಗತಿಕ ಆಟೋಮೋಟಿವ್ ಕಂಪನಿಗಳು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ರಾಜ್ಯದಲ್ಲಿ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಸಾಗಿದೆ. ದೇಶದಲ್ಲಿ ಸಂಸ್ಥೆಯ ಪೂರೈಕೆ ಸರಪಳಿಯನ್ನು ಇದು ಬಲಪಡಿಸುತ್ತಿದೆ ಎಂದು ನಿರೀಕ್ಷಿಸಲಾಗಿದೆ.
ಈ ಘಟಕದ ಮೂಲಕ ರಾಣಿಪೇಟೆ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ, ಕೈಗಾರಿಕಾ ಬೆಳವಣಿಗೆ ಮತ್ತು ಸ್ಥಳೀಯ ಆರ್ಥಿಕತೆಗೆ ಈ ಅಭಿವೃದ್ಧಿಯು ಉತ್ತೇಜನ ನೀಡುತ್ತದೆ ಎಂದರು. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪಣಪಕ್ಕಂನಲ್ಲಿರುವ ಹೊಸ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನಗಳು ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಉತ್ಪಾದನಾ ಘಟಕವನ್ನು ಸಿಪ್ಕಾಟ್ ಸಂಕೀರ್ಣದಲ್ಲಿ ಉದ್ಘಾಟಿಸಲಿದ್ದಾರೆ.
