ಇಸ್ರೋ ಸಂಸ್ಥೆಯಿಂದ ಉಪಗ್ರಹ ಚಿತ್ರ ಬಿಡುಗಡೆ: ಕೆಲವೇ ದಿನದಲ್ಲಿ ಜೋಶಿಮಠ ಸಂಪೂರ್ಣ ಮುಳುಗಡೆ?

ನವದೆಹಲಿ: ಜೋಶಿಮಠದ ಉಪಗ್ರಹ ಚಿತ್ರಗಳು ಮತ್ತು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಗಳು ಬಿಡುಗಡೆಗೊಂಡಿದ್ದು, ಸ್ಥೂಲ ಅಂಶದ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗಡೆಯಾಗುವು ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ಕುಸಿತ ಕಾಣುತ್ತಿರುವ ಉತ್ತರಖಂಡದಲ್ಲಿರುವ ಜೋಶಿಮಠ ಪ್ರದೇಶದ ಪ್ರಸಕ್ತ ಪರಿಸ್ಥಿತಿಯ ಅಧ್ಯನದ ಉದ್ದೇಶದಿಂದ ಉಪಗ್ರಹ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ರಾಷ್ಟ್ರೀಯ ದೂರಸಂವೇದಿ ಕೇಂದ್ರ ಬಿಡುಗಡೆ ಮಾಡಿದೆ.

ಇದನ್ನು ಓದಿ: ಜೋಶಿಮಠದ ಅಪಾಯಕಾರಿ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭ – 678 ಕಟ್ಟಡಗಳು ಅಸುರಕ್ಷಿತ

ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ಚಿತ್ರಗಳನ್ನು ಸೆರೆ ಹಿಡಿಯಾಗಿದೆ. ಹೈದರಾಬಾದ್ ಮೂಲದ ಎನ್ಆರ್‌ಎಸ್‌ಸಿ ಮುಳುಗುತ್ತಿರುವ ಪ್ರದೇಶಗಳ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಚಿತ್ರಗಳಲ್ಲಿ, ಸೇನೆಯ ಹೆಲಿಪ್ಯಾಡ್ ಮತ್ತು ದೇವಸ್ಥಾನವೊಂದರ ಪ್ರದೇಶ ಸೇರಿದಂತೆ ಇಡೀ ಪಟ್ಟಣವನ್ನು ಸೂಕ್ಷ್ಮ ವಲಯವೆಂದು ಗುರುತು ಮಾಡಲಾಗಿದೆ.

ಇಸ್ರೋ ವರದಿಯನ್ನು ಆಧರಿಸಿ ಉತ್ತರಾಖಂಡ ಸರ್ಕಾರ ಜೋಶಿಮಠದಲ್ಲಿ ತೆರವು ಕಾರ್ಯಾಚರಣೆ ಮುಂದುವರೆಸಿದೆ. ಅಪಾಯದ ಸ್ಥಳದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.

ವರದಿಯ ಪ್ರಕಾರ, ಏಪ್ರಿಲ್ ಮತ್ತು ನವೆಂಬರ್ 2022 ರ ನಡುವೆ ಭೂಮಿಯ ಕುಸಿತವು ನಿಧಾನವಾಗಿತ್ತು, ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ ಕುಸಿದಿದೆ. ಆದರೆ ಡಿಸೆಂಬರ್ 27, 2022 ಮತ್ತು 2023ರ ಜನವರಿ 8 ನಡುವೆ, ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿತ್ತು, ಈ 12 ದಿನಗಳಲ್ಲಿ ಪಟ್ಟಣವು 5.4 ಸೆಂ.ಮೀ. ರಷ್ಟು ಕುಸಿತ ಕಂಡಿದೆ ಎಂದು ಅಧ್ಯಯನದ ವರದಿಗಳು ತಿಳಿಸಿವೆ.

ಇದನ್ನು ಓದಿ: ಉತ್ತರಾಖಂಡ: ಅಣೆಕಟ್ಟೆಗಾಗಿ ಸ್ಥಳಾಂತರಗೊಂಡ ಲೋಹರಿ ನಿವಾಸಿಗಳು ಸ್ಥಿತಿ ಚಿಂತಾಜನಕ

ಇಸ್ರೋ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ, ಭೂ ಕುಸಿತದಿಂದಾಗಿ ಜೋಶಿಮಠ-ಔಲಿ ರಸ್ತೆ ನಾಶವಾಗಲಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಪಟ್ಟಣದಲ್ಲಿ ಭೂಮಿ ಕುಸಿದ ನಂತರ ಮನೆ, ರಸ್ತೆಗಳಲ್ಲಿ ಕಾಣಿಸಿಕೊಂಡ ಬಿರುಕುಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನಕ್ಕೆ ಮುಂದಾಗಿದ್ದಾರೆ.

ಛಮೋಲಿ ಜಿಲ್ಲೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಬಿರುಕು ಬಿಟ್ಟಿರುವ ಮನೆ, ಅಂಗಡಿಗಳ ಮಾಲೀಕರಿಗೆ ವಾರದೊಳಗೆ ಸೂಕ್ತ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *