ಬೆಂಗಳೂರು: ಸಭಾಧ್ಯಕ್ಷ ಸ್ಥಾನವನ್ನ ಅಲಂಕರಿಸಿದವರು ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ವದಂತಿ ಜೋರಾಗಿದ್ದು, ಸ್ಪೀಕರ್ ಆದವರು ಚುನಾವಣೆಯಲ್ಲಿ ಸೋಲುತ್ತಾರೆ ಎಂಬುದು ಮೌಡ್ಯ. ಈ ರೀತಿಯ ಮೌಡ್ಯವನ್ನು ಹರಿಯಬಿಡಬಾರದು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಈ ಕುರಿತು ಬುಧವಾರ ಅಧಿವೇಶನದಲ್ಲಿ ಮಾತನಾಡಿದ ಅವರು, ಈ ಹಿಂದೆ ಸ್ಪೀಕರ್ ಆಗಿದ್ದ ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಸದನಕ್ಕೆ ಆರಿಸಿ ಬಂದಿದ್ದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕಾಗೋಡು ತಿಮ್ಮಪ್ಪ ಮತ್ತೊಮ್ಮೆ ಆರಿಸಿ ಬಂದಿದ್ದರು ಎಂದು ತಿಳಿಸಿದ್ದಾರೆ. ಹಲವು ಸ್ಪೀಕರ್ ಗಳು ಒಳ್ಳೆಯ ಕೆಲಸ ಮಾಡಿದ್ದಾರೆ.
ಸ್ಪೀಕರ್ ಆದವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು ಎಂದೇನಿಲ್ಲ, ಆದರೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದು ನಿನಗೆ ಬಿಟ್ಟ ವಿಚಾರ ಎಂದರು. ಈ ನಿಟ್ಟಿನಲ್ಲಿ ಯು.ಟಿ ಖಾದರ್ ವಿರುದ್ಧ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಕಬಾರದು. ಈ ಹಿಂದೆ ಇಂತಹ ಸಂಪ್ರದಾಯ ಇತ್ತು ಎಂದು ರಾಯರೆಡ್ಡಿ ಗಮನ ಸೆಳೆದರು.
ಇನ್ನೂ ದಿನದಿಂದ ದಿನಕ್ಕೆ ಸದನದಲ್ಲಿ ಶಿಸ್ತು ಕಡಿಮೆ ಆಗುತ್ತಿದೆ. ಅದನ್ನು ಕಾಪಾಡಬೇಕು. ಮುಂದಿನ ದಿನಗಳಲ್ಲಿ ಸಹಕಾರ ಮಾಡಿದ್ದದ್ದರೆ ಕ್ರಮ ಕೈಗೊಳ್ಳಬೇಕು. ಸಮಯ ಸರಿಯಾದ ಸಮಯಕ್ಕೆ ನಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.