ಎರಡು ಗುಂಪುಗಳಿಂದ ದೇಶವನ್ನು ರಕ್ಷಿಸಬೇಕಿದೆ: ಪ್ರೊ. ಕೆ.ಮರುಳಸಿದ್ದಪ್ಪ

ಬೆಂಗಳೂರು: ಮಹಾತ್ಮ – ಹುತಾತ್ಮ ಸೌಹಾರ್ದ ಸಂಕಲ್ಪ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮವು ಸೌಹಾರ್ದ ಕರ್ನಾಟಕ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಿತು. ಶಾಂತಿ

ಕಾರ್ಯಕ್ತಮದಲ್ಲಿ ಸಾಹಿತಿಗಳು, ಚಿಂತಕರು, ಜನಪರ ಹೋರಾಟಗಳ ಮುಖಂಡರು, ದಲಿತ ಸಂಘಟನೆಯ ನಾಯಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ಸಾಹಿತಿ ಪ್ರೊ. ಕೆ.ಮರುಳಸಿದ್ದಪ್ಪ ಮಾತನಾಡಿದರು. ಇವತ್ತು ದೇಶದಲ್ಲಿ ಎರಡು ದೊಡ್ಡ ಗುಂಪುಗಳಿವೆ. ಒಂದು ದ್ವೇಷ ಭಕ್ತರದು, ಇನ್ನೊಂದು ದೇಶ ಭಕ್ತರದು. ದ್ವೇಷ ಭಕ್ತರು ಮಾಡುತ್ತಿರುವ ಅವಾಂತರಕ್ಕೆ ಈ ದೇಶ ಸರಿಯಾದ ಉತ್ತರವನ್ನು ಕಂಡುಕೊಳ್ಳದಿದ್ದರೆ, ದೇಶ ಶಾಂತಿಯುತವಾಗಿ ಉಳಿಯೋದು ಕಷ್ಟ ಎಂದು ಮರುಳಸಿದ್ದಪ್ಪ ಎಚ್ಚರಿಸಿದರು.

ಇದನ್ನೂ ಓದಿ: ನಮ್ಮ ಸಂವಿಧಾನವು ಅಷ್ಟು ಯಶಸ್ವಿಯಾಗಿ ಅನುಷ್ಟಾನಕ್ಕೆ ಬರಲಿಲ್ಲ: ಜಸ್ಟೀಸ್ ವಿ.ಗೋಪಾಲಗೌಡ

ಮತ್ತೋರ್ವ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಗಾಂಧಿಜಿ ಅವರು ಇವತ್ತು ಯಾಕೆ ಪ್ರಸ್ತುತ ಆಗುತ್ತಾರೆ ಎನ್ನುವುದಕ್ಕೆ ಇವತ್ತಿನ ದಿನಮಾನವೇ ಉದಾಹರಣೆ. ಇವತ್ತು ದ್ವೇಷ ಹೆಚ್ಚಾಗುತ್ತಿದೆ. ಭಾಷಿಕ ಹಿಂಸೆ, ಮಾನಸಿಕ ಹಿಂಸೆ, ಸಾಮಾಜಿಕ ಸಂರಚನೆಯಲ್ಲಿಯೂ ಹಿಂಸೆಯನ್ನು ನೋಡುತ್ತಿದ್ದೇವೆ. ಆದರೆ ತಮ್ಮ ಇಡಿ ಜೀವನದಲ್ಲಿ ಧಾರ್ಮಿಕ ಸಹಿಷ್ಣುತೆಗಾಗಿ ಗಾಂಧೀಜಿ ಬದುಕಿದರು ಎಂದು ತಿಳಿಸಿದರು.

ಚಿಂತಕ ಡಾ.ಜಿ.ರಾಮಕೃಷ್ಣ ಮಾತನಾಡಿ, ಕೋಮುವಾದಿಗಳು ದೇಶದಲ್ಲಿ ಏನು ಬೇಕಾದರೂ ಮಾಡಬಹುದು. ಅದಕ್ಕೆ ಪ್ರತಿಯಾಗಿ ಮಾಡುವಂತಿಲ್ಲದಂತಾಗಿದೆ. ದೇಶವನ್ನು ಯಾರು ಆಳುತ್ತಿದ್ದಾರೆ. ಎನ್ನುವುದು ಮುಖ್ಯವಲ್ಲ, ಏನು ಅನುಸರಿಸುತ್ತಿದ್ದೇವೆ ಎನ್ನುವುದು ಮುಖ್ಯ. ಇತ್ತೀಚಿಗೆ ಅಂಬೇಡ್ಕರ್ ಹೆಸರಿನ ಬದಲು ದೇವರ ಹೆಸರೇಳಿದರೆ ಪುಣ್ಯ ಬರುತ್ತಿತ್ತು ಎಂದು ಕೇಂದ್ರಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಅಮಿತ್ ಶಾಗೆ ಬಂದಂತ ಪುಣ್ಯ ಈ ದೇಶಕ್ಕೆ ಬರದೇ ಇದ್ದರೆ ಸಾಕು ಎಂದು ಹೇಳಿದರು.

ಇದನ್ನೂ ನೋಡಿ: ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ. ಸ್ಥಳ:- ವಿಧಾನ ಸೌಧ

Donate Janashakthi Media

Leave a Reply

Your email address will not be published. Required fields are marked *