ಬೆಂಗಳೂರು : ರಾಜ್ಯದಲ್ಲಿನ ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ಗಾಗಿ ಅರ್ಜಿ ಹಾಕಿರುವ 2.95.ಲಕ್ಷ ಬಡ ಪಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಿ, ಹೊಸ ಅರ್ಜಿ ಹಾಕಲು ಅವಕಾಶ ಕಲ್ಪಿಸಿ ಸೇರ್ಪಡೆ, ತಿದ್ದುಪಡಿ ಜೊತೆಗೆ ಸರ್ವರ್ ಸಮಸ್ಯೆ ಸರಿಪಡಿಸಿ ಮತ್ತು ಅಪ್ ಲೈನ್ ನಲ್ಲಿ ಕೂಡ ಅರ್ಜಿ ಹಾಕಲು ಒತ್ತಾಯಿಸಿ ಡಿವೈಎಫ್ಐ(DYFI) ಮನವಿ ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರ ಪಡಿತರ ಚೀಟಿ ಆನ್ಲೈನ್ ಅರ್ಜಿ ಕರೆಯಲಾಗಿದ್ದು ಸ್ವಾಗತಾರ್ಹ,ಆದರೆ ನಿಗದಿತ ಸಮಯದ ಕಾಲಮಿತಿಗಳಲ್ಲಿ ಅದು ಕೇವಲ ಎರಡು ಗಂಟೆಗೆ ಮಾತ್ರ ಆನ್ಲೈನ್ ಕರೆಯಲಾಗಿದ್ದು ಇದು ಯಾವುದೇ ರೀತಿ ಜನಸಾಮಾನ್ಯರ ಪಡಿತರ ಚಿಟಿ ಕುಟುಂಬದ ಫಲಾನುಭವಿಗಳಿಗೆ ಪ್ರಯೋಜನವಾಗುತ್ತಿಲ್ಲ, ಬದಲಾಗಿ ನಿಗದಿತ ಕಾಲಮಿತಿಯನ್ನು ರದ್ದು ಮಾಡಿ ಪಡಿತರ ಚೀಟಿಗಾಗಿ ನಿರಂತರವಾಗಿ ಅರ್ಜಿ ಹಾಕಲು ಅವಕಾಶ ಕಲ್ಪಿಸಬೇಕು. ಜೊತೆಗೆ ರಾಜ್ಯದ ಬಡ ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಿರುವ ಹೆಸರು ಸೇರ್ಪಡೆ, ತಿದ್ದುಪಡಿಗೆ ಇರುವ ಕಾಲಮಿತಿ ರದ್ದುಪಡಿಸಿ ಸರ್ವರ್ ಸಮಸ್ಯೆ ಸರಿಪಡಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಕರ್ನಾಟಕ ರಾಜ್ಯದಲ್ಲಿನ ಸರಿ ಸುಮಾರು 2.95.ಲಕ್ಷ ಹೊಸ ಅರ್ಜಿಗಳಿದ್ದು ಬಳ್ಳಾರಿ ಜಿಲ್ಲೆಯಲ್ಲಿ ಅಂತ್ಯೋದಯ ಕಾರ್ಡ್ 25.935 BPL.ಕಾರ್ಡ್ ದಾರರು 2.73.306 APL. ಕಾರ್ಡ್43.768. ಒಟ್ಟು ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 3.43.009.3ಲಕ್ಷದ 43 ಸಾವಿರದ 9 ರೇಷನ್ ಕಾರ್ಡ್ಗಳಿಗಾಗಿ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಹಾಕಿ ಸುಮಾರು ಎರಡು ವರ್ಷಗಳೆ ಕಳೆದಿವೆ ಈ ಎಲ್ಲಾ ಫಲಾನುಭವಿಗಳು ಬಡತನ ರೇಖೆಗಿಂತ ಕೆಳಗಿದ್ದು ಸುಮಾರು ವರ್ಷಗಳಿಂದ ಆರೋಗ್ಯ, ಆಹಾರ,ಗ್ಯಾರಂಟಿ ಯೋಜನೆಗಳು ಫಲಾನುಭಿಗಳಾಗದೆ ಸರ್ಕಾರದ ಎಲ್ಲಾ ಯೋಜನೆಗಳಿಂದ ವಂಚಿತರಾಗಿದ್ದಾರೆ ಎಂದು ಪ್ರತಿಭಟನೆಕಾರರು ದೂರಿದ್ದಾರೆ.
ದಿನನಿತ್ಯ ತಮ್ಮ ಕುಟುಂಬದ ಜೀವನ ನಿರ್ವಹಣೆಗಾಗಿ ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಈಗಾಗಲೇ ರಾಜ್ಯದಲ್ಲಿ ವಿಪರೀತ ಬರಗಾಲಕ್ಕೆ ರಾಜ್ಯದ ಜನ ತುತ್ತಾಗಿದ್ದು ಜನ ಇಲ್ಲಿ ಜೀವಿಸುವುದೇ ದೊಡ್ಡ ಸವಾಲಾಗಿದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತವಾದ ಕ್ರಮವಹಿಸಿ ಈ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಡಿವೈಎಫ್‌ಐ ಮನವಿ ಮಾಡಿದೆ.
ಇದನ್ನು ಓದಿ : ಡೆಂಘೀ ಚಿಕಿತ್ಸೆಗೆ ಹೆಚ್ಚಿನ ದರ ಪಡೆದರೆ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಗುಂಡೂರಾವ್
ಒಂದು ವೇಳೆ ಈ ಮೇಲೆ ತಿಳಿಸಿರುವ ಎಲ್ಲಾ ಸಮಸ್ಯೆಗಳು, ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಾದ್ಯಾಂತ ರೇಷನ್ ಕಾರ್ಡ್ ಫಲಾನುಭವಿಗಳ ಬಡ ಕುಟುಂಬಗಳೊಂದಿಗೆ ಉಗ್ರವಾದ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಡಿವೈಎಫ್ಐ ಎಚ್ಚರಿಸಿದೆ.
ಇದನ್ನು ನೋಡಿ : ಡೆಂಗ್ಯೂ ಜಾಗೃತಿಗೆ ತೆರಳಿದ್ದ ಅಂಗನವಾಡಿ ಸಹಾಯಕಿಗೆ ಜಾತಿ ನಿಂದನೆ – ದೂರು ದಾಖಲುJanashakthi Media