ಜಾತಿಗಣತಿ ಬಿಡುಗಡೆಗೆ ಕ್ಯಾಬಿನೆಟ್ ತೀರ್ಮಾನವೇ ಸುಪ್ರೀಂ| ಸಚಿವ ಡಾ.ಎಚ್.ಸಿ. ಮಹದೇವಪ್ಪ

ಮೈಸೂರು: ಜಾತಿಗಣತಿ ವರದಿ ಬಿಡುಗಡೆ ವಿಚಾರದಲ್ಲಿ ಕ್ಯಾಬಿನೆಟ್ ತೀರ್ಮಾನವೇ ಸುಪ್ರೀಂ ಆಗಿದ್ದು, ಅಲ್ಲಿ ಒಪ್ಪಿಗೆ ಆದ ಮೇಲೆ ಮತ್ತೆ ಯಾರ ಮಾತು ಬರಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಜಾತಿಗಣತಿ 

ಮೈಸೂರಿನಲ್ಲಿ ಮಾತನಾಡಿದ ಅವರು, ಎಐಸಿಸಿ ರಾಹುಲ್ ಗಾಂಧಿ ಸೇರಿ ಎಲ್ಲರೂ ವರದಿ ಬಿಡುಗಡೆ ಮಾಡುವಂತೆ ಹೇಳಿದ್ದಾರೆ. ಕ್ಯಾಬಿನೆಟ್ ನಲ್ಲೂ ಈ ಬಗ್ಗೆ ತೀರ್ಮಾನ ಆಗುತ್ತೆ. ರಾಹುಲ್ ಗಾಂಧಿಯೇ ಇದರ ಪರ ಇದ್ದಾರೆ. ಪಕ್ಷ ಹಾಗೂ ಕ್ಯಾಬಿನೆಟ್ ಎಲ್ಲಾ ವರದಿಯ ಪರ ಇದ್ದಾರೆ. ಕೆಲವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ ಎಂದರು.

ಇದನ್ನೂ ಓದಿ:ಜಾತಿ ಗಣತಿ ವರದಿ ನವೆಂಬರ್‌ನಲ್ಲಿ ಸಲ್ಲಿಸುವ ನಿರೀಕ್ಷೆ: ಸಿಎಂ ಸಿದ್ದರಾಮಯ್ಯ

ಪಂಚರಾಜ್ಯ ಚುನಾವಣೆ ವಿಚಾರವಾಗಿ ಮಾತನಾಡಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಒಂದು ರಾಜ್ಯದಲ್ಲಿ ಸ್ಥಳೀಯ ಪಕ್ಷ ಅಧಿಕಾರ ಹಿಡಿಯಬಹುದು. ಎಲ್ಲಾ ಕಡೆ ತೀವ್ರ ಸ್ಪರ್ಧೆ ಇದೆ. ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿಯಲ್ಲ. ಸ್ಥಳೀಯ ವಿಚಾರಗಳು ಬೇರೆ ಇರುತ್ತದೆ ಎಂದರು.

ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಕುರಿತು ಮಾತನಾಡಿ, ಕಾನೂನು ಪ್ರಕಾರ ಬ್ರೂಣ ಹತ್ಯೆ ಅಪರಾಧ. ಅದರಲ್ಲೂ ಹೆಣ್ಣು ಬ್ರೂಣ ಹತ್ಯೆ ದೊಡ್ಡ ಅಪರಾಧ. ಕಾನೂನಿನ ಚೌಕಟ್ಟಿನಲ್ಲಿ ಅದಕ್ಕೊಂದು ತಂಡ ಇದೆ. ನಿರಂತರವಾಗಿ ಖಾಸಗಿ ಆಸ್ಪತ್ರೆಗಳು, ವೈದ್ಯರ ಮೇಲೆ ನಿಗಾವಹಿಸಿ ವರದಿ ಕೊಡಬೇಕಿತ್ತು. ಇತ್ತೀಚಿಗೆ ಹೆಣ್ಣು ಬ್ರೂಣಗಳ ಹತ್ಯೆ ಹೆಚ್ಚಾಗಿದೆ. ಬ್ರೂಣ ಹತ್ಯೆಯ ವಿಚಾರವಾಗಿ ಮುಖ್ಯಮಂತ್ರಿಗಳು ಸಹ ಬಹಳ ಗಂಭೀರವಾಗಿದ್ದಾರೆ. ಯಾರ್ ಯಾರು ತಪ್ಪಿತಸ್ಥರು ಇದ್ದಾರೆ ಅವರ ಮೇಲೆ ಕ್ರಮ ಆಗಬೇಕೆಂದು ಸಿಎಂ ಹೇಳಿದ್ದಾರೆ.

ಜಿಲ್ಲೆಯಲ್ಲೂ ಕೂಡ ಡಿಹೆಚ್‍ಒ ನೇತೃತ್ವದಲ್ಲಿ ಇರುವ ಕಮಿಟಿಯನ್ನ ಆಕ್ಟಿವೇಟ್ ಮಾಡಿದ್ದೇವೆ. ಜಿಲ್ಲಾಧ್ಯಂತ ಪರಿಶೀಲನೆ ಮಾಡಿ ವರದಿ ಕೊಡಲು ತಿಳಿಸಿದ್ದೇವೆ. ಸಮಗ್ರ ವರದಿ ಬಂದ ಮೇಲೆ ಯಾರ್ ಯಾರು ತಮ್ಮ ಜವಾಬ್ದಾರಿ ನಿರ್ವಹಿಸಿಲ್ಲ ವರದಿ ಆಧಾರಿಸಿ ಕ್ರಮ ಕೈಗೊಳ್ಳುತ್ತೇವೆಂದರು.

ವಿಡಿಯೋ ನೋಡಿ:ಕಂಪನಿಗಳಿಂದ ಕಾರ್ಮಿಕರ ಶ್ರಮದ ಲೂಟಿ – ಮೀನಾಕ್ಷಿ ಸುಂದರಂ

 

Donate Janashakthi Media

Leave a Reply

Your email address will not be published. Required fields are marked *