ಜಾರ್ಖಂಡ್ ಸಿಎಂ ಆಪ್ತರ ನಿವಾಸದ ಮೇಲೆ ಐಟಿ ದಾಳಿ

ರಾಂಚಿ: ಜಾರ್ಖಂಡ್ ಸಿಎಂ ಹೇಮಂತ್ ಸುರೇನ್ ಅವರ ಅಪ್ತ ಕಾರ್ಯ ಒದರ್ಶಿ ಶ್ರೀವಾತ್ಸವ ಹಾಗೂ ಅವರ ಸಂಬಂಧಿಕರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೇಮಂತ್ ಸುರೇನ್ಅ ವರ ಆಪ್ತ ಕಾರ್ಯದರ್ಶಿ ಶ್ರೀವಾತ್ಸವ ಹಾಗೂ ಸಂಬಂಧಿಕರು ಮತ್ತು ಆಪ್ತರಿಗೆ ಸೇರಿದ 17ರಿಂದ 18 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಾಂಚಿಯ ಏಳು ಸ್ಥಳಗಳು ಮತ್ತು ಜಮ್ಶೆಡ್ಪುರದ 9 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುತ್ತಿದೆ. ಜಮ್ಶೆಡ್ಪುರದ ಅಂಜನಿಯಾ ಇಸ್ಪತ್ ಸೇರಿದಂತೆ ಇತರ ಸ್ಥಳಗಳಲ್ಲಿ ಸಹ ದಾಳಿ ನಡೆಸಲಾಗಿದೆ. ಮಾಹಿತಿ ಪ್ರಕಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ಅಕ್ರಮಗಳು ನಡೆಸಿರುವ ಕುರಿತು ಬಂದಿರುವ ದೂರಿನ ಆಧಾರದ ಮೇಲೆ ಈ ದಾಳಿ ನಡೆಸಿದ್ದಾರೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಲಹೆಗಾರ ಸುನಿಲ್ ಶ್ರೀವಾಸ್ತವ ಅವರು ತೆರಿಗೆಯಲ್ಲಿ ಕೆಲವು ಅಕ್ರಮಗಳನ್ನು ಎಸಗಿದ್ದಾರೆ ಎಂಬ ಮಾಹಿತಿ ಐಟಿಗೆ ಸಿಕ್ಕಿತ್ತು. ಇದಾದ ಬಳಿಕ ಐಟಿ ಇಲಾಖೆ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿಇಸ್ಲಾಮಾಬಾದ್‌ ರೈಲ್ವೆ ನಿಲ್ದಾಣದಲ್ಲಿ ಭೀಕರ ಸ್ಫೋಟ; 20 ಮಂದಿ ಸಾವು

ಈ ಹಿಂದೆ ಅಕ್ಟೋಬರ್ 26ರಂದು, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಹವಾಲಾ ಮೂಲಕ ಹಣದ ವ್ಯವಹಾರದ ಮಾಹಿತಿಯ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ರಾಂಚಿ, ಜಮ್ಶೆಡ್ಪುರ, ಗಿರಿದಿಹ್ ಮತ್ತು ಕೋಲ್ಕತ್ತಾದಲ್ಲಿ ದಾಳಿ ನಡೆಸಿತ್ತು. ಈ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆ ಹವಾಲಾ ದಂಧೆಕೋರರ ಸ್ಥಳಗಳಿಂದ 150 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಮತ್ತು ಹೂಡಿಕೆ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಇದಕ್ಕೂ ಮುನ್ನ ಅಕ್ಟೋಬರ್ 14ರಂದು ಜಾರಿ ನಿರ್ದೇಶನಾಲಯ ತಂಡ ಹೇಮಂತ್ ಸೊರೇನ್ ಸರ್ಕಾರದ ಸಚಿವ ಮಿಥಿಲೇಶ್ ಠಾಕೂರ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಈ ಅವಧಿಯಲ್ಲಿ ಇಡಿ 20 ಕಡೆ ದಾಳಿ ನಡೆಸಿತ್ತು. ಜಲ ಜೀವನ್ ಮಿಷನ್ಗೆ ಸಂಬಂಧಿಸಿದ ಯೋಜನೆಗಳಲ್ಲಿನ ಅಕ್ರಮಗಳ ಬಗ್ಗೆ ಈ ದಾಳಿ ನಡೆದಿದೆ.

ಮಿಥ್ಲೇಶ್ ಠಾಕೂರ್ ಅವರ ಸಹೋದರ ವಿನಯ್ ಠಾಕೂರ್, ಖಾಸಗಿ ಕಾರ್ಯದರ್ಶಿ ಹರೇಂದ್ರ ಸಿಂಗ್ ಮತ್ತು ಹಲವು ಇಲಾಖೆ ಎಂಜಿನಿಯರ್ಗಳ ಮನೆಗಳ ಮೇಲೆ ಇಡಿ ತಂಡ ದಾಳಿ ನಡೆಸಿತ್ತು. ಸಚಿವ ಮಿಥಿಲೇಶ್ ಠಾಕೂರ್ ಮತ್ತು ಅವರ ಸಂಬಂಧಿಕರ ಮನೆ ಮೇಲೆ ಇಡಿ ದಾಳಿ ನಡೆದಿದ್ದು, ಇದು ಅನಿರೀಕ್ಷಿತವೇನಲ್ಲ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *