11 ಲಕ್ಷ ಗಾಝಾ ನಿವಾಸಿಗಳ ಸ್ಥಳಾಂತರಕ್ಕೆ ಇಸ್ರೇಲ್‌ ಆದೇಶ: ವಿಶ್ವಸಂಸ್ಥೆ ವಿರೋಧ

ನ್ಯೂಯಾರ್ಕ್: ಉತ್ತರ ಗಾಝಾದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು 24 ಗಂಟೆಗಳೊಳಗೆ ಸ್ಥಳಾಂತರಗೊಳ್ಳಬೇಕು ಎಂಬ ಇಸ್ರೇಲ್‌ನ ಆದೇಶವು “ಅತ್ಯಂತ ಅಪಾಯಕಾರಿ” ಮತ್ತು “ಸರಳವಾಗಿ ಸಾಧ್ಯವಿಲ್ಲ” ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದು, “ಯುದ್ಧಗಳು ಸಹ ನಿಯಮಗಳನ್ನು ಹೊಂದಿವೆ” ಎಂದು ಪ್ರತಿಪಾದಿಸಿದ್ದಾರೆ.

ಉತ್ತರ ಗಾಝಾದ ಸುಮಾರು 11 ಲಕ್ಷ ಜನರು ಮುಂದಿನ 24 ಗಂಟೆಗಳ ಒಳಗೆ ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲಿ ಮಿಲಿಟರಿಯಲ್ಲಿನ ಸಂಪರ್ಕ ಅಧಿಕಾರಿಗಳು ಗುರುವಾರ ಗಾಜಾದಲ್ಲಿರುವ ವಿಶ್ವಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶಾಲೆಗಳು, ಆರೋಗ್ಯ ಕೇಂದ್ರಗಳು ಮತ್ತು ಚಿಕಿತ್ಸಾಲಯಗಳು ಸೇರಿದಂತೆ ಎಲ್ಲಾ ವಿಶ್ವಸಂಸ್ಥೆಯ ಸಿಬ್ಬಂದಿಗೆ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆಯುತ್ತಿರುವವರಿಗೆ ಇದೇ ಆದೇಶ ಅನ್ವಯಿಸುತ್ತದೆ.

ಇದನ್ನೂ ಓದಿ: ವಿಜಯನಗರ | ನನ್ನನ್ನು ಏಕೆ ಬಂಧಿಸಲಾಗಿದೆ ಎನ್ನುವುದೆ ಗೊತ್ತಿಲ್ಲ ಎಂದ ಮುಸ್ಲಿಂ ಯುವಕ; ಪೊಲೀಸರ ಹೇಳಿಕೆಯಲ್ಲಿ ದ್ವಂದ್ವ!

 

ಇಡೀ ಪ್ರದೇಶ ಮುತ್ತಿಗೆಯಲ್ಲಿರುವಾಗ ಆಹಾರ, ನೀರು ಅಥವಾ ವಸತಿ ಇಲ್ಲದ ಸ್ಥಳಕ್ಕೆ ಒಂದು 10 ಲಕ್ಷಕ್ಕೂ ಹೆಚ್ಚು ಜನರನ್ನು ಜನನಿಬಿಡ ಯುದ್ಧ ವಲಯದಲ್ಲಿ ಸ್ಥಳಾಂತರಿಸುವುದು ಅತ್ಯಂತ ಅಪಾಯಕಾರಿ. ಇದು ಸರಳವಾಗಿ ಸಾಧ್ಯವಿಲ್ಲ ಎಂದು ಗುಟೆರಸ್ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗುಟೆರೆಸ್ ಅವರು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತ ಭದ್ರತಾ ಮಂಡಳಿಯ ಸಭೆಗೆ ತೆರಳುವ ಮೊದಲು ಈ ಹೇಳಿಕೆಯನ್ನು ನೀಡಿದ್ದಾರೆ.

ಈ ನಡುವೆ ಇಸ್ರೇಲ್ ದಾಳಿಯಲ್ಲಿ ರಾಯಿಟರ್ಸ್ ವೀಡಿಯೊ ಪತ್ರಕರ್ತ ಇಸಾಮ್ ಅಬ್ದಲ್ಲಾ ಮೃತಪಟ್ಟಿದ್ದಾರೆ. ಈ ವರಗೆ ಅಲ್ ಜಜೀರಾ ಮತ್ತು ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್‌ಪಿ) ಸೇರಿದಂತೆ ಒಟ್ಟು ಆರು ಪತ್ರಕರ್ತರು ಯುದ್ಧ ಭೂಮಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಹತ್ಯೆಯಾಗಿದ್ದ ಎಲ್ಲಾ ಪತ್ರಕರ್ತರು “ಪ್ರೆಸ್” ಎಂದು ಲೇಬಲ್ ಮಾಡಿದ ರಕ್ಷಾಕವಚದಲ್ಲಿದ್ದಾಗಿಯು ಇಸ್ರೆಲ್ ಅವರ ಮೇಲೆ ಕ್ಷಿಪಣಿ ಹಾರಿಸಿದೆ ಎಂದು ಆರೋಪಿಸಲಾಗಿದೆ. ಲೈವ್ ವೀಡಿಯೋ ಸಿಗ್ನಲ್ ನೀಡುತ್ತಿರುವಾಗ ಇಸಾಮ್ ಅಬ್ದಲ್ಲಾ ಅವರ ಹತ್ಯೆಯಾಗಿದೆ ಎಂದು ವರದಿಯಾಗಿದೆ.

ವಿಡಿಯೊ ನೋಡಿ: ವಿಷವಟ್ಟಿ ಸುಡುವಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಪುಸ್ತಕ ಕುರಿತು ದಲಿತ ನಾಯಕ ಮಾವಳ್ಳಿ ಶಂಕರ್‌ ಮಾತುಗಳು

Donate Janashakthi Media

Leave a Reply

Your email address will not be published. Required fields are marked *