ಪ್ರಕೃತಿಯನ್ನು ಪ್ರೀತಿಸುವ ಕೆಲಸವಾಗಬೇಕು; ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಸಾರ್ವಜನಿಕರು, ಪ್ರಕೃತಿಯನ್ನು ಪ್ರೀತಿಸುವ ಕೆಲಸವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. 

ಇಂದು  ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ 2023 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ,  ಪ್ರತಿಯೊಬ್ಬರೂ ಕೂಡ ನಮ್ಮ ಪರಿಸರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳವಂತಹ ಕೆಲಸ ಮಾಡಬೇಕು. ಆ ಜಾಗೃತಿ ಪ್ರತಿಯೊಬ್ಬರಿಗೂ ಕೂಡ ಬರಬೇಕು, ನಾವು ಎಷ್ಟೇ ಕಾನೂನುಗಳನ್ನು ಮಾಡಿ ನಿಯಮಗಳನ್ನು, ಸುತ್ತೋಲೆಯನ್ನು ಹೊರಡಿಸಿದರು ಕೂಡ ಜನರಲ್ಲಿ ಜಾಗೃತಿ ಬರದೇ ಹೋದರೆ ಉದ್ದೇಶ ವಿಫಲವಾಗುತ್ತದೆ. ಉದ್ದೇಶ ಸಫಲವಾಗಬೇಕಾದರೆ ಪ್ರತಿಯೊಬ್ಬರೂ ಸ್ವಯಂ ಜಾಗೃತಿ ಅತ್ಯಂತ ಅವಶ್ಯಕವಾಗಿದೆ ಎಂದರು. 

ನಾವು, ನಮ್ಮ ಬದುಕಿನಲ್ಲಿ ಬಹಳ ಜನ ಪ್ರಕೃತಿ, ಈ ಭೂಮಿಯ‌ ಬಗ್ಗೆ ಪ್ರೀತಿಯಿಂದ ಬೆಳೆಸಿಕೊಂಡು ಇರುವಂತಹ ಜನಗಳು ಇದ್ದಾರೆ, ಆದರಿಂದ ನಾವು ಪ್ರಕೃತಿ ನಮ್ಮ ಭೂಮಿತಾಯಿಯನ್ನು ಪ್ರೀತಿಸಬೇಕು, ಅದು ಪ್ರತಿಯೊಬ್ಬರ ಕರ್ತವ್ಯ ಎಂದು  ಭಾವಿಸಿಕೊಳ್ಳಬೇಕು. ನಮಗೆಲ್ಲಾ ಜೀವನ ಕೊಟ್ಟಿರುವಂತದ್ದು ಪ್ರಕೃತಿ ಮತ್ತು ಭೂಮಿ ಈ ಭೂಮಿಯನ್ನು ಮತ್ತು ಪ್ರಕೃತಿಯನ್ನು ಉಪಯೋಗಿಸಿಕೊಂಡು ಬದುಕುತ್ತಾ ಇದ್ದೇವೆ ಅದು ಆರೋಗ್ಯವಾಗಿರಬೇಕಾದರೆ ನಾವು ಅದನ್ನು ಪ್ರೀತಿಸಬೇಕು ಅದನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು. 

ಇದನ್ನೂ ಓದಿ.. ಮುಂದಿನ ಪೀಳಿಗೆಯ ಉತ್ತಮ ಆರೋಗ್ಯಕ್ಕಾಗಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ

ಪ್ರಕೃತಿ, ಭೂಮಿ, ಕಾಡು, ನೀರು,ಪರಿಸರ ಆರೋಗ್ಯಕರವಾಗಿದ್ದಾಗ ಮಾತ್ರ ನಮ್ಮ ಬದುಕು ಹಸನಾಗಲು ಸಾಧ್ಯ, ನಮ್ಮ ಬದುಕು ಆರೋಗ್ಯವಾಗಿರುವುದಕ್ಕೆ ಸಾಧ್ಯ ಆ ಕಾರಣಕ್ಕಾಗಿ ನಾವೆಲ್ಲರೂ ಪ್ರಕೃತಿಯನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಪ್ರಕೃತಿಯಿಂದ ಭೂಮಿಯಿಂದ ನಾವು ಎಲ್ಲಾವನ್ನೂ ಪಡೆದುಕೊಳ್ಳುತ್ತೆವೆ ಅದಕ್ಕೆ ಹಿಂತಿರುಗಿ ನಾವು ಏನಾದರೂ ಕೊಡಬೇಕಾದರೆ ಅದನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬರದ್ದಾಗಿದೆ ಎಂದು ಕರೆ ನೀಡಿದರು. 

ಹಿಂದೆ ಹಳ್ಳಿಯ ಕಡೆಗಳಲ್ಲಿ ಪೂರ್ವಿಕರು ಒಂದು ಮರ ಕಡಿದರೆ ಒಂದಲ್ಲ ಎರಡಲ್ಲ ಜಾಸ್ತಿ ಗಿಡಗಳನ್ನು ನೆಡುವ ಕೆಲಸ ಮಾಡುತ್ತಿದ್ದರು. ಆದರೆ ನಾವು ಪ್ರಸ್ತುತ ದಿನಗಳಲ್ಲಿ ಗಿಡಗಳನ್ನು ಕಡಿದರು ಕೂಡ ಒಂದು ಗಿಡ ನೆಡುವುದಿಲ್ಲ ಇದೇ ಅವರಿಗೂ ನಮಗೂ ಇರುವ ವ್ಯತ್ಯಾಸ. ಕಾಡು ಬೆಳೆಸುವಂತಹದ್ದು ಪ್ರತಿಯೊಬ್ಬರ ಕರ್ತವ್ಯ,ಕಾಡು ಚೆನ್ನಾಗಿದ್ದರೆ ಮಳೆ ಚೆನ್ನಾಗಿ ಬರುತ್ತದೆ,ಮಳೆ ಬಂದರೆ,ಬೆಳೆ ಚೆನ್ನಾಗಿ ಬರುತ್ತದೆ ಅದರಿಂದ ಜೀವನ ಕೂಡ ಸುಲಭವಾಗುತ್ತದೆ. ಇದು ಒಂದಕ್ಕೊಂದು ಸಂಬಂಧ ಇರುವಂತದ್ದು ಪ್ರಕೃತಿ ಮತ್ತು ಮನುಷ್ಯನ ಬದುಕು ಒಂದಕ್ಕೊಂದು ಸಂಬಂಧವಿದೆ. ಒಂದು ಬಿಟ್ಟು ಇನ್ನೊಂದು ಇರೋದಕ್ಕೆ ಸಾಧ್ಯವೇ ಇಲ್ಲ.ಆಗಾಗಿ ನಾವು ಪ್ರಕೃತಿ ಜತೆ ಬದುಕುವವರು, ಪ್ರಕೃತಿಯಲ್ಲಿ ಆಗುವಂತಹ ಅನಾಹುತಗಳನ್ನು ತಪ್ಪಿಸುವಂತಹ ಕೆಲಸಗಳನ್ನು ನಾವುಗಳು ಪ್ರತಿಯೊಬ್ಬರೂ ಮಾಡಬೇಕು ಇದು ಎಲ್ಲರ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ  ಡಿಕೆ ಶಿವಕುಮಾರ್, ಕೃಷಿ  ಸಚಿವ ಈಶ್ವರ ಖಂಡ್ರೆ, ಆರೋಗ್ಯ  ಸಚಿವ ದಿನೇಶ್ ಗುಂಡೂರಾವ್ ಇನ್ನಿತರರು ಭಾಗಿಯಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *