ಸಿಎಂ ಬದಲಾವಣೆ ಚರ್ಚೆ : ಪಕ್ಷಕ್ಕೂ ಕೆಲಸಕ್ಕೂ ಹಿನ್ನಡೆ – ಜಗದೀಶ್ ಶೆಟ್ಟರ್

ಹುಬ್ಬಳ್ಳಿ: “ಸಿಎಂ ಬದಲಾವಣೆ ವಿಷಯ ಪದೇ ಪದೇ ಯಾಕೆ ಚರ್ಚೆ ಆಗುತ್ತಿದೆ ಎಂದು ತಿಳಿಯುತ್ತಿಲ್ಲ, ಆದರೆ ಇದರಿಂದ ಸರ್ಕಾರಕ್ಕೆ ಹಾಗೂ ಪಕ್ಷದ ವರ್ಚಸ್ಸಿಗೂ ಧಕ್ಕೆ ಆಗುತ್ತಿದೆ” ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಎಂ ಬದಲಾವಣೆಯ ಚರ್ಚೆ, ಚಟುವಟಿಕೆಗಳಿಂದ ನಮಗೂ ಕೆಲಸ ಮಾಡಲು ಆಗುತ್ತಿಲ್ಲ. ಇದು ಸರ್ಕಾರದ ಸಂಪೂರ್ಣ ಆಡಳಿತಕ್ಕೆ ಹೊಡೆತ ಬೀಳುತ್ತಿದೆ” ಎಂದರು.

ಇನ್ನು ಬಿ.ಎಸ್. ಯಡಿಯೂರಪ್ಪ ಮೊದಲಿನಿಂದಲೂ ಪಕ್ಷ ಕಟ್ಟಿ ಬೆಳೆಸಿದವರು. ಅದಕ್ಕಾಗಿ ಅವರು ವರಿಷ್ಠರು ಹೇಳಿದಂತೆ ಕೇಳುತ್ತೇನೆ ಎಂದಿದ್ದಾರೆ. ಅವರ ಮಾತಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. 5-6 ತಿಂಗಳಿಂದ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದೆ‌. ಇದು ಎಲ್ಲಿ ಹುಟ್ಟಿತು ಎಂದು ತಿಳಿಯುತ್ತಿಲ್ಲ.

ಇದನ್ನೂ ಓದಿ : ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ – ಯಡಿಯೂರಪ್ಪ.

ಈಗ ನಾಯಕತ್ವ ಬದಲಾವಣೆ ಬಗ್ಗರ ವರಿಷ್ಠರು ಮತ್ತು ನಮ್ಮ ಹಂತದಲ್ಲಿ ಚರ್ಚೆಯೇ ನಡೆದಿಲ್ಲ” ಎಂದಿದ್ದಾರೆ. ಲಾಕ್ ಡೌನ್ ವಿಚಾರವಾಗಿ ಮಾತನಾಡಿದ ಅವರು, “ಸೋಂಕಿತರ ಪ್ರಮಾಣ ಶೇ 5ಕ್ಕಿಂತ ಕಡಿಮೆ ಬರೋವರರೆಗೂ ಲಾಕ್‌ಡೌನ್‌ ತೆರವು ಮಾಡುವುದಿಲ್ಲ. ಜೂನ್‌ 14ರ ನಂತರ ಪರಿಸ್ಥಿತಿ ನೋಡಿಕೊಂಡು ಹಂತಹಂತವಾಗಿ ಸಡಿಲಿಕೆ ಮಾಡಲಾಗುವುದು” ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *