ಇಸ್ರೇಲ್: ಹಮಾಸ್‌ನ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಅವರನ್ನು ಗುರಿಯಾಗಿಸಿಕೊಂಡು ಬುಧವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಇಸ್ಮಾಯಿಲ್ ಹನಿಯೆ ಹಾಗೂ ಅವರ ಅಂಗರಕ್ಷಕ ಒಬ್ಬರು ಸಾವನ್ನಪ್ಪಿದ ಬಗ್ಗೆ ಧೃಡ ಪಟ್ಟಿದೆ.
ಬುಧವಾರ ಬೆಳಗಿನ ಜಾವ ನಡೆದ ದಾಳಿ ಬೆಳಗ್ಗೆ ಸುಮಾರು 4 ಗಂಟೆಗೆ ನಡೆದಿದೆ ಎಂದು ಅಲ್ಲಿನ ಅಧಿಕಾರಿಗಳು ಧೃಡ ಪಡಿಸಿದ್ದಾರೆ. ಟೆಹ್ರಾನ್‌ನಲ್ಲಿರುವ ಹನಿಯೆ ಅವರ ಮನೆಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಖಚಿತ ಪಡಿಸಿದೆ. ಇನ್ನು ಈ ದಾಳಿಯನ್ನು ಇರಾನ್ ಒಪ್ಪಿಕೊಂಡಿದ್ದು, ಇಸ್ರೇಲ್‌ನ್ನು ದೂಷಿಸಿದೆ.
ಇದನ್ನೂ ಓದಿ: ಮಸೀದಿಯೊಳಗೆ ಬಿಯರ್ ಬಾಟಲ್ ಎಸೆದು ಅಟ್ಟಹಾಸ ಮೆರೆದ ಕಿಡಿಗೇಡಿಗಳು
ಇರಾನ್ ಅಧ್ಯಕ್ಷ ಮಸೌದ್ ಪಝಕಿಯಾನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹನಿಯೆ ಮಂಗಳವಾರ ಟೆಹ್ರಾನ್‌ನಲ್ಲಿದ್ದರು. ಹಮಾಸ್ ಕೂಡ ಹನಿಯೆ ಸಾವನ್ನು ದೃಢಪಡಿಸಿದೆ. ಆದರೆ, ಇದುವರೆಗೂ ಇಸ್ರೇಲ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇಸ್ಮಾಯಿಲ್ ಹನಿಯಾ ಅವರು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸರ್ಕಾರದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ಹಮಾಸ್‌ಗೆ ಬೆಂಬಲವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಎರಡನೇ ಇಂತಿಫಾದ ದಲ್ಲಿ ಇಸ್ಮಾಯಿಲ್ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಈ ಕಾರಣದಿಂದಾಗಿ ಹನಿಯಾ ಅವರನ್ನು ಇಸ್ರೇಲಿ ಭದ್ರತಾ ಪಡೆಗಳು ಬಂಧಿಸಿದ್ದವು. ಹನಿಯಾ ಆರು ತಿಂಗಳ ಕಾಲ ಇಸ್ರೇಲಿ ಜೈಲಿನಲ್ಲಿದ್ದರು.
2006 ರಲ್ಲಿ, ಹನಿಯಾ ಗಾಜಾದಲ್ಲಿ ಚುನಾಯಿತ ಹಮಾಸ್ ಸರ್ಕಾರದಲ್ಲಿ ಪ್ರಧಾನ ಮಂತ್ರಿಯಾದರು ಮತ್ತು ಅಂದಿನಿಂದ ಇಸ್ರೇಲ್ ಮತ್ತು ಹಮಾಸ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಲೇ ಇತ್ತು.ಇತ್ತೀಚೆಗಷ್ಟೇ ಇಸ್ರೇಲ್ ಸೇನೆಯು ಹನಿಯಾ ಅವರ ಮೂವರು ಮಕ್ಕಳಾದ ಅಮೀರ್, ಹಜೆಮ್ ಮತ್ತು ಮೊಹಮ್ಮದ್ ಗಾಜಾ ಅವರನ್ನು ವೈಮಾನಿಕ ದಾಳಿಯಲ್ಲಿ ಕೊಂದಿತ್ತು. ಕಳೆದ ವರ್ಷ ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ 75 ವರ್ಷಗಳಲ್ಲಿ ಅತಿದೊಡ್ಡ ದಾಳಿಯನ್ನು ನಡೆಸಿತ್ತು. ಇದರಲ್ಲಿ 1200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ನೋಡಿ: ವಚನಾನುಭವ – 05 : ಹಸಿವಿನ ಕುರಿತು ಬಡವರ ಧ್ವನಿಯಾಗಿ ದೇವರನ್ನು ಪ್ರಶ್ನಿಸುವ ಜೇಡರ ದಾಸಿಮಯ್ಯ – ಮೀನಾಕ್ಷಿ ಬಾಳಿ