ಬ್ರಾಂಡ್ ಬೆಂಗಳೂರಿನಲ್ಲಿ ಬಡವರಿಗೆ ಜಾಗವಿಲ್ಲವೆ? ಬೀದಿ ವ್ಯಾಪಾರಿಗಳ ಎತ್ತಂಗಡಿ ನಿಲ್ಲಿಸಿ!

ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಕುರಿತಂತೆ ಜೂನ್ 24 ರಂದು ಪ್ರತಿಭಟನೆ
ಬೆಂಗಳೂರು: ನಗರದ ಬೀದಿ ವ್ಯಾಪಾರಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಮ್ಮ ಹಕ್ಕಿಗಾಗಿ ದಿನಾಂಕ ‌ಜೂನ್‌ 24 ಮಂಗಳವಾರದಂದು, ಫ್ರಿಡಂ ಪಾರ್ಕ್ ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರುಕಟ್ಟೆ , ಜಯನಗರ 4ನೇ ಬಡಾವಣೆ , ವಿಜಯನಗರ , ಶಿವಾಜಿನಗರ, ಯೆಶವಂತಪುರ , ಗಾಂಧೀ ಬಜಾರ್ ಹಾಗು ಇನ್ನು ಹಲವು ಮಾರುಕಟ್ಟೆಗಳಿಂದ ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು ಮಂಗಳವಾರ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ತಿಳಿಸಿದೆ. ಬಡವ

ಪ್ರತಿಭಟನೆಯ ಹಿನ್ನಲೆ

ಕರ್ನಾಟಕದ ಆರ್ಥಿಕತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಪ್ರಮುಖ ಕೊಡುಗೆಯನ್ನು ನೀಡುತ್ತಾರೆಂದು ಎಲ್ಲರಿಗೂ ತಿಳಿದಿರುವ ವಿಚಾರ. ರೈತರಿಂದ, ಹೋಲ್ಸೇಲ್ ವಸ್ತುಗಳನ್ನು ಪಡೆದು ನಮ್ಮ ನಗರಗಳಲ್ಲಿ ಅಗತ್ಯ ವಸ್ತುಗಳು ಹಾಗೂ ಸೇವೆಯನ್ನು ಕೈಗೆಟಕುವ ಬೆಲೆಯಲ್ಲಿ ನೀಡುತ್ತಾ , ಬೀದಿ ವ್ಯಾಪಾರ ರಾಜ್ಯದ ಆರ್ಥಿಕ ಆರೋಗ್ಯದ ಜೊತೆಗೆ ಹೆಣೆದಿರುವುದೂ ಸತ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ನಡೆಯು ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯನ್ನುಂಟು ಮಾಡಲು ಹೊರಟಿದೆ. ಬಡವ

ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳು ರಸ್ತೆ ಬದಿ / ಫುಟ್ಪಾತ್ ಮೇಲೆ ವ್ಯಾಪಾರ ಮಾಡಬಾರದು , ವೆಂಡಿಂಗ್ ಜೋನ್ ನಲ್ಲಿ ಮಾತ್ರ ಮಾಡಬೇಕು ಅಥವಾ ದಿನವಿಡೀ ಗಾಡಿಗಳನ್ನು ತಳ್ಳಿಕೊಂಡು ವ್ಯಾಪಾರ ಮಾಡಬೇಕು ಹಾಗು ಗುರುತಿನ ಚೀಟಿ ಇಲ್ಲದವರಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಮಾಧ್ಯಮದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಬಡವ

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದಾನೆ ಜನರ ಆರ್ಥಿಕ ಸ್ಥಿತಿ ಸುಧಾರಣೆ: ಜಿ. ಪರಮೇಶ್ವರ್‌

ಫುಟ್ಪಾತ್ತ್ ಅಥವಾ ಬೀದಿ ಬದಿ ಬಿಟ್ಟು ಬೇರೆ ಯಾವ ಜಾಗದಲ್ಲಿ ವ್ಯಾಪಾರ ಮಾಡಲು ಸಾಧ್ಯ? ಇದು ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ, 2014ರ ಉಲ್ಲಂಘನೆ . ಈ ಹೇಳಿಕೆಯಿಂದ ಅಧಿಕಾರಿಗಳು ಬೀದಿ ವ್ಯಾಪಾರಿಗಳ ಮೇಲೆ ಹೇರುವ ಕಿರುಕುಳ ಹೆಚ್ಚಾಗಿದೆ ಹಾಗು ಇದರಿಂದ ಬೀದಿ ವ್ಯಾಪಾರಿಗಳಿಗೆ ಆತಂಕವಾಗಿದೆ.

ಅಕ್ಟೋಬರ್ 2024ರಿಂದ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದು ಫೆಬ್ರವರಿ 2025 ಮುಕ್ತಾಯಗೊಂಡಿದ್ದು ಸುಮಾರು 34,000 ಬೀದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ ಮತ್ತು ಇತರೆ ಸಾವಿರಾರು ವ್ಯಾಪಾರಿಗಳನ್ನು ಸಮೀಕ್ಷೆಯಿಂದ ಸ್ವೀಕರಿಸಲಾಗದ ವಿವಿಧ ಕಾರಣಗಳಿಂದಾಗಿ ಹೊರಗಿಡಲಾಗಿದೆ. ಬಡವ

ಪಿ.ಎಂ-ಸ್ವಾನಿಧಿ ಸಾಲವನ್ನು 70,000ಕೂ ಹೆಚ್ಚು ಜನರಿಗೆ ನೀಡಿಲಾಗಿದ್ದು, ಕನಿಷ್ಠ 70,000 ಬೀದಿ ವ್ಯಾಪಾರಿಗಳು ಸಮೀಕ್ಷೆಯಲ್ಲಿ ಒಳಗೊಂಡಿರಬೇಕಲ್ಲವೇ? ಬೆಂಗಳೂರಿನಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನ ಬೀದಿ ವ್ಯಾಪಾರದ ಮೇಲೆ ಅವಲಂಬಿತರಾಗಿದ್ದು, ಸಮೀಕ್ಷೆಯಲ್ಲಿ ಒಳಗೊಳ್ಳದ ಬೀದಿ ವ್ಯಾಪಾರಿಗಳು ಯಾವುದೇ ರೀತಿಯ ಕಾನೂನಿನ ರಕ್ಷಣೆ ಇಲ್ಲದಂತೆ ಬೇಕು ಅಂತಲೇ ಹೊರದಬ್ಬಲಾಗಿದೆ. ಜೊತೆಗೆ ಸಮೀಕ್ಷೆಯಲ್ಲಿ ಒಳಗೊಂಡ ವ್ಯಾಪಾರಿಗಳಿಗೆ ಇದುವರೆಗೂ ಗುರುತಿನ ಚೀಟಿ ಅಥವಾ ವ್ಯಾಪಾರದ ಪ್ರಮಾಣ ಪತ್ರವನ್ನು ವಿತರಿಸಿರುವುದಿಲ್ಲ.

ಇದರ ಜೊತೆಗೆ ಬೀದಿ ವ್ಯಾಪಾರಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿ ಕಳೆದ ವಾರ ಬಿಬಿಎಂಪಿ ಅಧಿಕಾರಿಗಳು ಕಾನೂನು ಬಾಹಿರವಾಗಿ ಬೀದಿ ವ್ಯಾಪಾರಿಗಳ ಸರಕನ್ನು ವಶಪಡಿಸಿಕೊಂಡು ಇನ್ನು ಸಹ ಹಿಂತುರಿಗಿಸಿಲ್ಲ. ಮೊನ್ನೆಯ ದಿವಸ ಜಯನಗರ ೯ ನೇ ಬಡಾವಣೆ ಹಾಗು ಸಾರಕ್ಕಿ ಮಾರುಕಟ್ಟೆ – ಎರಡು ಕಡೆ ರಾತ್ರಿ ವೇಳೆ ಯಾರೋ ಕಳ್ಳರು ಬೀದಿ ವ್ಯಾಪಾರಿಗಳ ಸಾವಿರಾರು ರೂಪಾಯಿ ಮೊತ್ತದ ಹಣ್ಣನ್ನು ಕದ್ದಿದ್ದಾರೆ. ಹಲವಾರು ಮಾರುಕಟ್ಟೆಗಳಲ್ಲಿ ಶೌಚಾಲಯ , ನೀರು , ಬೆಳಕು ಮುಂತಾದ ಮೂಲಸೌಕರ್ಯವಿಲ್ಲ. ಬೀದಿ ವ್ಯಾಪಾರಿಗಳಿಗೆ ಯಾವುದೇ ಸಾಮಾಜಿಕ ಭದ್ರತೆಯಿಲ್ಲ.

ಈ ಎಲ್ಲಾ ಕಾರಣಗಳಿಗಾಗಿ , ನಮ್ಮ ಘನತೆಗಾಗಿ, ಬೀದಿ ವ್ಯಾಪಾರದ ಹಕ್ಕಿಗಾಗಿ , ಮಾರುಕಟ್ಟೆಗಳಲ್ಲಿ ಮೂಲಭೂತ ಸೌಕರ್ಯಕ್ಕಾಗಿ, ಸಾಮಾಜಿಕ ಭಾದ್ರತೆಗಾಗಿ  ಜೂನ್ 24 ರಂದು ಪ್ರತಿಭಟಿನೆ ನಡೆಸುವುದಾಗಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಪುಸ್ತಕ ಬಿಡುಗಡೆ | ಆರದ ಹೋರಾಟದ ಕಿಚ್ಚು | ಪ್ರಬೀರ್ ಪುರಕಾಯಸ್ತ

Donate Janashakthi Media

Leave a Reply

Your email address will not be published. Required fields are marked *