ಜಗಳೂರು : ಜಗಳೂರು ತಾಲ್ಲೂಕಿನ ಬಿದರಿಕೆರೆ ಗ್ರಾಮದ ಲಿಂಗರಾಜ ಎನ್ನುವವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ ಘಟನೆ ನವೆಂಬರ್ 08 ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಲಿಂಗರಾಜ್ ಎನ್ನುವವರು ತಮ್ಮ ದ್ವಿಚಕ್ರವಾಹನವನ್ನು ಗೌರಮ್ಮ ಎನ್ನುವವರ ಮನೆ ಮುಂದೆ ನಿಲ್ಲಿಸಿದ್ದರು. ಗೌರಮ್ಮ ಅವರ ಕುಟುಂಬದವರು ಈ ವಿಚಾರವಾಗಿ ಲಿಂಗರಾಜ್ ಅವರ ಜೊತೆ ಜಗಳ ತೆಗೆದಿದ್ದಾರೆ. ಅಶ್ಲೀಲ ಪದಗಳನ್ನು ಬೈದಿರುತ್ತಾರೆ. ಬೈಕ್ ತೆಗೆಯುತ್ತೇನೆ ಎಂದು ಹೇಳಿದರೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಲಿಂಗರಾಜ್ ದೂರಿದ್ದಾರೆ.
ಇದನ್ನೂ ಓದಿ :ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ಸೊಗಸಾಗಿಸುವ ಆತ್ಮಶಕ್ತಿ : ರಹಮತ್ ತರೀಕೆರೆ
ಗೌರಮ್ಮ, ಗುರುಮೂರ್ತಿ, ಹರೀಶ್, ರೇಖಾ, ಶಿಲ್ಪಾ ಎನ್ನುವವರು ನನ್ನ ಮಗ ಕಲ್ಲೇಶ್ ಮತ್ತು ಸೊಸೆ ಕಾವ್ಯಾ ಅವರನ್ನು ನಿಂದಿಸಿದ್ದಾರೆ. ಪ್ರಶ್ನಿಸಿದ್ದಕ್ಕೆ ಕೊಡಲಿ, ಕುಡುಗೋಲು, ಕಬ್ಬಣಿದ ರಾಡ್ ಹಿಡಿದುಕೊಂಡು ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಾನು ಆಸ್ಪತ್ರೆಯಲ್ಲಿದ್ದ ಚಿಕಿತ್ಸೆ ಪಡೆದುಕೊಂಡಿದ್ದೇನೆ ಎಂದು ಲಿಂಗರಾಜ್ ಅವರು ಜನಶಕ್ತಿ ಮೀಡಿಯಾಗೆ ತಿಳಿಸಿದ್ದಾರೆ.
ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎನ್‌ಎಸ್ ಕಾಯ್ದೆ ಅಡಿಯಲ್ಲಿ ಸೆಕ್ಷನ್ 189(3), 191(3), 115 (2), 118)(1), 352, 351(3) 190 ದೂರು ದಾಖಲಾಗಿದೆ. ಆದರೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ತಪ್ಪು ಮಾಡಿದವರನ್ನು ಇಷ್ಟು ಬೇಗೆ ಜಾಮೀನಿ ಸಿಕ್ಕರೆ ಹೇಗೆ? ಎಂದು ಲಿಂಗರಾಜ್ ಪ್ರಶ್ನಿಸಿದ್ದಾರೆ.
ನಮಗೂ ಅವರಿಂದ ಜೀವಬೆದರಿಕೆ ಇದೆ. ಹಾಗಾಗಿ ಅವರಿಗೆ ನೀಡಿರುವ ಜಾಮೀನನನ್ನು ರದ್ದು ಮಾಡಬೇಕು. ಮತ್ತು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಕ್ಕೆ ಗೌರಮ್ಮ ಮತ್ತು ಇತರರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಲಿಂಗರಾಜ್ ಕುಟುಂಬದವರು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ : ಕನಿಷ್ಠ ವೇತನ ನೀಡಿ, ನಮ್ಮನ್ನು ಖಾಯಂ ಮಾಡಿ | ಅಂಗನವಾಡಿ,ಆಶಾ, ಬಿಸಿಯೂಟ ನೌಕರರ ಪ್ರತಿಭಟನೆ | Janashakthi Media
