ಸಿದ್ದರಾಮಯ್ಯ ರವರ ವಿರುದ್ಧ ಸುಳ್ಳು ಕೊಲೆ ಆರೋಪ ಹೇಳಿಕೆ ನೀಡಿದ್ದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಲು ದೂರನ್ನು ಬರೆದು ಕೊಟ್ಟಿರುವುದು ನಾನೇ ಆದರೆ ಆರೋಪಿ ಮಹೇಶನಲ್ಲ ಶಾಸಕ ಹರೀಶ. ಅದು ಕಳೆದ ವಿಧಾನ ಸಭಾ ಚುನಾವಣಾ ಸಮಯ. ಮಾನ್ಯ ಹರೀಶ್ ಪೂಂಜಾರವರು ಬಹಿರಂಗ ಸಭೆಯೊಂದರಲ್ಲಿ ಸಿದ್ದರಾಮಯ್ಯರ ವಿರುದ್ಧ ಘರ್ಜಿಸುತ್ತಾ ತನ್ನ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್rಅವರಿಗೆ ಸತ್ಯಜಿತ್ ರವರು ಬೆಂಬಲಿಸಿದ್ದನ್ನು ವಿರೋಧಿಸುತ್ತಾ “ ಸತ್ಯಣ್ಣನೀವು ನನ್ನ ವಿರುದ್ಧ ಪ್ರಚಾರ ಮಾಡಿದ್ದಕ್ಕೆ ಬೇಸರವಿಲ್ಲ . ಆದರೆ ಹಿಂದೂ ವಿರೋಧಿ , ಇಪ್ಪತ್ತ ನಾಲ್ಕು ಹಿಂದೂ ಗಳನ್ನು ಹತ್ಯೆ ಮಾಡಿದ್ದ ಸಿದ್ದರಾಮಯ್ಯನವರ ಪರವಾಗಿ ಮತ ಕೇಳುತ್ತಿದ್ದೀರಲ್ಲಾ ಇದುನನಗೆಬೇಸರ ತಂದಿದೆ “ ಎಂದು ಹೇಳಿದ್ದರು.
ದಿನೇಶ್ ಹೆಗ್ಡೆ ಉಳೆಪಾಡಿ ವಕೀಲರು ಮಂಗಳೂರು
ಈ ಹೇಳಿಕೆಯ ವಿಚಾರವಾಗಿ ನಾನು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಗೆ ತಿಳಿಸಿ ಒಂದು ದೂರನ್ನು ಬರೆದು ಕಾಂಗ್ರೆಸ್ ಕಾರ್ಯಕರ್ತರ ಮೂಲಕ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದೆ.
ಈ ರೀತಿಯ ಕೋಮು ಪ್ರಚೋದಕ ಹೇಳಿಕೆ ನೀಡಿದ್ದ ಹರೀಶ್ ಪೂಂಜಾ ವಿರುದ್ಧ ಕ್ರಿಮಿನಲ್ ಕೇಸ್ ಅಲ್ಲದೆ ಮುಂದುವರಿದ ಕಾನೂನು ಕ್ರಮವಾಗಿ ಮಾನಹಾನಿ ದೂರನ್ನೂ ದಾಖಲು ಮಾಡಲು ನಾನು ಸಿದ್ಧತೆ ನಡೆಸಿದ್ದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ರವರಲ್ಲಿ ಇದು ಒಂದು ಪಕ್ಷಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಸಿದ್ದರಾಮಯ್ಯರವರಲ್ಲಿ ಅಭಿಪ್ರಾಯ ಕೇಳುವಂತೆ ತಿಳಿಸಿದ್ದೆ. ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂತು .
ಇದನ್ನೂ ಓದಿ: ಒಳಮೀಸಲಾತಿ: ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲು ಮನವಿ
ಸಿದ್ದರಾಮಯ್ಯರವರಲ್ಲಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕೇಸ್ ವಿಚಾರವಾಗಿ ಪ್ರಸ್ತಾಪಿಸಿದಾಗ ಅವರು ಮುಖ್ಯಮಂತ್ರಿ ಸ್ಥಾನ ಏರಿದ್ದರು .
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯರವರ ಸಲಹೆ ಈ ರೀತಿ ಇತ್ತು “ ಹರೀಶ್ ಪೂಂಜಾನ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಅದು ರಾಜಕೀಯವಾಗಿ ಹೇಳಿರುವ ಮಾತು . ಅದಕ್ಕೆಲ್ಲಾ ಕೇಸ್ ಹಾಕಿ ಅವರಿಗೆ ತೊಂದರೆ ಕೊಡಲು ಹೋಗಬೇಡಿ . ಅದನ್ನೆಲ್ಲಾ ಮರೆತು ಬಿಡಿ “ ಮುಖ್ಯಮಂತ್ರಿಯವರ ಆದೇಶದಂತೆ ಎಲ್ಲರೂ ಹರೀಶ್ ಪೂಂಜಾರವರ ಭಾಷಣವನ್ನು ಮರೆತರು .ಅಶೋಕ್ ರವರು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ಈಗ ಈ ಪ್ರಕರಣವನ್ನು ಮುನ್ನೆಲೆಗೆ ತಂದರು .,
ಮೊನ್ನೆ ಬೆಳ್ತಂಗಡಿಯ ಉಜಿರೆಯಲ್ಲಿ ಪ್ರತಿಭಟನೆ ಮಾಡಿದ್ದ ಸಮಯ “ಸೌಜನ್ಯ ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ತಿಮರೋಡಿಯವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಇಪ್ಪತ್ತ ನಾಲ್ಕು ಕೊಲೆ ಮಾಡಿದ್ದಾರೆ ಎಂದು ಆಪಾದಿಸಿ ಭಾಷಣ ಮಾಡಿದ್ದಾರೆ “ ಎಂದು ಹೇಳಿದರು.
ಅಶೋಕ್ ರವರ ಈ ಹೇಳಿಕೆ ಇಂದು ಸದನದಲ್ಲಿ ಕೂಡಾ ಚರ್ಚೆಗೆ ಬಂದು ಗದ್ದಲ ಉಂಟಾಗಿ ಮಾನ್ಯ ಗೃಹ ಸಚಿವರು ಈ ರೀತಿ ಹೇಳಿಕೆ ಕೊಟ್ಟ ತಿಮರೊಡಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ. ಧರ್ಮಸ್ಥಳದ ಆಸುಪಾಸಿನಲ್ಲಿ ಈ ಹಿಂದೆ ನಡೆದಿದ್ದ ಸಂಶಯಿತ ಮರಣವಾದ ವ್ಯಕ್ತಿಗಳ ಬಗ್ಗೆ ತನಿಕೆ ನಡೆಯಬೇಕೆಂಬುದು ಎಲ್ಲಾ ಜನರ ಆಶಯ. ಆದರೆ ಈ ತನಿಖೆಯನ್ನು ನಿಲ್ಲಿಸ ಬೇಕಂಬ ಹಂಬಲ ನಮ್ಮ ಬಿಜೆಪಿ ಮುಂದಾಳುತ್ವದ ಮತ್ತು ಕಾಂಗ್ರೆಸ್ ಶಾಸಕ ಬೆಂಬಲಿತರ ಪ್ರಯತ್ನ .ಆ ಪ್ರಯತ್ನವಾಗಿ ಮಹೇಶ್ ತಿಮರೋಡಿಯವರನ್ನು ಬೆದರಿಸಲು ಈ ರೀತಿ ಪ್ರಯತ್ನವನ್ನು ಹೆಣೆಯಲಾಯಿತು . ಆದರೆ ಅದು ಉಲ್ಟಾ ಆಯಿತು .
ಸಿದ್ದರಾಮಯ್ಯನವರ ವಿರುದ್ಧ ಹೇಳಿದ್ದಾರೆ ಎನ್ನಲಾದ ಭಾಷಣವನ್ನು ತರಿಸಿ ನೋಡದೆ ನೇರವಾಗಿ ಈ ಹೇಳಿಕೆಯನ್ನು ತಿಮರೊಡಿ ಯವರು ಹೇಳಿದ್ದಾರೆ ಎಂದು ಸುಳ್ಳು ಹೇಳಿ ಈಗ ತಾನೇ ತೋಡಿದ ಗುಂಡಿಗೆ ತಾನೇ ಬಿದ್ದಿದ್ದಾರೆ . ಕನಿಷ್ಠ ಈಗಲಾದರೂ ನಮ್ಮ ಶಾಸಕರಿಗೆ ಈ ರೀತಿಯ ಕೋಮು ಭಾವನೆ ಕೆರಳಿಸುವವರ ಮತ್ತು ಮುಖ್ಯ ಮಂತ್ರಿಗಳನ್ನೇ ಕೊಲೆಗಾರ ಎಂದು ಹೇಳುವ ಜನರ ವಿರುದ್ಧ ಕಾನೂನು ಕೈಗೊಳ್ಳಬೇಕೆಂಬ ಪ್ರಜ್ಞೆ ಬಂತಲ್ಲ . ಆರೋಪಿ ನಮ್ಮ ಶಾಸಕಹರೀಶ್ ಪೂಂಜಾರವರನ್ನು ಎರೆಸ್ಟ್ ಮಾಡಲೇ ಬೇಕು.ಸದನದ ಗೌರವವನ್ನು ಉಳಿಸಲೇಬೇಕು. ಥ್ಯಾಂಕ್ಯೂ ವಿರೋಧ ಪಕ್ಷದ ನಾಯಕ ಅಶೋಕ್ ರವರೇ . ಹರೀಶ್ ಪೂಂಜಾರವರನ್ನು ಅರೆಸ್ಟ್ ಮಾಡಲು ಪರೋಕ್ಷವಾಗಿ ಸಹಕರಿಸಿದ್ದಕ್ಕೆ.
ಇದನ್ನೂ ನೋಡಿ:ದೂರುದಾರ ವ್ಯಕ್ತಿ ಪ್ರಾಮಾಣಿಕ, ಆತ ಹೇಳ್ತೀರೋದು ಎಲ್ಲವೂ ಸತ್ಯ – ಬಾಲನ್Janashakthi Media
