ಪ್ಯಾಲೆಸ್ತೀನ್ | ಪತ್ರಕರ್ತರ ಮೇಲೆ ಮುಂದುವರೆದ ಇಸ್ರೇಲ್ ದಾಳಿ; ಮತ್ತೊಬ್ಬರ ಹತ್ಯೆ

ಗಾಜಾ: ಅಲ್ ಜಜೀರಾ ಅರೇಬಿಕ್ ಪತ್ರಕರ್ತ ಸಮೀರ್ ಅಬುದಾಕ ಅವರನ್ನು ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿ ಇಸ್ರೇಲಿನ ಸೈನ್ಯ ಹತ್ಯೆ ಮಾಡಿದೆ ಎಂದು ಶುಕ್ರವಾರ ವರದಿಯಾಗಿದೆ. ದಾಳಿಯ ನಂತರ “ಐದು ಗಂಟೆಗಳ ಕಾಲ ರಕ್ತಸ್ರಾವ”ದ ನಂತರ ಅವರು ಮೃತಪಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದು, ಅವರಿದ್ದ ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆಗೆ ತೆರಳದಂತೆ ತಡೆಯಲಾಯಿತು ಎಂದು ಅಲ್‌ ಜಜೀರಾ ಹೇಳಿದೆ. ಪ್ಯಾಲೆಸ್ತೀನ್

ಕ್ಯಾಮರಾಮನ್ ಅಬುದಾಕ ಮತ್ತು ವರದಿಗಾರ ವಇಲ್ ಅಲ್ ದಹ್‌ದೋಹ್ ಶಾಲೆಯೊಂದರಲ್ಲಿ ವರದಿ ಮಾಡುತ್ತಿದ್ದಾಗ ಇಸ್ರೇಲಿ ಬಾಂಬ್‌ಗೆ ಅವರು ತುತ್ತಾಗಿದ್ದಾರೆ. ಈ ವೇಳೆ ಅಬುದಾಕ ಅವರು ತನ್ನ ಪ್ರಾಣವನ್ನು ಕಳೆದುಕೊಂಡರೆ, ಅಲ್ ಜಜೀರಾದ ಗಾಜಾ ಬ್ಯೂರೋ ಮುಖ್ಯಸ್ಥ ದಹದೌಹ್ ಗಾಯಗೊಂಡಿದ್ದಾರೆ. ಪ್ಯಾಲೆಸ್ತೀನ್

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಹೆಣ್ಣು ಭ್ರೂಣಹತ್ಯೆ | ಲಿಂಗಾನುಪಾತ ಗಣನೀಯ ಇಳಿಕೆ

ದಾಳಿಯಿಂದ ವಇಲ್ ಅಲ್ ದಹ್‌ದೋಹ್ ತೀವ್ರ ಗಾಯಗೊಂಡಿದ್ದು, ಈ ವೇಳೆ ಅವರು ನಾಸರ್ ಆಸ್ಪತ್ರೆಗೆ ಏಕಾಂಗಿಯಾಗಿ ನಡೆದು ಸಾಗಿ ಅಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಅಬುದಾಕ ಅವರನ್ನು ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗಲಿಲ್ಲ.

ಕಳೆದ ಅಕ್ಟೋಬರ್‌ನಲ್ಲಿ ಇಸ್ರೇಲಿ ಸೈನ್ಯ ವಇಲ್ ಅಲ್ ದಹ್‌ದೋಹ್ ಅವರ ಕುಟುಂಬವಿದ್ದ ಸುರಕ್ಷಿತ ಪ್ರದೇಶಕ್ಕೆ ಬಾಂಬ್ ವೈಮಾನಿಕ ದಾಳಿ ನಡೆಸಿ ಅವರ ಪತ್ನಿ, ಮಗ, ಮಗಳು ಮತ್ತು ಮೊಮ್ಮಗನನ್ನು ಹತ್ಯೆ ಮಾಡಿತ್ತು.

ಅಲ್ ಜಜೀರಾ ಈ ದಾಳಿಯನ್ನು ಖಂಡಿಸಿದ್ದು, ಇದನ್ನು “ವ್ಯವಸ್ಥಿತ ಗುರಿ” ಎಂದು ಕರೆದಿದೆ. “ಇಸ್ರೇಲಿ ಡ್ರೋನ್‌ಗಳು” ನಾಗರಿಕ ವಸತಿ ಶಾಲೆಯ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಅದು ಆರೋಪಿಸಿದೆ.

ಇದನ್ನೂ ಓದಿ: 8ನೇ ತರಗತಿ ವಿದ್ಯಾರ್ಥಿಗಳಿಗೆ 4.35 ಲಕ್ಷ ಟ್ಯಾಬ್‌ ವಿತರಿಸಲಿರುವ ಆಂಧ್ರ ಸರ್ಕಾರ!

ಪೂರ್ವ ಜೆರುಸಲೇಂನಲ್ಲಿ ಪ್ಯಾಲೆಸ್ತೀನ್ ಫೋಟೋ ಜರ್ನಲಿಸ್ಟ್ ಮುಸ್ತಫಾ ಅಲ್ಖರೂಫ್ ಅವರನ್ನು ಇಸ್ರೇಲಿ ಸೈನಿಕರು ಕ್ರೂರವಾಗಿ ಹಲ್ಲೆ ಮಾಡಿದ ದಿನವೇ ಈ ಸುದ್ದಿ ಬಂದಿದೆ. ಅನಡೋಲು ಏಜೆನ್ಸಿಯ ಪತ್ರಕರ್ತನ ಮೇಲಿನ ಹಲ್ಲೆಯನ್ನು ಸಿಎನ್‌ಎನ್ ವರದಿಗಾರರೊಬ್ಬರು ಸೆರೆಹಿಡಿದಿದ್ದು, ವ್ಯಾಪಕವಾಗಿ ವೈರಲ್ ಆಗಿದೆ.

ದಾಳಿಯ ಸಮಯದಲ್ಲಿ, ಅಲ್-ಅಕ್ಸಾ ಮಸೀದಿಯ ಬಳಿ ಶುಕ್ರವಾರದ ಪ್ರಾರ್ಥನೆಗಾಗಿ ಪ್ಯಾಲೆಸ್ತೀನಿಯನ್ನರು ಸೇರುತ್ತಿರುವ ಬಗ್ಗೆ ಅಲ್ಖರೂಫ್ ವರದಿ ಮಾಡುತ್ತಿದ್ದರು. ಈ ವೇಳೆ ಅವರ ಮೇಲೆ ಇಸ್ರೇಲಿ ಸೈನಿಕರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೀಡಿಯೊದಲ್ಲಿ ಅಲ್ಖರೂಫ್ ಮತ್ತು ಇಸ್ರೇಲಿ ಸೈನಿಕರ ನಡುವಿನ ವಾಗ್ದಾವ ದಾಖಲಾಗಿದೆ. ನಂತರ ಇಬ್ಬರು ಇಸ್ರೇಲಿ ಸೈನಿಕರು ತಮ್ಮ ಬಂದೂಕನ್ನು ಅಲ್ಖರೂಫ್‌ ಅವರ ಮುಖಕ್ಕೆ ಹೊಡೆದು ಅವರನ್ನು ನೆಲಕ್ಕೆ ಅಪ್ಪಳಿಸಿದ್ದಾರೆ. ನೆಲಕ್ಕೆ ಬಿದ್ದ ನಂತರ ಅವರ ಮುಖದ ಮೇಲೆ ಕೂಡಾ ಸೈನಿಕರು ಒದೆಯುವುದು ವಿಡಿಯೊದಲ್ಲಿ ದಾಖಲಾಗಿದೆ. ವೀಡಿಯೊ ವೈರಲ್ ಆದ ನಂತರ, ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದಾಗಿ ಇಸ್ರೇಲ್ ಹೇಳಿದೆ.

 

ಇದನ್ನೂ ಓದಿ: ಸಮುದಾಯ ರಾಜ್ಯ ಸಮ್ಮೇಳನ | ಸಂವಿಧಾನವೇ ನಮಗೆ ರಾಷ್ಟ್ರೀಯತೆ – ಪುರುಷೋತ್ತಮ ಬಿಳಿಮಲೆ

ಇಸ್ರೇಲಿ ಪೊಲೀಸರು ಅಲ್ಖರೂಫ್ ಜೊತೆಗಿದ್ದ ಕ್ಯಾಮೆರಾಮನ್ ಫೈಜ್ ಅಬು ರಮಿಲಾ ಅವರ ಮೇಲೂ ದಾಳಿ ಮಾಡಿದ್ದಾರೆ ಎಂದು ಅನಡೋಲು ಏಜೆನ್ಸಿ ತಿಳಿಸಿದೆ. ಪ್ಯಾಲೆಸ್ತೀನ್

ಈ ಹಿಂದೆ ಲೆಬನಾನ್‌ನಲ್ಲಿ ಸ್ಪಷ್ಟವಾಗಿ ಗುರುತಿಸಲಾದ ಪತ್ರಕರ್ತರನ್ನು ಗುರಿಯಾಗಿಸಿ ಇಸ್ರೇಲಿ ಟ್ಯಾಂಕ್ ದಾಳಿ ಮಾಡಿದೆ ಎಂದು ರಾಯಿಟರ್ಸ್ ಪತ್ರಿಕೆ ಆರೋಪಿಸಿತ್ತು. ಈ ದಾಳಿಯಲ್ಲಿ ತನ್ನ ಪತ್ರಕರ್ತ ಇಸಾಮ್ ಅಬ್ದುಲ್ಲಾ ಅವರನ್ನು ಇಸ್ರೇಲ್ ಕೊಂದಿತ್ತು ಮತ್ತು ಇತರ ಆರು ವರದಿಗಾರರನ್ನು ಗಾಯಗೊಳಿಸಿದೆ ಎಂದು ಅದು ಹೇಳಿತ್ತು.

“ಗಾಜಾದಲ್ಲಿ ಇಲ್ಲಿಯವರೆಗೆ 19,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಅದರಲ್ಲಿ ಕನಿಷ್ಠ 64 ಪತ್ರಕರ್ತರು ಇದ್ದಾರೆ. ಕೊಲ್ಲಲ್ಪಟ್ಟ ಒಟ್ಟು ಪತ್ರಕರ್ತರಲ್ಲಿ 57 ಜನರು ಪ್ಯಾಲೆಸ್ತೀನಿಯನ್ನರಾಗಿದ್ದು, ನಾಲ್ವರು ಇಸ್ರೇಲಿ ಮತ್ತು ಮೂವರು ಲೆಬನಾನಿನವರಾಗಿದ್ದಾರೆ” ಎಂದು ಕಮೀಟಿ ಟು ಪ್ರೊಟೆಕ್ಟ್‌ ಜರ್ನಲಿಸ್ಟ್‌(ಸಿಪಿಜೆ) ವರದಿ ಹೇಳಿದೆ. ಸಂಘರ್ಷದ ವೇಳೆ ಕೊಲ್ಲಲ್ಪಟ್ಟ ಅನೇಕ ಪತ್ರಕರ್ತರು ಕೆಲಸದಲ್ಲಿದ್ದು, ಪ್ರಪಂಚದಾದ್ಯಂತ ಇರುವ ಜನರಿಗೆ ನಡೆಯುತ್ತಿರುವ ಯುದ್ಧದ ಭೀಕರತೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದರು.

ವಿಡಿಯೊ ನೋಡಿ: ಪಿಚ್ಚರ್‌ ಪಯಣ – 144ಸಿನೆಮಾ : ಈ ಬಂಧನನಿರ್ದೇಶನ : ವಿಜಯಲಕ್ಷ್ಮಿ ಸಿಂಗ್‌ಕಥೆ ಹೇಳುವವರು: ಭಾವನಾ ಮರಾಠೆ

Donate Janashakthi Media

Leave a Reply

Your email address will not be published. Required fields are marked *