ಹಮಾಸ್-ಇಸ್ರೇಲ್ ಯುದ್ಧದ ಹಿನ್ನೆಲೆ ಏನು?

ಈಗ ಸಿಡಿದಿರುವ ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಭಾರೀ ಸುದ್ದಿಯಲ್ಲಿದೆ. ಅದನ್ನು ಕನ್ನಡ ಮಾಧ್ಯಮಗಳು ಯಥಾಪ್ರಕಾರ ಅತಿರಂಜಿತವಾಗಿ, ರೋಚಕವಾಗಿ ಪ್ರಸ್ತುತಪಡಿಸುತ್ತಿವೆ. ಪಾಶ್ಚಿಮಾತ್ಯ ಮಾಧ್ಯಮವನ್ನು ಕುರುಡಾಗಿ ಹಿಂಬಾಲಿಸುತ್ತಾ ಯುದ್ಧದ ಹಿನ್ನೆಲೆಯ ಕಾರಣಗಳನ್ನು ಅಚಾರಿತ್ರಿಕವಾಗಿ, ಅವಾಸ್ತವವಾಗಿ ವಿಶ್ಲೇಷಿಸುತ್ತಿವೆ. ಸಂದರ್ಭದಲ್ಲಿ ಕನ್ನಡದಲ್ಲಿ 2016ರಲ್ಲಿ ಪ್ರಕಟವಾದ ಎಂ.ಇಕಬಾಲ್ ಹುಸೇನ್ ಮತ್ತು ವಸಂತರಾಜ ಎನ್.ಕೆ ಬರೆದಪ್ಯಾಲೆಸ್ತೀನ್ ಪ್ರಶ್ನೆನಿಮಗೆ ತಿಳಿದಿರಲಿಎಂಬ ಪುಸ್ತಕದ ಆಯ್ದ ಭಾಗಗಳನ್ನು ಇಲ್ಲಿ ಕೊಡುತ್ತಿದ್ದೇವೆ. ಇದು ಈಗಿನ ಭೀಕರ ಯುದ್ಧಕ್ಕೆ ವಾಸ್ತವ ಕಾರಣವಾದ ಚಾರಿತ್ರಿಕ ಹಿನ್ನೆಲೆಯ ಬಗ್ಗೆ ನಿಖರ ಮಾಹಿತಿ ಒದಗಿಸುತ್ತದೆ. ಇಲ್ಲಿರುವ ಕುಗ್ಗುತ್ತಿರುವ ಪ್ಯಾಲೇಸ್ತೀನ್ ಅರಬರ ತಾಯ್ನಾಡಿನ ಮ್ಯಾಪ್ ಗಳೇ ಸಂಕ್ಷಿಪ್ತವಾಗಿ ಹಿನ್ನೆಲೆ ನೀಡುತ್ತವೆ.

ಪ್ಯಾಲೇಸ್ತಿನಿಯರ ಹೂವು ಬೀಳದಿರಲಿ

ನಾನು ಒಂದು ಕೈಯಲ್ಲಿ ಹೂವು ಮತ್ತು ಇನ್ನೊಂದು ಕೈಯಲ್ಲಿ ಗನ್ ಹಿಡಿದು ಬಂದಿದ್ದೇನೆ. ನನ್ನ ಕೈಯಲ್ಲಿರುವ ಹೂವು ಬೀಳದಂತೆ ನೋಡುವುದು ನಿಮ್ಮ ಜವಾಬ್ದಾರಿ 

ಯಾಸೆರ್ ಅರಾಫತ್

ಇದು ಪ್ಯಾಲೇಸ್ತಿನಿ ಜನತೆಯ ನಾಯಕ ವಿಶ್ವಸಂಸ್ಥೆಯಲ್ಲಿ ಮಾತನಾಡುತ್ತಾ ಇಡೀ ಜಗತ್ತಿನ ಸರಕಾರಗಳನ್ನು ಜನತೆಯನ್ನೂ ಉದ್ದೇಶಿಸಿ ಹೇಳಿದ ಮಾತುಗಳು. ಹಾಗೇ ಆಗಿದೆ. ಪ್ಯಾಲೇಸ್ತಿನಿಯರ ಕೈಯಲ್ಲಿ ಹೂವೂ ಬೀಳುತ್ತಲೇ ಇದೆ. ಗನ್ನೂ ಹಿಡಿಯದಂತಹ ಪರಿಸ್ಥಿತಿಯನ್ನು ಜಗತ್ತು ತಂದಿಟ್ಟಿದೆ.

ಪ್ಯಾಲೇಸ್ತಿನಿ ಪ್ರಶ್ನೆ ಜಗತ್ತಿನ ಅತ್ಯಂತ ಸಂಕೀರ್ಣ ಪ್ರಶ್ನೆ. ಯಾಕೆಂದರೆ ಅದು ಅವರ ಪ್ರಶ್ನೆ ಮಾತ್ರವಲ್ಲ. ಅವರ ತಾಯ್ನಾಡಿನ ಸ್ಥಾಪನೆಗೆ ಶತಾಯ-ಗತಾಯ ತಡೆಯೊಡ್ಡುತ್ತಿರುವ, ಇಡೀ ಮಧ್ಯಪ್ರಾಚ್ಯ ಪ್ರದೇಶದ ಮೇಲೆ ತಮ್ಮ ಪೂರ್ಣ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಅಮೆರಿಕ-ಇಸ್ರೇಲಿ ಕೂಟದ ಹುನ್ನಾರಗಳಿಗೆ ಪ್ರತಿರೋಧದ ಬಗೆಯ ಪ್ರಶ್ನೆ. ‘ಭಯೋತ್ಪಾದನೆಯ ವಿರುದ್ಧ ಮುಗಿಯದ ಯುದ್ಧ ದ ಹೆಸರಲ್ಲಿ ಎಲ್ಲಾ ಜನತೆಯ ಸ್ವಾತಂತ್ರö್ಯ, ಹಕ್ಕುಗಳನ್ನು ಕಸಿಯುವುದಕ್ಕೆ ಪ್ರಯತ್ನಿಸುತ್ತಿರುವ ಜಗತ್ತಿನ ಏಕಮಾತ್ರ ಸೂಪರ್ ಪವರ್ ನ್ನು ತಡೆಯುವ ಬಗೆ ಹೇಗೆ ಎಂಬ ಪ್ರಶ್ನೆ. ಪ್ಯಾಲೆಸ್ತೀನ್ ಸ್ವಾತಂತ್ರ್ಯ ಪಡೆಯದೆ ನಮ್ಮೆಲ್ಲರ ಸ್ವಾತಂತ್ರö್ಯ ಅಫೂರ್ಣ ಎಂಬ ಮಂಡೇಲಾ ಹೇಳಿಕೆ ಅಕ್ಷರಶಃ ನಿಜ. ಇಂತಹ ಪ್ಯಾಲೇಸ್ತಿನ್ ಪ್ರಶ್ನೆ ಬಗ್ಗೆ ಪರಿಚಯ ಮಾಡಿಕೊಡುವ ಒಂದು ಪುಸ್ತಕ ಪ್ರಕಟಿಸಬೇಕೆಂಬುದು ನಮ್ಮ ಹೆಬ್ಬಯಕೆಗಳಲ್ಲಿ ಒಂದಾಗಿತ್ತು. ‘ಪ್ಯಾಲೇಸ್ತಿನ್ ಪ್ರಶ್ನೆ-ನಿಮಗೆ ತಿಳಿದಿರಲಿ’ ಮೂಲಕ ಅದು ಈಗ ಈಡೇರಿದೆ.

‘ಪ್ಯಾಲೇಸ್ತಿನ್ ಪ್ರಶ್ನೆ-ನಿಮಗೆ ತಿಳಿದಿರಲಿ’ ಈ ಪ್ರಶ್ನೆಯ ಚಾರಿತ್ರಿಕ ಹಿನ್ನೆಲೆ, ಪ್ಯಾಲೇಸ್ತಿನಿ ಸ್ವಾತಂತ್ರ್ಯ  ಹೋರಾಟ ಮತ್ತು ಶಾಂತಿ ಮಾತುಕತೆಗಳು ಹಾದು ಬಂದಿರುವ ಹಂತಗಳು, ಈ ಪ್ರಶ್ನೆಯ ಪರಿಹಾರಕ್ಕೆ ತೊಡಕಾಗಿರುವ ಅಂಶಗಳು, ಇಂದಿನ ಪರಿಸ್ಥಿತಿ, ಪರಿಹಾರ ಹೇಗೆ – ಮುಂತಾದ ಈ ಪ್ರಶ್ನೆಯ ಹಲವು ಆಯಾಮಗಳ ಪರಿಚಯ ಮಾಡುತ್ತದೆ. ಅವುಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಪುಸ್ತಕ ‘ಪ್ಯಾಲೇಸ್ತಿನ್ ಪ್ರಶ್ನೆ’ಯನ್ನು ತಟಸ್ಥ ರೀತಿಯಲ್ಲಿ ವಿಶ್ಲೇಷಿಸುವುದಿಲ್ಲ. ಪ್ಯಾಲೇಸ್ತಿನಿ ಜನತೆಯ ತಾಯ್ನಾಡು ಹೊಂದುವ ಮತ್ತು ಇತರ ಮಾನವ ಹಕ್ಕುಗಳ, ನ್ಯಾಯಯುತ ಅಂತರಾಷ್ಟ್ರೀಯ ನಿಯಮಗಳ ವಸ್ತುನಿಷ್ಟ ದೃಷ್ಟಿಯಿಂದ ನೋಡುತ್ತದೆ.

(‘ಪ್ಯಾಲೆಸ್ತೀನ್ ಪ್ರಶ್ನೆ- ನಿಮಗೆ ತಿಳಿದಿರಲಿ’ ಪುಸ್ತಕದ ಪ್ರಕಾಶಕರ ಮಾತಿನಿಂದ)

“ಪ್ಯಾಲೆಸ್ತೀನ್ ಪ್ರಶ್ನೆ- ನಿಮಗೆ ತಿಳಿದಿರಲಿ” ಪುಸ್ತಕದ ಮುಖಪುಟ

ಪ್ಯಾಲೇಸ್ತೀನ್ ಪ್ರಶ್ನೆ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಭೀಕರ ಹಿಂಸಾಚಾರ, ಸಾವು-ನೋವುಗಳ ಅಂಕೆ ಸಂಖ್ಯೆಗಳಲ್ಲಿ, ಧರ್ಮ-ರಾಷ್ಟ್ರೀಯತೆಗಳ ಸಂಘ಼ರ್ಷದ ಚರ್ಚೆಗಳಲ್ಲಿ ಹೂತು ಹೋಗಿದೆ. ‘ನಿತ್ಯ ಸಾಯುವವರಿಗೆ ಅಳುವವರು ಯಾರು? ಎನ್ನುವಂತಾಗಿದೆ. ಅದನ್ನು ಭಯೋತ್ಪಾದನೆ ವಿರುದ್ಧ ಹೋರಾಟ, ಆತ್ಮಾಹುತಿ ದಾಳಿಗಳಿಗೆ ಕ್ಷಿಪಣಿ ದಾಳಿಗಳ ಉತ್ತರ ಎಂದೂ ಬಿಂಬಿಸಲಾಗುತ್ತಿದೆ. ಪ್ಯಾಲೇಸ್ತೀನ್ ಪ್ರಶ್ನೆ ಸತತವಾಗಿ ಅರ್ಧ ಶತಮಾನಕ್ಕೂ ಮೀರಿದ ದೀರ್ಘ ಕಾಲದಿಂದ ಬಗೆಹರಿಯದೆ ಇರುವ ಪ್ರಶ್ನೆ. ಇಷ್ಟೇ ಸಂಕೀರ್ಣ ಎನಿಸಿದ್ದ ಐರಿಶ್ ಮತ್ತು ದಕ್ಷಿಣ ಆಫ್ರಿಕಾದ ವರ್ಣಬೇಧದ ಸಮಸ್ಯೆ ಕಳೆದ ಶತಮಾನದಲ್ಲೇ ಒಂದು ಹಂತದ ಪರಿಹಾರದವನ್ನಾದರೂ ಕಂಡವು.   20ನೇ ಶತಮಾನದಲ್ಲಿ ವಸಾಹತುಶಾಹಿ ಕೊನೆಗೊಳ್ಳುವ ಪ್ರಕ್ರಿಯೆಯ ಫಲವಾಗಿ ಆರಂಭವಾದ ರಾಷ್ಟ್ರೀಯ ವಿಮೋಚನೆಯ ಕೊನೆಯ ಕೊಂಡಿಯಾಗಿ ಇನ್ನೂ ಇತ್ಯರ್ಥವಾಗದೆ ಉಳಿದ ಪ್ರಶ್ನೆ. ಎರಡನೇ ಮಹಾಯುದ್ಧ ನಂತರದ ಶೀತಸಮರದ ಸುಳಿಯಲ್ಲಿ ಸಿಲುಕಿ ಇನ್ನಷ್ಟು ಸಂಕೀರ್ಣವಾದ ಪ್ರಶ್ನೆ. ಪಶ್ಚಿಮ ಏಶ್ಯಾದ ಅಗಾಧ ತೈಲ ಸಂಪತ್ತು ಮತ್ತು ಈ ಆಯಕಟ್ಟಿನ ಪ್ರದೇಶದ ಮೇಲೆ ಬಿಗಿ ಹಿಡಿತ ಸಾಧಿಸುವುದಕ್ಕಾಗಿ, ಧಾರ್ಮಿಕ-ಜನಾಂಗೀಯ ಕಲಹಗಳ ದುರ್ಬಳಕೆಯ ಸಾಮ್ರಾಜ್ಯಶಾಹಿಗಳ ದಾಳಕ್ಕೆ ಬಲಿಯಾದ ಪ್ರಶ್ನೆ. ಭಯೋತ್ಪಾದನೆಯ ವಿರುದ್ಧದ ಹೊಸ ‘ಮುಗಿಯದ ಯುದ್ಧ’ದ ಭಾಗವೂ ಆಗಿ ಬಿಟ್ಟಿರುವ ಪ್ರಶ್ನೆ. ಕಳೆದ ಆರು ದಶಕಗಳಿಗೂ ಹೆಚ್ಚು ಕಾಲ ನರಮೇಧದ (ವಿವರಗಳಿಗೆ ‘ಪ್ಯಾಲೆಸ್ಟಿನ್ನರ ನರಮೇಧ’ ಬಾಕ್ಸ್ ನೋಡಿ) ಪ್ರಮಾಣ ಮುಟ್ಟಿದ ಪ್ಯಾಲೆಸ್ಟಿನ್ನರ ಸಾವು-ನೋವು ಒಂದೇ ಇಡೀ ಜಗತ್ತಿನ ಗಮನಹರಿಸುವಂತೆ ಮಾಡಿ ಅದರ ಪರಿಹಾರ ಹುಡುಕುವಂತೆ ಮಾಡಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಇದಕ್ಕೇನು ಕಾರಣ? ಪ್ಯಾಲೇಸ್ತೀನ್ ಪ್ರಶ್ನೆಯ ಈ ಹಲವು ಆಯಾಮಗಳನ್ನು ಪರಿಚಯ ಮಾಡುವ, ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಈ ಪುಸ್ತಕ.

(‘ಪ್ಯಾಲೆಸ್ತೀನ್ ಪ್ರಶ್ನೆ- ನಿಮಗೆ ತಿಳಿದಿರಲಿ’ ಪುಸ್ತಕದ ಮೊದಲ ಪಾರಾ)

ಇದನ್ನೂ ಓದಿಗಾಜಾ: ಇಸ್ರೇಲ್ ವೈಮಾನಿಕ ದಾಳಿಯ ನಡುವೆ ಮುಂದುವರೆದ ಪ್ಯಾಲೆಸ್ತೀನ್ ಪ್ರತಿರೋಧ

ಪ್ಯಾಲೇಸ್ತೀನ್ ಪ್ರಶ್ನೆ – ಸಂಕ್ಷಿಪ್ತ ಇತಿಹಾಸ

ಜಗತ್ತಿನ ಯಾವ ಮೂಲೆಯಲ್ಲೂ ಹುಟ್ಟಿದ ಯಹೂದಿ ಇಸ್ರೇಲಿ ನಾಗರಿಕರಾಗಲು ಅರ್ಹನಾಗುವುದಾದರೆ, ಜಿಯೋನಿಸ್ಟರು ಹೊರದಬ್ಬಿದ ಎಲ್ಲಾ ಪ್ಯಾಲೆಸ್ತೀನಿಯರಿಗೂ ಅದೇ ಹಕ್ಕು ಇರಬೇಕು. ಬಹಳ ಸರಳ.

– ತಾರೀಕ್ ಅಲಿ, ಎಡ ಚಿಂತಕ-ಲೇಖಕ

——————————————

ಪ್ಯಾಲೆಸ್ತೀನ್ ಪ್ರಶ್ನೆ ಮಧ್ಯಪ್ರಾಚ್ಯದ ಅರಬ್ ಪ್ರದೇಶದಲ್ಲಿ ವಿವಿಧ ಸಾಮ್ರಾಜ್ಯಗಳ, ವಸಾಹತುಶಾಹಿಗಳ ನಡುವೆ ತಿಕ್ಕಾಟ-ರಾಜಿಗಳ, ಸಾಮ್ರಾಜ್ಯಶಾಹಿಗಳ, ಸೂಪರ್ ಪವರ್‌ಗಳ ನಡುವೆ ಪೈಪೋಟಿ ಜತೆ ಹೆಣೆದುಕೊಂಡಿದೆ. ಇದು ಮೂರು ಪ್ರಮುಖ ಹಂತಗಳ (1967ರ ವರೆಗೆ, 1967-1993, 1993ರಿಂದ ಈ ವರೆಗೆ) ಮೂಲಕ ಹಾದು ಬಂದು ಬಗೆಹರಿಯದ ಪ್ರಶ್ನೆಯಾಗಿ ಉಳಿದಿದೆ.

ಮೊದಲ ಹಂತ – 1967 ವರೆಗೆ

ಮೊದಲ ಹಂತ ಸುಮಾರು 1916ರಿಂದ (ಮೊದಲ ಮಹಾಯುದ್ಧದ ಕಾಲದಿಂದ) 1967ರ ಇಸ್ರೇಲಿ-ಅರಬ್ ಯುದ್ಧದ ವರೆಗೆ ಬರುತ್ತದೆ. ಈ ಹಂತದಲ್ಲಿ ಜಗತ್ತಿನಾದ್ಯಂತ ಪ್ರಮುಖವಾಗಿ ಯುರೋಪಿನಿನಿಂದ ಯಹೂದಿಗಳು ಪ್ಯಾಲೆಸ್ತೀನ್ ಗೆ ಬಂದು ವಸತಿ ಹೂಡಲು ಆರಂಬಿಸಿದರು. ಜಿಯೋನಿಸ್ಟ್ ಚಳುವಳಿ ಆರಂಭವಾಗಿ ಉಗ್ರಗಾಮಿ ರೂಪ ತಳೆದು ಸ್ಥಳೀಯ ಪ್ಯಾಲೆಸ್ತೀನ್ನರೊಂದಿಗೆ ಘರ್ಷಣೆ ಆಯಿತು. ಇದು 1947ರಲ್ಲಿ ವಿಶ್ವಸಂಸ್ಥೆಯ ಅನ್ಯಾಯಯುತ ವಿಭಜನೆ ಯೋಜನೆ, 1948ರ ಅಂತರ್ಯದ್ಧ, ಇಸ್ರೇಲಿ ಪ್ರಭುತ್ವದ ವಿರುದ್ಧ 1967ರಲ್ಲಿ ಯುದ್ಧ ಮತ್ತು ಇಡೀ ಪ್ಯಾಲೆಸ್ತೀನ್ ಪ್ರದೇಶವನ್ನು ಇಸ್ರೇಲ್ ಆಕ್ರಮಿಸಿಕೊಳ್ಳುವುದರೊಂದಿಗೆ ಕೊನೆಯಾಯಿತು. ಇದು ಈಜಿಪ್ಟಿನ ನಾಸೆರ್ ಅರಾಫತ್ ನಿಂದ ಆರಂಭಿಸಿ ಹೆಚ್ಚಿನ ದೇಶಗಳಲ್ಲಿ ಸಾಮ್ರಾಜ್ಯಶಾಹಿ-ವಿರೋಧಿ, ಸೆಕ್ಯುಲರ್, ಅರಬ್ ರಾಷ್ಟ್ರೀಯವಾದಿ ಸರಕಾರಗಳು ಇದ್ದ ಹಂತ ಕೂಡಾ. ಈ ಹಂತದಲ್ಲಿ ದಕ್ಷಿಣ ಆಫ್ರಿಕಾದ ವರ್ಣಬೇಧ ಸರಕಾರದಂತೆ, ಇಸ್ರೇಲಿ ಸರಕಾರ ಮತ್ತು ಅಂತರಾಷ್ಟ್ರೀಯ ಬಹಿಷ್ಕಾರಕ್ಕೆ ಒಳಗಾಗಿತ್ತು. ಭಾರತ ಸೇರಿದಂತೆ ಹಲವಾರು ದೇಶಗಳು ಇಸ್ರೇಲ್ ದೇಶವನ್ನು ಮಾನ್ಯ ಸಹ ಮಾಡಿರಲಿಲ್ಲ. ಮೊದಲ ಹಂತದ ಪ್ರಮುಖ ಮೈಲಿಗಲ್ಲುಗಳು:

ಮೊದಲ ಮಹಾಯುದ್ಧಕ್ಕೆ ಮುನ್ನ: ಒಟೋಮನ್ ಸಾಮ್ರಾಜ್ಯದ ಭಾಗ

ಮೊದಲ ಮಹಾಯುದ್ಧದ ಸಮಯದಲ್ಲಿ – ಬ್ರಿಟಿಶರಿಂದ ಅರಬರಿಗೂ, ಜಿಯೋನಿಸ್ಟರಿಗೂ (ಬಾಲ್‌ಫೋರ್ ಘೋಷಣೆ – 1917) ಪೊಳ್ಳು ಭರವಸೆಗಳು; ಸಾಮ್ರಾಜ್ಯಶಾಹಿಗಳ ನಡುವೆ ರಹಸ್ಯ (1916ರ ಸೈಕ್ಸ್-ಪಿಕೊಟ್) ಒಪ್ಪಂದ;

1917-1948 : ಲೀಗ್ ಆಫ್ ನೇಶನ್ಸ್ ಮಧ್ಯಸ್ತಿಕೆಯಿಂದ ಬಂದ ಬ್ರಿಟಿಷ್ ಮ್ಯಾನ್ ಡೇಟ್

1933 – ಹಿಟ್ಲರ್ ಅಧಿಕಾರಕ್ಕೆ ಬಂದ ನಂತರ ಜ್ಯೂ ಗಳ ವಲಸೆ ಮತ್ತು ವಸತಿ ವಿಪರೀತ ಏರಿಕೆ

1936-39 : ಬ್ರಿಟಷ್ ಆಡಳಿತ ಮತ್ತು  ಜ್ಯೂ ಗಳ ವಲಸೆ ಮತ್ತು ವಸತಿ ವಿರುದ್ಧ ಅರಬ್ ದಂಗೆಗಳು

1948 : ವಿಶ್ವಸಂಸ್ಥೆಯ ‘ಎರಡು ದೇಶಗಳ ಪರಿಹಾರ’ (ಆಗ ಕೇವಲ ಶೇ.30 ರಷ್ಟಿದ್ದ ಮತ್ತು ಶೇ. 7 ಮಾತ್ರ ಭೂಮಿ ಹೊಂದಿದ್ದ) ಜಿಯೋನಿಸ್ಟ ಯೆಹೂದಿಯರ ಹೊಸ ದೇಶಕ್ಕೆ ಪ್ಯಾಲೆಸ್ಟೆöÊನ್ನಿನ ಶೇ. 55 ಭೂಮಿ ಕೊಡಲು ಪ್ರಸ್ತಾವ; ಪ್ಯಾಲೆsಸ್ಟೀನ್ನರ ಮತ್ತು ಅರಬ್ ದೇಶಗಳ ವಿರೋಧ

ಮೇ 15, 1948 – ಜಿಯೋನಿಸ್ಟ ಯೆಹೂದಿಯರ ಹೊಸ ದೇಶ ಇಸ್ರೇಲಿನ ಘೋಷಣೆ

1948 : ನಕ್ಬಾ (ಮಹಾಪ್ರಕೋಪ) ಮೊದಲ ಇಸ್ರೇಲಿ-ಅರಬ್ ಯುದ್ಧದಲ್ಲಿ  532 ಹಳ್ಳಿಗಳ ಪೂರ್ಣ ನಾಶ, 7.5 ಲಕ್ಷ ಪ್ಯಾಲೆಸ್ಟೀನ್ನರು ದೇಶಾಂತರ ಹೋಗಿ ನಿರಾಶ್ರಿತರಾದರು. 35 ಸಾವಿರ ಇಸ್ರೇಲ್ ಒಳಗೆ ಆಂತರಿಕ ನಿರಾಶ್ರಿತರಾದರು.

1949 : ಕದನ ವಿರಾಮ ಒಪ್ಪಂದದ ಫಲವಾಗಿ ಇಸ್ರೇಲ್ ವಶದಲ್ಲಿ ಶೇ.78 ಭೂಪ್ರದೇಶ

1964 : ಪಿ.ಎಲ್.ಒ. (ಪ್ಯಾಲೆಸ್ತೀನ್ ವಿಮೋಚನಾ ಸಂಘಟನೆ) ಸ್ಥಾಪನೆ;

1964-1971 : ಜೋರ್ಡಾನಿನ ನೆಲೆಗಳಿಂದ ಇಸ್ರೇಲ್ ವಿರುದ್ಧ ಪಿ.ಎಲ್.ಒ. ಸಶಸ್ತç ವಿಮೋಚನಾ ಗೆರಿಲ್ಲಾ ಹೋರಾಟ; ಇಸ್ರೇಲ್ ವಿರುದ್ಧ ದೇಶದೊಳಗೂ ಹೊರಗೂ ಗೆರಿಲ್ಲಾ ದಾಳಿಗಳು; 1971ರಲ್ಲಿ ‘ಬ್ಲಾಕ್ ಸೆಪ್ಟೆಂಬರ್’ ಪ್ರಕರಣ ನಂತರ ಜೋರ್ಡಾನಿನಿಂದ ಪಿ.ಎಲ್.ಒ. ಉಚ್ಛಾಟನೆ; ಲೆಬನಾನಿನಿಂದ ಹೋರಾಟ ಮುಂದುವರಿಕೆ

1967 ಜೂನ್ : ಎರಡನೇ ಅರಬ್-ಇಸ್ರೇಲಿ ಯುದ್ಧ:  ಇಡೀ ಪ್ಯಾಲೆಸ್ಟೀನ್ ಮತ್ತು ಈಜಿಪ್ಟಿನ ಸಿನಾಯ್ ಮತ್ತು ಸಿರಿಯಾದ ಗೋಲನ್ ಶಿಖರ ಇಸ್ರೇಲ್ ವಶ; 4 ಲಕ್ಷ ಪ್ಯಾಲೆಸ್ತೀನಿಯನ್ನರು ನಿರಾಶ್ರಿತರಾದರು; ಅರಾಫತ್ ನಾಯಕತ್ವದ ಪಿ.ಎಲ್.ಒ. ಮುನ್ನೆಲೆಗೆ

ಇದನ್ನೂ ಓದಿಪ್ಯಾಲೆಸ್ತೀನ್‌ ‘ದಿ ಫ್ರೀಡಂ ಥಿಯೇಟರ್’ ಮೇಲೆ ಇಸ್ರೇಲ್ ಸೇನೆಯಿಂದ ದಾಳಿ: ಆನ್‌ಲೈನ್‌ ಖಂಡನಾ ಸಭೆ

ಎರಡನೇ ಹಂತ – 1967-1993

ಎರಡನೇ ಹಂತ ಇಸ್ರೇಲಿನ ಜಿಯೋನಿಸ್ಟ್ ಪ್ರಭುತ್ವದ ವಿರುದ್ಧ ಪಿ.ಎಲ್.ಒ.ದ ನಾಯಕತ್ವದಲ್ಲಿ ಪ್ಯಾಲೆಸ್ತೀನಿ ಸಶಸ್ತ್ರ ಸ್ವಾತಂತ್ರ್ಯ ಹೋರಾಟದ ಹಂತ. ಈ ಹಂತದಲ್ಲಿ ಪ್ಯಾಲೆಸ್ತೀನಿ ಹೋರಾಟಕ್ಕೆ ಅರಬ್ ದೇಶಗಳ ಜನತೆ ಮತ್ತು ಸರಕಾರಗಳ ಬೆಂಬಲ ಇತ್ತು. ಪಿ.ಎಲ್.ಒ. ಅರಬ್ ದೇಶಗಳಿಂದ ತನ್ನ ಕಾರ್ಯಾಚರಣೆಗಳನ್ನು ನಡೆಸುತ್ತಿತ್ತು. ಪಿ.ಎಲ್.ಒ. ಗೆ ಸೋವಿಯೆಟ ಒಕ್ಕೂಟ ಮತ್ತು ಇತರ ಸಮಾಜವಾದಿ ಬಣದ ದೃಢ ಬೆಂಬಲ ಇತ್ತು. ಸೋವಿಯೆಟ ಒಕ್ಕೂಟ ಮತ್ತು ಸಮಾಜವಾದಿ ಬಣ, ಅಲಿಪ್ತ ದೇಶಗಳ ಕೂಟ  ಪಿ.ಎಲ್.ಒ.ಗೆ ವಿಶ್ವಸಂಸ್ಥೆ ಸೇರಿದಂತೆ ಅಂತರಾಷ್ಟ್ರೀಯ  ವೇದಿಕೆಗಳಲ್ಲಿ ರಾಜಕೀಯ ಬೆಂಬಲ ನೀಡುತ್ತಿತ್ತು. ಸೋವಿಯೆಟ ಒಕ್ಕೂಟ ಪಿ.ಎಲ್.ಒ.ಗೆ ಆರ್ಥಿಕ, ಮಿಲಿಟರಿ ಬೆಂಬಲ ಮತ್ತು ತರಬೇತಿ ಸಹ ನೀಡುತ್ತಿತ್ತು. ಆದರೆ ಈ ಹಂತದಲ್ಲಿ ಮೊದ ಮೊದಲಿಗೆ ಪ್ಯಾಲೆಸ್ತೀನಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ನೆರೆಯ ಅರಬ್ ದೇಶಗಳಲ್ಲಿ ಇದ್ದ ಕಳಕಳಿ, ಸೌಹಾರ್ದ ಭಾವನೆ ಕಡಿಮೆಯಾಗುತ್ತಾ ಬಂದ ಹಂತ ಕೂಡಾ. ಇದಕ್ಕೆ ಕಾರಣ ಈ ದೇಶಗಳ ಸರಕಾರದಲ್ಲಿ ಹಾಗೂ ರಾಜಕೀಯ ನಾಯಕತ್ವದಲ್ಲಿ ಸಾಮ್ರಾಜ್ಯಶಾಹಿ-ವಿರೋಧಿ, ಸೆಕ್ಯುಲರ್, ಅರಬ್ ರಾಷ್ಟ್ರೀಯವಾದಿ ಶಕ್ತಿಗಳು ದುರ್ಬಲವಾದದ್ದು ಅಥವಾ ಅವು ಬದಲಾದದ್ದು. 1978ರಲ್ಲಿ ಈಜಿಪ್ಟ್ ಮಾಡಿಕೊಂಡ ಕ್ಯಾಂಪ್ ಡೇವಿಡ್ ಒಪ್ಪಂದದಿಂದ ಮೊದಲುಗೊಂಡು ಅರಬ್ ಸರಕಾರಗಳು ಒಂದೊಂದಾಗಿ ಅಮೆರಿಕನ್ ಸರಕಾರದ ಆಮಿಷ, ಕೈತಿರುಚುವಿಕೆ, ಬೆದರಿಕೆಗೆ ಬಲಿಯಾಗಿ ಇಸ್ರೇಲ್ ಜತೆ ರಾಜಿಯಾಗಲು ಆರಂಭಿಸಿದವು. ಈ ಹಂತದ ಆರಂಭದಲ್ಲಿ 1980ರ ದಶಕದ ಆರಂಭದವರೆಗೆ ಪಿ.ಎಲ್.ಒ.ದ ಸಶಸ್ತç ಗೆರಿಲ್ಲಾ ಹೋರಾಟ ಪರಿಣಾಮಕಾರಿಯಾಗಿದ್ದು, ಈ ಹಂತದ ಉದ್ದಕ್ಕೂ ಮುಂದುವರೆಯಿತು. ಆದರೆ ವಿದೇಶೀ ಬೆಂಬಲ ಕಡಿಮೆಯಾಗಿದ್ದರಿಂದ ಮತ್ತು ಇಸ್ರೇಲಿ ಮಿಲಿಟರಿ ಅಮೆರಿಕದ ನೆರವಿನಿಂದ ಅಗಾಧವಾಗಿ ಹೆಚ್ಚಿದ್ದರಿಂದ ಗೆರಿಲ್ಲಾ ಹೋರಾಟ 1980ರ ದಶಕದ ಉತ್ತರಾರ್ಧದಲ್ಲಿ ಬಲಹೀನವಾಗುತ್ತಾ ಬಂತು. ಆದರೆ ಈ ಹಂತ ‘ಇಂತಿಫದಾ’ ಎಂಬ ವ್ಯಾಪಕ ಪಾಲ್ಗೊಳ್ಳುವಿಕೆ ಮತ್ತು ಜನಬೆಂಬಲ ಪಡೆದ ಹೊಸ ಪ್ರತಿರೋಧದೊಂದಿಗೆ ಕೊನೆಗೊಂಡಿತು. ಕೊಲ್ಲಿ ಯುದ್ಧದಲ್ಲಿ ತಟಸ್ಥ ನೀತಿ, ಮಧ್ಯ ಪ್ರಾಚ್ಯದ ಬಗ್ಗೆ ಗೋರ್ಬಚೇವ್ ನಾಯಕತ್ವದಲ್ಲಿ ಸೋವಿಯೆಟ್ ಒಕ್ಕೂಟದ ನಿಲುವು ಬದಲು ಮತ್ತು ಕೊನೆಗೆ ಕುಸಿತ, ಹಾಗೂ ಬದಲಾದ ಅಂತರಾಷ್ಟ್ರೀಯ ಪರಿಸ್ಥಿತಿಯಲ್ಲಿ ಪಿ.ಎಲ್.ಒ ಇಸ್ರೇಲ್ ಜತೆಗೆ ರಹಸ್ಯ ಮಾತುಕತೆ ಆರಂಭಿಸಿತು. ಆದರೆ ಕೊನೆಗೂ ಇಂತಿಫದಾದ ಒತ್ತಡದಿಂದಲೇ 1993ರ ಒಸ್ಲೊ ಒಪ್ಪಂದ ಸಾಧ್ಯವಾಯಿತು. ಎರಡನೇ ಹಂತದ ಪ್ರಮುಖ ಮೈಲಿಗಲ್ಲುಗಳು:

1971-82: ಇಸ್ರೇಲ್ ವಿರುದ್ಧ ಪಿ.ಎಲ್.ಒ. ಸಶಸ್ತç ವಿಮೋಚನಾ ಗೆರಿಲ್ಲಾ ಹೋರಾಟ ಲೆಬನಾನಿನಿಂದ ಮುಂದುವರಿಕೆ; ಲೆಬನಾನಿನನಲ್ಲಿ ಆಂತರಿಕ ಕಲಹದಲ್ಲಿ ಭಾಗವಹಿಸುವಿಕೆ; ಕ್ರಿಶ್ಚಿಯನ್ ಗೆರಿಲ್ಲಾಗಳೊಂದಿಗೆ ಸೇರಿ ಲೆಬನಾನ್ ಮೇಲೆ ಇಸ್ರೇಲ್ ದಾಳಿ; ಅರಾಫತ್ ರಿಂದ 10 ಅಂಶಗಳ ಶಾಂತಿ ಮಾತುಕತೆಗಳ ಪ್ರಸ್ತಾವ; ಹಲವು ಪಿ.ಎಲ್.ಒ. ಮತ್ತು ಇಸ್ಲಾಮ್ ಗುಂಪುಗಳಿAದ ತೀವ್ರ ವಿರೋಧ; 1982ರಲ್ಲಿ ಲೆಬನಾನ್ ನಿಂದ ಪಿ.ಎಲ್.ಒ. ಉಚ್ಛಾಟನೆ; ಟುನಿಶಿಯಾಕ್ಕೆ ಪಿ.ಎಲ್.ಒ. ಪಡೆಗಳ ನಿರ್ಗಮನ

1973 ಅಕ್ಟೋಬರ್ : ಈಜಿಪ್ಟ್, ಸಿರಿಯಾಗಳಿಂದ ಯುದ್ಧ; ಅಮೆರಿಕದ ಮಧ್ಯಸ್ತಿಕೆಯಿಂದ ಕದನ ವಿರಾಮ

1974: ಪಿ.ಎಲ್.ಒ. ಗೆ ವಿಶ್ವಸಂಸ್ಥೆಯಲ್ಲಿ ವೀಕ್ಷಕ ಸ್ಥಾನ;

1978 ಸೆಪ್ಟೆಂಬರ್: ಅರಬ್ ಐಕ್ಯತೆ ಮುರಿದು ಇಸ್ರೇಲ್ ಜತೆ ಈಜಿಪ್ಟ್ ನ ಕ್ಯಾಂಪ್ ಡೇವಿಡ್ ಒಪ್ಪಂದ; ಪ್ಯಾಲೆಸ್ತೀನ್ಯನ್ನರಿಗೆ ಸ್ಥಳೀಯ ಆಡಳಿತ ಮಾತ್ರ ಕೊಡುವ ಒಪ್ಪಂದಕ್ಕೆ ಅರಬ್-ಪ್ಯಾಲೆಸ್ತೀನ್‌ಯನ್ನರ ತಿರಸ್ಕಾರ;

1982-93: ಟುನಿಶಿಯಾದ ಅವಧಿಯಲ್ಲಿ ಪಿ.ಎಲ್.ಒ. ಸಂಘಟನೆಯ ಬಲ ಆಂತರಿಕ ಮತ್ತು ಪ್ರತಿಕೂಲ ಅಂತರಾಷ್ಟ್ರೀ ಬೆಳವಣಿಗೆಗಳಿಂದಾಗಿ ಕುಂದಿತು; 1991ರಿಂದ ಇಸ್ರೇಲ್ ಜತೆ 1993ರ ಒಸ್ಲೊ ಒಪ್ಪಂದದಲ್ಲಿ ಅಂತ್ಯವಾದ ರಹಸ್ಯ ಶಾಂತಿ ಮಾತುಕತೆ ಆರಂಭ;

1987–1993 ಮೊದಲ ಇಂತಿಫದಾ – ಇಸ್ರೇಲಿನ ಆಕ್ರಮಿತ ಪ್ರದೇಶಗಳಲ್ಲಿ ಸಾಮೂಹಿಕ ದಂಗೆಗಳು;  ಅಂತರಾಷ್ಟ್ರೀಯ ಗಮನ ಸೆಳೆದ ಹೋರಾಟ; 200ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಸಾವಿರಕ್ಕೂ ಹೆಚ್ಚು ನಾಗರಿಕರ ಕಗ್ಗೊಲೆಗಳನ್ನು ಒಳಗೊಂಡÀ ಇಸ್ರೇಲ್ ಮಿಲಿಟರಿಯ ಭೀಕರ ಕ್ರೌರ್ಯದಿಂದ ಮತ್ತು ಈ ಅವಧಿಯ ಕೊನೆಯಲ್ಲಿ ಹುಟ್ಟಿ ಬೆಳೆದ ಇಸ್ಲಾಮಿಕ್ ಉಗ್ರವಾದಿ ಮತ್ತು ಸೆಕ್ಯುಲರ್ ಪಿ.ಎಲ್.ಒ.ದ 4 ಪ್ರಮುಖ ಪಕ್ಷಗಳ ಕಾರ್ಯಕರ್ತರ ನಡುವೆ ಕೊಲೆ-ಹಿಂಸಾಚಾರ-ಅನೈಕ್ಯತೆಗಳಿAದ ಸೋತ ಹೋರಾಟ

1988 ಪ್ಯಾಲೆಸ್ತೀನ್ ಸ್ವಾತಂತ್ರ್ಯ  ಘೋಷಣೆ – ವಿಶ್ವಸಂಸ್ಥೆಯ 1947ರ ನಿರ್ಣಯದ ಅನುಸಾರ

1991 ಮಾಡ್ರಿಡ್ ಮಧ್ಯ-ಪ್ರಾಚ್ಯ ಶಾಂತಿ ಸಮ್ಮೇಳನ

1993 ಒಸ್ಲೊ ಒಪ್ಪಂದ

ಮೂರನೇ ಹಂತ (1993 ರಿಂದ ಈಗಿನ ವರೆಗೆ)

ಪ್ಯಾಲೆಸ್ತೀನ್ ಆಶೋತ್ತರಗಳನ್ನು ಈಡೇರಿಸದ ಒಸ್ಲೊ ಒಪ್ಪಂದದೊಂದಿಗೆ ಮೂರನೇ ಹಂತ ಆರಂಭವಾಯಿತು. ಹಲವು ಪ್ಯಾಲೆಸ್ಟೀನ್ ಗುಂಪುಗಳು ಒಪ್ಪಂದವನ್ನು ತಿರಸ್ಕರಿಸಿದರೂ, ಪಿ.ಎಲ್.ಒ. ಹಾಗೂ ಅರಾಫತ್ ಪ್ರಭಾವಿ ನಾಯಕತ್ವದಿಂದ ಶಾಂತಿ ಮತ್ತು ಸ್ವಯಮಾಡಳಿತದ ಸ್ಥಾಪನೆಯ ಆಸೆ ಇನ್ನೂ ಉಳಿದಿತ್ತು. ಆದರೆ ಒಪ್ಪಂದದ ಮುಖ್ಯ ಭಾಗವಾದ ಆಕ್ರಮಿತ ಪ್ಯಾಲೆಸ್ತೀನ್ (ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆ) ಪ್ರದೇಶಗಳಿಂದ ಯಹೂದಿ ವಸತಿಗಳನ್ನು ತೆರವು ಮಾಡುವ ಹಾಗೂ ಹೊಸ ವಸತಿಗಳನ್ನು ಸ್ಥಾಪಿಸದಿರುವ ಅಂಶ ಜಾರಿಯಾಗಲೇ ಇಲ್ಲ. ಬದಲಾಗಿ ಮಿಲಿಟರಿ ಪ್ರತ್ಯಕ್ಷ-ಪರೋಕ್ಷ ಬೆಂಬಲದೊಂದಿಗೆ ಹೊಸ ಯಹೂದಿ ವಲಸೆಗಾರರ ವಸತಿ ಇನ್ನೂ ಹೆಚ್ಚಿನ ರಭಸದಿಂದ ಆರಂಭವಾಯಿತು. ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ಅಧಿಕಾರ ವಹಿಸಿಕೊಂಡ ಪ್ರಾಧಿಕಾರ ನಾಮ-ಕಾ-ವಾಸ್ತೆ ಸರಕಾರವಾಗಿತ್ತು. ಪ್ಯಾಲೆಸ್ತೀನ್ ಜನತೆಯ ದೈನಂದನ ಬವಣೆ ಏನೂ ಕಡಿಮೆಯಾಗಿಲ್ಲ. ಈ ಹಂತದಲ್ಲಿ ಅಂತರಾಷ್ಟ್ರೀಯ ಪರಿಸ್ಥಿತಿಯ ಬದಲಾವಣೆಯಿಂದಾಗಿ, ಮಧ್ಯ ಪ್ರಾಚ್ಯದಲ್ಲಿ ಅಮೆರಿಕದ ಆಕ್ರಾಮಕ ನೀತಿಯಿಂದಾಗಿ ಇಸ್ರೇಲಿ ಹಠಮಾರಿತನ ಉದ್ಧಟತನ ಇನ್ನಷ್ಟೂ ಭೀಕರವಾಯಿತು. ಇದರ ವಿರುದ್ಧ ಎರಡನೇ ಇಂತಿಫದಾ ಭುಗಿಲೆದ್ದಿತು. ಈ ಹಂತ ಪ್ಯಾಲೆಸ್ತೀನ್ ಜನತೆಯ ರಾಜಕೀಯ ನಾಯಕತ್ವಕ್ಕಾಗಿ ಸೆಕ್ಯುಲರ್ ಎಡ-ರಾಷ್ಟ್ರೀಯವಾದಿ ಮತ್ತು ಇಸ್ಲಾಮಿಕ್ ಉಗ್ರಗಾಮಿ ಶಕ್ತಿಗಳ ನಡುವೆ ತೀವ್ರ ಪೈಪೋಟಿ ಕಾದಾಟ, ಕೊನೆಗೂ ಇಸ್ಲಾಮಿಕ್ ಉಗ್ರಗಾಮಿಗಳ ಕೈಮೇಲಾದ ಅವಧಿ. ಪ್ರತಿರೋಧ ಪ್ರಮುಖವಾಗಿ ಗಾಜಾ ಪಟ್ಟಿಯಿಂದ ಹಾಮಾಸ್ ಇಸ್ಲಾಮಿಕ್ ನಾಯಕತ್ವದಲ್ಲಿ ಬಂತು. ಇದರ ವಿರುದ್ಧ ಗಾಜಾ ಪಟ್ಟಿಯ ದಿಗ್ಬಂಧನ, ತೀವ್ರ ವಿಮಾನ ದಾಳಿಯ ಮೂಲಕ ಆಗಾಗ ನಾಲ್ಕು ಪ್ರಮುಖ ನರಮೇಧಗಳನ್ನು ಸಂಘಟಿಸಿತು. ಅವುಗಳಲ್ಲಿ 2014ರ ನರಮೇಧ ಅತ್ಯಂತ ಭೀಕರವಾಗಿತ್ತು. ಈ ಹಂತದ ಇಸ್ರೇಲಿ ಬರ್ಬರತೆಯ ಪ್ರತೀಕ ಇಸ್ರೇಲಿ ಗೋಡೆ. ಇಸ್ರೇಲಿನ ಈ ಬರ್ಬರತೆಗಳ ವಿರುದ್ಧ ಹೋರಾಟ ಪುನಃ ಭುಗಿಲೆದ್ದಿದ್ದು ಇನ್ನೊಂದು ಇಂತಿಫದಾ ಆರಂಭವಾಗಿದೆ ಎನ್ನಲಾಗುತ್ತಿದೆ. ಮೂರನೇ ಹಂತದ ಪ್ರಮುಖ ಮೈಲಿಗಲ್ಲುಗಳು:

2000-2005 ಎರಡನೇ ಇಂತಿಫದಾ 3 ಸಾವಿರ ಪ್ಯಾಲೆಸ್ಟಿನ್ನರು, 1 ಸಾವಿರ ಇಸ್ರೇಲಿಗಳು, 64 ವಿದೇಶಿಯರ ಸಾವು; ಪ್ಯಾಲೆಸ್ಟಿನ್ನರಿಂದ ಆತ್ಮಾಹುತಿ ದಾಳಿಗಳು, ಇಸ್ರೇಲಿನ ಭೀಕರ ಮಿಲಿಟರಿ ದಾಳಿಗಳು

2000 ಕ್ಯಾಂಪ್ ಡೇವಿಡ್ ಶೃಂಗ ಸಭೆ

2002 ಅರಬ್ ಲೀಗ್ ಬೈರೂತ್ ಶೃಂಗ ಸಭೆ

2006 – ಇಸ್ರೇಲ್ ಗಾಜಾ ಪಟ್ಟಿಯಿಂದ ಕಾಲ್ತೆಗೆಯಿತು; ಪಶ್ಚಿಮ ದಂಡೆಯ ಸುತ್ತ ಭದ್ರತಾ ಗೋಡೆಯ ನಿರ್ಮಾಣ ಆರಂಭ; ಗಾಜಾ ಪಟ್ಟಿಯಲ್ಲಿ ಉಗ್ರ ಇಸ್ಲಾಮಿಕ್ ಹಾಮಾಸ್ ಚುನಾವಣಾ ವಿಜಯ;

2007-8 – ಫತಾ ಮತ್ತು ಹಾಮಾಸ್ ನಡುವೆ ಮಿಲಿಟರಿ ಘರ್ಷಣೆ; ಗಾಜಾದಿಂದ ಫತಾ ಪಡೆಗಳ ಉಚ್ಛಾಟನೆ; ಗಾಜಾ ಪ್ರತ್ಯೇಕತೆಯ ಘೋಷಣೆ; ಫತಾ ಸರಕಾರ ಪಶ್ಚಿಮ ದಂಡೆಗೆ ಸೀಮಿತ; ಇಸ್ರೇಲ್ ಮತ್ತು ಹಾಮಾಸ್ ನಡುವೆ ಘರ್ಷಣೆ; ಇಸ್ರೇಲ್ ನಿಂದ ಗಾಜಾ ಪಟ್ಟಿಯ ದಿಗ್ಬಂಧನ;

2006-8 – ಪ್ಯಾಲೆsಸ್ಟೀನ್-ಇಸ್ರೇಲ್ ಪ್ರಧಾನಿ ಮಾತುಕತೆಗಳು

2008 – ಗಾಜಾ ಮೇಲೆ ಇಸ್ರೇಲಿ ದಾಳಿ ‘ಆಪರೇಶನ್ ಹಾಟ್ ವಿಂಟರ್’; ಕದನ ವಿರಾಮ

2008-9 – ಗಾಜಾ ಮೇಲೆ ಪುನಃ ಇಸ್ರೇಲಿ ದಾಳಿ; ‘ಆಪರೇಶನ್ ಕಾಸ್ಟ್ ಲೆಡ್’; 23 ದಿನಗಳ ದಾಳಿಯಲ್ಲಿ 1300 ಪ್ಯಾಲೆಸ್ತೀನ್ನರ ಸಾವು, 10 ಸಾವಿರಕ್ಕೂ ಹೆಚ್ಚು ತೀವ್ರವಾಗಿ ಗಾಯಗೊಂಡವರು;

2012 – ಗಾಜಾ ಮೇಲೆ ಮತ್ತೆ ಇಸ್ರೇಲಿ ದಾಳಿ; ‘ಆಪರೇಶನ್ ಪಿಲ್ಲರ್ ಆಫ್ ಡಿಫೆನ್ಸ್’

2012- ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯಲ್ಲಿ ‘ಸದಸ್ಯತ್ವ ಇಲ್ಲದ ವೀಕ್ಷಕ ದೇಶ’ ಸ್ಥಾನ

2014 – ಗಾಜಾ ಮೇಲೆ ಮತ್ತೆ 53 ದಿನಗಳ ಸತತ ಇಸ್ರೇಲಿ ದಾಳಿ; “ಆಪರೇಶನ್ ಪ್ರೊಟೆಕ್ಟಿವ್ ಎಜ್’; ಗಾಜಾದ ಮೇಲೆ 52 ಸಾವಿರ ಶೆಲ್ಲುಗಳ ದಾಳಿ; 2145 ಪ್ಯಾಲೆಸ್ತೀನ್ನರ ಸಾವು, 10 ಸಾವಿರಕ್ಕೂ ಹೆಚ್ಚು ತೀವ್ರವಾಗಿ ಗಾಯಗೊಂಡವರು; ಶೇ. 30 ಶಾಲೆಗಳ, 17 ಆಸ್ಪತ್ರೆ 50 ಕ್ಲಿನಿಕ್‌ಗಳ ನಾಶ;

2014 – ಅಬ್ಬಾಸ್ ಶಾಂತಿ ಯೋಜನೆ

2015 – ಮೂರನೇ ನಿಶ್ಶಬ್ದ ಇಂತಿಫದಾ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಗಾಜಾ ಮಕ್ಕಳ ಹತ್ಯಾಕಾಂಡ

 

ಇಸ್ರೇಲ್ ಸೈನಿಕರು

 

ಈ ವಿಡಿಯೋ ನೋಡಿ“ಪ್ಯಾಲೆಸ್ಟೈನ್” ನಿನ್ನೆ, ಇಂದು, ನಾಳೆ ಚಿಂತಕ ಡಾ. ಬಿ.ಆರ್. ಮಂಜುನಾಥ್ ರವರ ವಿಶ್ಲೇಷಣೆಯಲ್ಲಿ.

 

Donate Janashakthi Media

Leave a Reply

Your email address will not be published. Required fields are marked *