ಬೆಂಗಳೂರು ಸೇರಿದಂತೆ 30 ಕಡೆ ಐಟಿ ಅಧಿಕಾರಿಗಳು ದಾಳಿ

ಬೆಂಗಳೂರು: ಇಂದು ಬುಧವಾರ, ಮೈಸೂರು, ಮಂಡ್ಯ, ಬೆಂಗಳೂರು, ಆರ್.ಟಿ. ನಗರ, ಇಳವಾಲ, ರಾಮಕೃಷ್ಣ ಸೇರಿದಂತೆ 30 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿಗಳು, ಬಿಲ್ಡರ್‌ಗಳ ಮನೆ ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ.

ಮನೆ, ಕಚೇರಿ, ಕಲ್ಯಾಣ ಮಂಟಪ ಸೇರಿ ಎಲ್ಲಾ ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದೂ, ಸುಮಾರು 90 ವಾಹನಗಳಲ್ಲಿ ಹೋಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮನೆ, ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಇಂದು ಮತದಾನ; ಫೆಬ್ರವರಿ 8ಕ್ಕೆ ಫಲಿತಾಂಶ

ಆದಾಯ ತೆರಿಗೆ ವಂಚನೆ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ದೆಹಲಿ, ಚೆನೈ, ಗೋವಾ,ಕೋಲ್ಕತ್ತಾದಿಂದ ಅಧಿಕಾರಿಗಳು ಬಂದಿದ್ದಾರೆ. ಬೆಳಗ್ಗೆ 5 ಗಂಟೆಗೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು ಭ್ರಷ್ಟರಿಗೆ ಐಟಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಐಟಿ ದಾಳಿ ನಡೆದಿದ್ದು ಮನೆ ಕಚೇರಿಗಳ ಶೋಧ ಕಾರ್ಯ ನಡೆಸಿದ್ದಾರೆ. ಮದುವೆ ಸಮಾರಂಭಕ್ಕೆ ಹೋಗುವ ರೀತಿ ಕಾರ್ ಗಳನ್ನು ಸಿಂಗರಿಸಿಕೊಂಡು ಬಂದು ದಾಳಿ ನಡೆಸಲಾಗಿದೆ. ಮಾಹಿತಿ ಸೋರಿಕೆಯಾದ ಹಿನ್ನಲೆಯಲ್ಲಿ ಮದುವೆಗೆ ಹೋಗುವ ಕಾರ್ ರೀತಿ ಸಿಂಗರಿಸಿ ದಾಳಿ ನಡೆಸಲಾಗಿದೆ.

ಇದನ್ನೂ ನೋಡಿ: “ಸೌಹಾರ್ದತೆ – ಸಮಾನತೆ” ದೇಶದ ಎರಡು ಕಣ್ಣುಗಳು – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *