ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ದಾಳಿ : ಜಾಗೃತ ನಾಗರಿಕರು ಕರ್ನಾಟಕ ಆಕ್ರೋಶ

ಬೆಂಗಳೂರು :ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ವಿಜ್ಞಾನ ಚಳವಳಿ ಕಾರ್ಯಕರ್ತರ ಮೇಲಿನ‌ ದಾಳಿಯನ್ನು ಜಾಗೃತ ನಾಗರಿಕರು ಕರ್ನಾಟಕ ಖಂಡಿಸಿದೆ.

ಪ್ರಜಾಪ್ರಭುತ್ವದ ತಾಯ್ನೆಲ ಎಂದು ಬಣ್ಣಿಸಲ್ಪಡುತ್ತಿರುವ ಭಾರತದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಇಂದು ಬೆಳ್‌ ಬೆಳಿಗ್ಗೆ ದೆಹಲಿಯಲ್ಲಿ ಹಲವು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮನೆಗಳಿಗೆ ದೆಹಲಿ ಪೋಲೀಸರು ನುಗ್ಗಿ ಅವರ ವೈಯಕ್ತಿಕ ಲ್ಯಾಪ್‌ ಟಾಪ್‌, ಮೊಬೈಲ್‌, ಹಾರ್ಡ್‌ಡಿಸ್ಕ್‌ ಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಇಬ್ಬರು ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಸ್ವತಂತ್ರ ಸುದ್ದಿವಾಹಿನಿಯಾದ ನ್ಯೂಸ್‌ ಕ್ಲಿಕ್‌ ವಿರುದ್ಧ ಯು.ಏ.ಪಿ.ಏ ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಲಾಗಿದೆ. ಅವರ ಕಛೇರಿಗೆ ಬೀಗ ಹಾಕಿರುವ ಕ್ರಮವನ್ನು ಖಂಡಿಸಿದ್ದಾರೆ.

ಹಿರಿಯ ಪತ್ರಕರ್ತ ಊರ್ಮಿಳೇಶ್‌,ರವರನ್ನೂ ವಶಕ್ಕೆ ಪಡೆಯಲಾಗಿದೆ. ಇತರ ಪತ್ರಕರ್ತರಾದ ಪರಂಜಯ್‌ ಗುಹಾ ಠಾಕುರ್ತಾ, ಅಭಿಸಾರ್‌ ಶರ್ಮಾ, ಅನಂದ್ಯ ಚಕ್ರವರ್ತಿ, ಭಾಷಾ ಸಿಂಗ್‌,ವಿಡಂಬನಕಾರ ಸಂಜಯ್‌ ರಾಜೌರಾ, ಸಾಮಾಜಿಕ ಹೋರಾಟಗಾರ, ಫಿಲ್ಮ್‌ ಮೇಕರ್‌, ಚರಿತ್ರೆಕಾರರೂ ಆದ ಸೋಹೈಲ್‌ ಹಷ್ಮಿಯವರುಗಳು ಇಂದಿನ ಧಾಳಿಗೆ ಗುರಿಯಾದವರು. ಏಕಾಏಕಿ ಬೆಳಗಿನ ಜಾವ ಮನೆಗಳಿಗೆ ನುಗ್ಗಿ ಅವರ ಎಷ್ಟೋ ವರ್ಷಗಳ ಪರಿಶ್ರಮದ ಫಲವಾದ ಕೆಲಸಗಳನ್ನು ಹೊಂದಿರುವ ಹಾರ್ಡ್‌ ಡಿಸ್ಕ್‌, ಲ್ಯಾಪ್‌ ಟಾಪ್‌ ಗಳನ್ನು ವಶಪಡಿಸಿಕೊಂಡಿರುವುದು, ಕರಾಳ ಯು.ಏ.ಪಿ.ಏ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುವುದು ಇವು ಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ವ್ಯಕ್ತಿಗಳ ಧ್ವನಿ  ಹುನ್ನಾರಲ್ಲದೇ ಮತ್ತೇನೂ ಅಲ್ಲ ಎಂದು ಜಾಗೃತ ನಾಗರಿಕರು ಕರ್ನಾಟಕ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ‘ನ್ಯೂಸ್ ಕ್ಲಿಕ್’ ಕಚೇರಿಯನ್ನು ಜಪ್ತಿ ಮಾಡಿದ ದೆಹಲಿ ಪೊಲೀಸರು : ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆ

ಸ್ವಾವಲಂಬಿ ಜನಕೇಂದ್ರಿತ ಅಭಿವೃದ್ಧಿ ಯನ್ನು ಪ್ರತಿಪಾದಿಸುವ ಪ್ರಬೀರ್ ಪುರಕಾಯಸ್ಥ ರವರನ್ನು, ವಿಜ್ಞಾನ ಚಳವಳಿಯ ಕಾರ್ಯಕರ್ತ ರಘುನಂದನ್ ವಿಚಾರಣೆಗೆ ಒಳಪಡಿಸಲಾಗಿದೆ. ಇಂತಹವರ ಧ್ವನಿ ಅಡಗಿಸಲು ನಡೆಸಿರುವ ನಿರಂತರ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ. ಮಾಧ್ಯಮವೊಂದು ಕಾವಲುನಾಯಿಯಂತೆ. ನಿರ್ಭೀತ, ಸ್ವತಂತ್ರ ಮತ್ತು ಸ್ವಾಯತ್ತ ನೆಲೆಯಲ್ಲಿ ಅದು ತನ್ನ ಕಾರ್ಯ ನಿರ್ವಹಿಸುವುದೇ ಅದರ ಕೆಲಸ. ಅದನ್ನು ನಿಯಂತ್ರಣ ಮಾಡುವ ಕೇಂದ್ರದ ಒಕ್ಕೂಟ ಸರಕಾರದ ಈ ಕ್ರಮಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದೆ.

ದೇಶದ ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯ ದ ಪರವಾಗಿ ಕೆಲಸ ಮಾಡುವವರನ್ನು, ತಮ್ಮನ್ನು ವಿರೋಧಿಸುವವರನ್ನು ಕ್ರೂರವಾಗಿ ಬೇಟೆಯಾಡುವುದನ್ನು ಈ ಕೂಡಲೇ ನಿಲ್ಲಿಸಬೇಕು. ಅಲ್ಲದೆ ದೇಶದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವ, ಭಿನ್ನ ಅಭಿಪ್ರಾಯಗಳನ್ನು ಹತ್ತಿಕ್ಕಲು ಶಸ್ತ್ರದಂತೆ ಬಳಸುತ್ತಿರುವ ಯು.ಏ.ಪಿ.ಏ ಯಂಥಹ ಕರಾಳ ಕಾನೂನನ್ನು ಹಿಂತೆಗೆದುಕೊಳ್ಳಬೇಕು ಎಂದು ಜಾಗೃತ ಕರ್ನಾಟಕ ಒತ್ತಾಯಿಸಿದೆ.

ಹಿರಿಯ ಸಾಹಿತಿ, ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ,ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಿಜಯಾ, ಡಾ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ಬಿ.ಶ್ರೀಪಾದ ಭಟ್, ವಿಮಲಾ.ಕೆ.ಎಸ್., ಡಾ.ಮೀನಾಕ್ಷಿ ಬಾಳಿ, ಡಾ.ಎನ್.ಗಾಯತ್ರಿ, ಟಿ.ಸುರೇಂದ್ರ ರಾವ್, ಡಾ.ವಸುಂಧರಾ ಭೂಪತಿ, ಎನ್.ಕೆ.ವಸಂತ ರಾಜ್ ಜಂಟಿ ಹೇಳಿಕೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *