ಸ್ಟಾಲಿನ್‌ ಪುತ್ರಿ-ಅಳಿಯನ ಮನೆ ಮೇಲೆ ಐಟಿ ದಾಳಿ

ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರ ಮಗಳು ಸೆಂಥಮರೈ, ಅಳಿಯ ಶಬರೀಶನ್ ಸೇರಿದಂತೆ ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸೆಂಥಮರೈ ಮತ್ತು ಶಬರೀಶನ್ ಅವರು ವಾಸವಿರುವ ಸೀನಿಕ್ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ನೀಲಾಂಗರೈ ನಿವಾಸ ಮತ್ತು ಕಚೇರಿಗಳಲ್ಲಿ ಇಂದು ಬೆಳಿಗ್ಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ಇದನ್ನು ಓದಿ : ಬಿಜೆಪಿ ಅಭ್ಯರ್ಥಿ ಕಾರಲ್ಲಿ ಇವಿಎಂ ಪತ್ತೆ: ನಾಲ್ಕು ಅಧಿಕಾರಿಗಳ ಅಮಾನತು

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕನಿಷ್ಠ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದು, ಉದ್ಯಮಿಯೂ ಆಗಿರು ವಶಬರೀಶನ್‌ ಅವರು ಸ್ಟಾಲಿನ್‌ ಅವರ ರಾಜಕೀಯ ಸಲಹೆಗಾರರು.

ಡಿಎಂಕೆ ಅಣ್ಣಾ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಕೆ.ಮೋಹನ್‌ ಅವರ ಪುತ್ರ ಕಾರ್ತಿಕ್‌ ಮೋಹನ್‌ ಅವರ ನಿವಾಸದ ಮೇಲೆ ದಾಳಿ ನಡೆದಿರುವ ಸಾಧ್ಯತೆ ಇದೆ ಎಂಬವು ಹರಿದಾಡುತ್ತಿದೆ.

ಆದರೆ ಆದಾಯ ತೆರಿಗೆ ಅಧಿಕಾರಿಗಳು ದಾಳಿಯನ್ನು ಖಚಿತಪಡಿಸುತ್ತಿಲ್ಲ, ನಿರಾಕರಿಸುತ್ತಲೂ ಇಲ್ಲ.

ಐಟಿ ದಾಳಿಯು ರಾಜಕೀಯ ಪ್ರೇರಿತವಾಗಿದೆ ಎಂದು ಚುನಾವಣಾ ಆಯೋಗಕ್ಕೆ ರಾಜ್ಯ ಸಭಾ ಸದಸ್ಯರು ಹಾಗೂ ಡಿಎಂಕೆ ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್.‌ ಎಸ್.‌ ಭಾರತಿ ಅವರು ಪತ್ರವೊಂದನ್ನು ಬರೆದಿದ್ದಾರೆ.

ಇದನ್ನು ಓದಿ : ರಾಷ್ಟ್ರ ರಾಜಧಾನಿ ತಿದ್ದುಪಡಿ ಕಾಯ್ದೆ (NCT) – ಒಕ್ಕೂಟ ವ್ಯವಸ್ಥೆಯ ಮೇಲೆ ಬಿಜೆಪಿ ಗದಾಪ್ರಹಾರ

ಐಟಿ ದಾಳಿಗಳು ಡಿಎಂಕೆ ಆರ್ ಎಸ್ ಭಾರತಿ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ, ಇಸಿ ಮಧ್ಯಪ್ರವೇಶಿಸಿ ಮತ್ತು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಐಟಿ ನಿರ್ದೇಶಿಸುತ್ತದೆ.

ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈಮುರುಗನ್  ಅವರು ‘ಇದೊಂದು ರಾಜಕೀಯ ಉದ್ದೇಶದ ದಾಳಿ. ಚುನಾವಣಾ ಪ್ರಚಾರ ಪೂರ್ಣಗೊಳಿಸಿ, ಮತದಾನಕ್ಕೆ ಸಜ್ಜಾಗುತ್ತಿರುವ ಈ ಸಮಯದಲ್ಲಿ ಪಕ್ಷದ ಮುಖಂಡರ ನಿವಾಸದ ಮೇಲೆ ನಡೆದಿರುವ ಈ ದಾಳಿಯಾಗಿದೆ ಆರೋಪಿಸಿದೆ.

‘ಡಿಎಂಕೆ ಇಂಥಹ ದಾಳಿಗಳಿಗೆ ಹೆದರುವಂತಹ ಪಕ್ಷವಲ್ಲ. ಇಂಥ ಅನೇಕ ವಿರೋಧವನ್ನು ಈಗಾಗಲೇ ಪಕ್ಷ ಎದುರಿಸಿದೆ. ಇದರಿಂದ ಪಕ್ಷಕ್ಕೆ ಯಾವುದೇ ರೀತಿ ಹಿನ್ನಡೆಯಾಗುವುದಿಲ್ಲʼ ಎಂದು ಹೇಳಿದರು.

ವಿಸಿಕೆ ನಾಯಕ ಮತ್ತು ಸಂಸದ ಥೋಲ್‌ ತಿರುಮಾವಾಲ್ವನ್‌ ಅವರು ಈ ದಾಳಿ ಸೇಡು ತೀರಿಸಿಕೊಳ್ಳುವ ತಂತ್ರವಾಗಿದೆ. ಡಿಎಂಕೆ ನಾಯಕನ ಮಗಳ ನಿವಾಸದ ಮೇಲಿನ ಆದಾಯ ತೆರಿಗೆ ಅಧಿಕಾರಿಗಳು ಇದ್ದಕ್ಕಿದ್ದಂತೆ ದಾಳಿ ಮಾಡುತ್ತಾರೆ ಅಂದರೆ, ಬಿಜೆಪಿ ಮೈತ್ರಿಕೂಟದ ವೈಫಲ್ಯವನ್ನು ಎತ್ತಿತೋರಿಸುತ್ತದೆ. ಜನರು ಇಂತಹ ರಾಜಕೀಯಪ್ರೇರಿತ ದಾಳಿಗಳನ್ನು ಸ್ವೀಕರಿಸುವುದಿಲ್ಲ. ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ಕಳೆದ ವಾರದ ಡಿಎಂಕೆ ಪಕ್ಷದ ತಿರುವಣ್ಣಾಮಲೈ (ದಕ್ಷಿಣ) ಜಿಲ್ಲಾ ಕಾರ್ಯದರ್ಶಿ ಮತ್ತು ತಿರುವಣ್ಣಾಮಲೈ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಇ.ವಿ.ವೇಲು ಅವರ ಆಸ್ತಿಗಳ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

ತಮಿಳುನಾಡಿನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ಡಿಎಂಕೆ ಆಪ್ತರ ಮೇಲೆ ದಾಳಿ ಮಾಡಿರುವುದು ಹಲವು ಅನುಮಾನಗಳನ್ನು ಸೃಷ್ಠಿಸದೆ. ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *