ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ 171 ರ ದುರಂತಕಾರೀ ಅಪಘಾತಕ್ಕೆ ಸಂಬಂಧಿಸಿದಂತೆ, ‘ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆ’ (ICAO) ನಿಗದಿಪಡಿಸಿರುವ ಅಂತರರಾಷ್ಟ್ರೀಯ ವಿಧಿ-ವಿಧಾನಗಳು ಮತ್ತು ಮಾನದಂಡಗಳ ಪ್ರಕಾರ, ‘ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ’(AAIB) ಅಪಘಾತದ ಸುತ್ತಲಿನ ಕಾರಣಗಳು ಮತ್ತು ಸಂದರ್ಭಗಳ ಬಗ್ಗೆ ತನ್ನ ಸ್ವತಂತ್ರ ತನಿಖೆಯನ್ನು ಪ್ರಾರಂಭಿಸಿದೆ.
ಈ ಕಾರ್ಯವನ್ನು ಮುಂದುವರಿಸಲು ಅದು ವಿಮಾನದ “ಕಪ್ಪು ಪೆಟ್ಟಿಗೆಗಳು” ಮತ್ತು ಇತರ ಎಲ್ಲಾ ಪುರಾವೆಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ಸಂಬಂಧಪಟ್ಟ ಅಂತರರಾಷ್ಟ್ರೀಯ ಸಂಸ್ಥೆಗಳು, ವಿಮಾನ ಮತ್ತು ಎಂಜಿನ್ ತಯಾರಕರು ಮತ್ತು ಇತರ ಪಾಲುದಾರರ ಸಹಕಾರದೊಂದಿಗೆ ತನ್ನ ತನಿಖೆಗಳನ್ನು ಪೂರ್ಣಗೊಳಿಸುತ್ತದೆ.
ಆದರೆ ಈ ನಡುವೆ ಒಂದು ಅಚ್ಚರಿಯ ಬೆಳವಣಿಗೆ ನಡೆದಿದೆ; ಇವೇ ಹಲವಾರು ಗುರಿಗಳೊಂದಿಗೆ ಭಾರತ ಸರ್ಕಾರವು ಗೃಹ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು “ಉನ್ನತ ಮಟ್ಟದ ಸಮಿತಿ” (HLC) ಯನ್ನು ಸ್ಥಾಪಿಸಿದೆ, ಇತರ ಹಲವಾರು ಉದ್ದೇಶಗಳೊಂದಿಗೆ, “ಕಪ್ಪು ಪೆಟ್ಟಿಗೆ’ಗಳ ಲಭ್ಯತೆಯೊಂದಿಗೆ ಅಪಘಾತದ “ಮೂಲ ಕಾರಣ”ವನ್ನು ನಿರ್ಧರಿಸುವುದು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂವಹನ ನಡೆಸುವುದು ಈ ಸಮಿತಿಗೆ ವಹಿಸಿರುವ ಕೆಲಸಗಳು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಕೆಟ್ಟ ಆಮದು ನೀತಿಯಿಂದಾಗಿ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ – ಡಿ. ರವೀಂದ್ರನ್
ಅಧಿಕಾರಿಗಳಿಂದ ತುಂಬಿರುವ ಒಂದು ಸಮಾನಾಂತರ ಉನ್ನತಾಧಿಕಾರದ ಸರ್ಕಾರಿ ವಿಮಾನ ಅಪಘಾತ ತನಿಖಾ ಸಮಿತಿಯನ್ನು ನೇಮಿಸಿರುವುದು AAIB ತನಿಖೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಇದು ಸರಕಾರದ ಹಸ್ತಕ್ಷೇಪ ನಡೆಯಬಹುದೇ ಎಂಬ ಅನುಮಾನವನ್ನು ಉಂಟುಮಾಡುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ICAO ಅನುಬಂಧ 13 ರ ಅಡಿಯಲ್ಲಿ AAIB ಅನ್ನು ರಚಿಸುವ ಉದ್ದೇಶವೇ ಸರ್ಕಾರೀ ಹಸ್ತಕ್ಷೇಪದ ಅನುಮಾನಗಳು ಹುಟ್ಟದಂತೆ ಮಾಡುವುದು ಎಂದು ಅದು ಹೇಳಿದೆ.
AI-171 ಅಪಘಾತದ ಕಾರಣ ಮತ್ತು ಸಂದರ್ಭಗಳಿಗೆ ಸಂಬಂಧಿಸಿದಂತೆ AAIB ತನಿಖೆಯ ವ್ಯಾಪ್ತಿಯಲ್ಲಿರುವ ಯಾವುದೇ ಅಂಶ- ವಿಶೇಷವಾಗಿ ಎಐ17 ದುರ್ಘಟನೆಯ ಕಾರಣ ಮತ್ತು ಸಂದರ್ಭಗಳನ್ನು ಕುರಿತ ಅಂಶ HLC ಗೆ ಉಲ್ಲೇಖಿಸಿದ ನಿಯಮಗಳಲ್ಲಿ ಪುನರಾವರ್ತಗೊಂಡಿದ್ದರೆ, ಅದಕ್ಕೆ ವಹಿಸಿಕೊಟ್ಟಿರುವ ಗುರಿ ಮತ್ತು ಉದ್ದೇಶಗಳನ್ನು ತಕ್ಷಣವೇ ಪರಿಷ್ಕರಿಸಬೇಕು ಎಂದು ಪೊಲಿಟ್‍ಬ್ಯುರೊ ಸರಕಾರವನ್ನು ಆಗ್ರಹಿಸಿದೆ. ಅಪಘಾತದ ತನಿಖೆಯನ್ನು ವೃತ್ತಿಪರರು ಮತ್ತು ತಜ್ಞರಿಗೆ ಬಿಡುವುದು ಒಳ್ಳೆಯದು ಎಂದು ಅದು ಹೇಳಿದೆ.
ಇದರ ಬದಲು, ಈಗ ನೇಮಿಸಿರುವ ಉನ್ನತ ಮಟ್ಟದ ಸಮಿತಿ (HLC) ಇತರ ಹಿಂದಿನ ಅಪಘಾತ ತನಿಖಾ ವರದಿಗಳನ್ನು ಪರಿಶೀಲಿಸಬೇಕು ಮತ್ತು ವಿಮಾನ ನಿಲ್ದಾಣಗಳ ಸುತ್ತಮುತ್ತ ನಿಗದಿತ ದೂರ ಮತ್ತು ಮತ್ತು ಸುರಕ್ಷತಾ ನಿಯಮಾವಳಿಗಳ ಅಡಿಯಲ್ಲಿ ಜನವಸತಿ ಮತ್ತು ಕಟ್ಟಡಗಳ ನಿರ್ಮಾಣವನ್ನು ತಡೆಯುವ ವ್ಯವಸ್ಥೆಗಳ ಕಟ್ಟುನಿಟ್ಟಾದ ಅನುಷ್ಠಾನಕ್ಕೆ ಬದ್ಧವಾಗುವಂತೆ ಮಾಡುವ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ರೂಪಿಸುವ ಬಗ್ಗೆ ವಿಚಾರ ಮಾಡಬೇಕು ಎಂದು ಸಿಪಿಐ(ಎಂ) ಹೇಳಿದೆ.
ಅಹಮದಾಬಾದ್‌ನಲ್ಲಿ, ಇನ್ನೂ ಅನೇಕ ಸಾವುನೋವುಗಳು ಸಂಭವಿಸುವ ಸಾಧ್ಯತೆಗಳಿದ್ದವು. ಅದೃಷ್ಟವಶಾತ್ ದೊಡ್ಡ ವೈದ್ಯಕೀಯ ಸೌಲಭ್ಯಗಳು ಬಹಳ ಹತ್ತಿರದಲ್ಲೇ ಲಭ್ಯವಿದ್ದುದರಿಂದ ಹಾಗಾಗಲಿಲ್ಲ. ಭವಿಷ್ಯದಲ್ಲಿ ಇಂತಹ ಅಪಘಾತಗಳು ಸಂಭವಿಸದಂತೆ ದೃಢವಾದ ಕ್ರಮಗಳು ಬೇಕಾಗುತ್ತವೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
ಇದನ್ನೂ ನೋಡಿ: ಹಲ್ಮಿಡಿ ಶಾಸನದಿಂದ ಬೂಕರ್‌ವರೆಗೆ ಹಾಸನದ ಕೊಡುಗೆ: ಬರಗೂರುJanashakthi Media
