ಅಮೆರಿಕದ ದಾದಾಗಿರಿಗೆ ಮೋದಿ ಸರ್ಕಾರವೇಕೆ ಮಂಡಿಯೂರುತ್ತಿದೆ?

ಸವೇರಾ

ಮೋದಿ ಸರ್ಕಾರವು ಇತ್ತೀಚಿನ ವಾರಗಳಲ್ಲಿ ಅಮೆರಿಕವನ್ನು  ಓಲೈಸಲು ಮುಂದಾದ ಹಲವಾರು ನಿದರ್ಶನಗಳಿವೆ. ಅದರ ಈ ಕೃತ್ಯಗಳು ಸಾಮ್ರಾಜ್ಯವಾದಕ್ಕೆ ಹೇಡಿತನದ ಶರಣಾಗತಿ ಬಿಜೆಪಿ/ಆರೆಸ್ಸೆಸ್ಸಿನಲ್ಲಿ ಆಳವಾದ ಬೇರುಗಳನ್ನು ಬಿಟ್ಟಿದೆ ಎಂಬುದನ್ನು ಬಯಲುಮಾಡಿದೆ. ಅಷ್ಟೇ ಅಲ್ಲ,ಅವರ ‘ರಾಷ್ಟ್ರವಾದ’ದ ಮತ್ತು ‘ವಸುದೈವ ಕುಟುಂಬಕಂ’ ಮುಂತಾದ ಸೂತ್ರಗಳ ಅಥವಾ ‘ವಿಶ್ವಗುರು’ ಎಂಬ ಮಹತ್ವಾಕಾಂಕ್ಷೆಯ ಟೊಳ್ಳುತನವನ್ನು ಪ್ರಕಟಗೊಳಿಸಿದೆ. ಸಾಮ್ರಾಜ್ಯವಾದದೊಂದಿಗಿನ ಹಿತಾಸಕ್ತಿಗಳಿಗೆ ಬಿಜೆಪಿ/ಆರೆಸ್ಸೆಸ್ ನ ಬದ್ಧತೆಯು ಭಾರತದಲ್ಲಿನ ದೊಡ್ಡ ಬಂಡವಾಳಶಾಹಿಗಳ ಏಜೆಂಟಾಗಿ ಕಾರ್ಯಾಚರಣೆ ನಡೆಸುವ ಅದರ ಆಕ್ರಮಣಕಾರಿ ನೀತಿಯೊಂದಿಗೆ ತಾಳೆ ಹೊಂದುತ್ತದೆ. ಆದರೆ ಈಗ ಅದರ ಅತಿರಾಷ್ಟ್ರೀಯವಾದ, ಮಿಲಿಟರಿ ಶಕ್ತಿಪ್ರದರ್ಶನ ಹಾಗೂ ಅಂತರರಾಷ್ಟ್ರೀಯ ಮೆಚ್ಚುಗೆಗಳ ಆವರಣಗಳು ಉದುರಿಹೋಗುತ್ತಿವೆ.. ಎಲ್ಲಾ ತೆರನ ಪಾಶ್ಚಾತ್ಯ ದಬ್ಬಾಳಿಕೆಕೋರರನ್ನು ಎದುರಿಸಿದ ಹೆಮ್ಮೆಯ ಇತಿಹಾಸ ಇರುವ ಭಾರತದಲ್ಲಿ ಇಂಥ ನಡವಳಿಕೆಯನ್ನು ಸಹಿಸಲಾಗುವುದಿಲ್ಲ. ಗೋಡೆಯ ಮೇಲಿನ ಬರವಣಿಗೆ ಸ್ಪಷ್ಟವಾಗಿದೆ
ಅನು: ಟಿ ಸುರೇಂದ್ರ ರಾವ್

ಅಂತರರಾಷ್ಟ್ರೀಯ ಮಟ್ಟದಲ್ಲಿನ ಸಾಲು ಸಾಲು ಘಟನೆಗಳು ‘ಭಾರತ ಮೊದಲು’ ಎಂಬ ಮೋದಿ ಪುರಾಣವನ್ನು ಕೊಚ್ಚಿಕೊಂಡು ಹೋಗಿದ್ದರೆ ಅತ್ತ ಆಳುವ ಬಿಜೆಪಿ/ಆರೆಸ್ಸೆಸ್ ನವರ ಅತಿರಾಷ್ಟ್ರೀಯವಾದದ ಆಡಂಬರದ ಘೋಷಣೆಗಳು ನುಚ್ಚುನೂರಾಗಿ ಹೋಗಿವೆ. ಮೋದಿ ಸರ್ಕಾರ ಅಮೆರಿಕಾದ ಒತ್ತಡಕ್ಕೆ ಮಣಿದು ಭಾರತೀಯರಿಗೆ ಹಾನಿಕರವಾಗುವ ಎಲ್ಲಾ ರೀತಿಯ ನೀತಿಗಳನ್ನು ತಲೆಬಾಗಿ ಒಪ್ಪಿಕೊಳ್ಳುತ್ತಿದೆ ಎನ್ನುವುದು ಈಗ ಸ್ಪಷ್ಟವಾಗಿದೆ. ಪ್ರಾಯಶಃ ಅತ್ಯಂತ ನಾಚಿಕೆಗೇಡಿನ ಸಂಗತಿಯೇನೆಂದರೆ “30 ದಿನಗಳ ವರೆಗೆ ಭಾರತವು ರಷ್ಯಾದಿಂದ ತೈಲ ಖರೀದಿಸಲು ‘ಅನುಮತಿ’ ನೀಡಲಾಗಿದೆ” ಎಂಬ ಅಮೆರಿಕದ ಟ್ರಂಪ್ ಸರ್ಕಾರದ ಅಧಿಕಾರಿಗಳು ತೀರ ಇತ್ತೀಚೆಗೆ ನೀಡಿದ ಹೇಳಿಕೆ!

ಟ್ರಂಪ್ ಆಡಳಿತವು ಯಾವುದೇ ಅನುಮಾನಕ್ಕೆ ಎಡೆಯಿಲ್ಲದೆ ಸ್ಪಷ್ಟವಾಗಿ ಹೇಳಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಮಾರ್ಚ್ 6 ರಂದು ಟಿವಿ ಸಂದರ್ಶನದಲ್ಲಿ “ಈಗಾಗಲೇ ಹಡಗಿನಲ್ಲಿರುವ ತೈಲವನ್ನು ರಷ್ಯಾದಿಂದ ಕೊಳ್ಳಲು ಭಾರತದ ನಮ್ಮ ಮಿತ್ರರಿಗೆ ಅವಕಾಶ ನೀಡಲು ನಿನ್ನೆ ನಮ್ಮ ಖಜಾನೆ ಒಪ್ಪಿಕೊಂಡಿದೆ.” ಎಂದರು. “ಭಾರತದವರು ಅತ್ಯುತ್ತಮ ನಟರಾಗಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿ ಎಂದು ಅವರಿಗೆ ಹೇಳಿದ್ದೆವು, ಅವರು ಹಾಗೆಯೇ ನಡೆದುಕೊಂಡಿದ್ದಾರೆ. ಬದಲಿಗೆ ಅವರು ಅಮೆರಿಕದ ತೈಲವನ್ನು ಕೊಳ್ಳಲು ಸಿದ್ದರಾಗಿದ್ದರು. ಆದರೆ ಅವರಿಗೆ ಅನುಕೂಲವಾಗಲೆಂದು ವಿಶ್ವಾದ್ಯಂತದ ತೈಲದ ತಾತ್ಕಾಲಿಕ  ಅಂತರದಲ್ಲಿ ರಷ್ಯಧ ತೈಲವನನ್ನು ಸ್ವೀಕರಿಸಲು ಅವರಿಗೆ ಅನುಮತಿ ನೀಡಿದ್ದೇವೆ” ಎಂದು ಮುಂದುವರಿದು ಸ್ಪಷ್ಟಪಡಿಸಿದರು.

ಇನ್ನೂ ಸವಿಸ್ತಾರವಾಗಿ ಹೇಳಿದ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ “ತೈಲ ಬೆಲೆಗಳನ್ನು ಕಡಿಮೆ ಇರಿಸಲು ಸಹಾಯವಾಗುವಂತೆ ಅಲ್ಪಾವಧಿ ಕ್ರಮಗಳನ್ನು ಜಾರಿ ಮಾಡಿದ್ದೇವೆ. ಈಗಾಗಲೇ ಹಡಗಿನಲ್ಲಿರುವ ತೈಲವನ್ನು ತೆಗೆದುಕೊಳ್ಳಲು, ಸಂಸ್ಕರಿಸಲು, ಮತ್ತು ಬಹಳ ಬೇಗ ಮಾರುಕಟ್ಟೆಗೆ ಆ ಬ್ಯಾರೆಲ್ಲುಗಳನ್ನು ಸಾಗಿಸಲು ಭಾರತದಲ್ಲಿರುವ ನಮ್ಮ ಮಿತ್ರರಿಗೆ ಅನುವು ಮಾಡಿಕೊಟ್ಟಿದ್ದೇವೆ. ಪೂರೈಕೆ ಸುಸೂತ್ರವಾಗಿರಲು ಮತ್ತು ಒತ್ತಡ ಕಡಿಮೆ ಇರಿಸಲು ಇದು ಪ್ರಾಯೋಗಿಕ ದಾರಿ.” ಎಂದು ತಮ್ಮ ‘ಎಕ್ಸ್’ ವೇದಿಕೆಯಲ್ಲಿ ತಿಳಿಸಿದ್ದಾರೆ.

ದೊಡ್ಡಣ್ಣ ಅಮೆರಿಕವು  ತೋರಿದ ಈ ‘ರಿಯಾಯಿತಿ’ಯು ಭಾರತಕ್ಕೆ ಸಹಾಯ ಮಾಡಲಿಕ್ಕಲ್ಲ. ಭಾರತೀಯ ತೈಲ ಸಂಸ್ಕರಣ ಕಂಪನಿಯು (ರಿಲಯನ್ಸ್ ಉದ್ದಿಮೆ) ಕಚ್ಛಾ ತೈಲವನ್ನು ಸಂಸ್ಕರಿಸಿ ಜಾಗತಿಕ ಮಾರುಕಟ್ಟೆಗೆ ರವಾನೆ ಮಾಡುವ ಸಲುವಾಗಿಯಷ್ಟೆ – ಏಕೆಂದರೆ ಇರಾನಿನ ಮೇಲಿನ ದಾಳಿಯಿಂದಾಗಿ ತೈಲ ಬೆಲೆ ಬಹಳ ಹೆಚ್ಚು ಏರದಿರಲಿ ಎನ್ನುವ ಉದ್ದೇಶ ಅದರದ್ದು. ಪ್ರಾಸಂಗಿಕವಾಗಿ, ಭಾರತದತ್ತ ತಿರುಗಿದ ಆ ಕಚ್ಛಾ ತೈಲದ ಹಡಗು ಚೈನಾದತ್ತ ಹೋಗುತ್ತಿತ್ತು. ಅಂದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ!

ರಷ್ಯಾವು ತನ್ನ ತೈಲ ಮಾರಾಟದಿಂದ ಬರುತ್ತಿರುವ ಲಾಭವನ್ನು ಯುಕ್ರೇನಿನ ಮೇಲಿನ ಯುದ್ಧಕ್ಕೆ ಬಳಸುತ್ತಿದೆ ಎಂಬ ಕಾರಣ ನೀಡಿ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಬಾರದೆಂದು ಯುಎಸ್  ಭಾರತದ ಮೇಲೆ ಒತ್ತಡ ಹೇರಿತ್ತು ಎನ್ನುವುದನ್ನು ನಾವು ಮರೆಯಬಾರದು. ಅದಕ್ಕಾಗಿಯೇ ತನ್ನ ಬಲವಂತದ ಭಾಗವಾಗಿ, ಅಮೆರಿಕವು ಭಾರತದ ಆಮದಿನ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸಿತ್ತು, ಅದರ ಅರ್ಧ ಬಾಗವು ‘ರಷ್ಯಾದ ತೈಲಕ್ಕೆ ದಂಡ’ ಎಂದು ಸಾರಿತ್ತು. ಆಗ ಭಾರತದ ಸರ್ಕಾರದಿಂದ ಅಲ್ಪಸ್ವಲ್ಪ ಮಿಸುಕಾಟ  ಕಂಡುಬಂತು ಅಷ್ಟೆ, ಮತ್ತೇನಿಲ್ಲ. ನಂತರದ ಕೆಲವು ತಿಂಗಳಲ್ಲಿ ರಷ್ಯಾದಿಂದ ತರಿಸುವ ತೈಲದ ಪ್ರಮಾಣ ಕಡಿಮೆಯಾಗುತ್ತಾ ಬಂತು. ಅಮೆರಿಕದಿಂದ ತರಿಸುವ ತೈಲ ಹೆಚ್ಚಾಗುತ್ತಾ ಬಂತು. ಈ ವರ್ಷದ ಫೆಬ್ರವರಿಯಲ್ಲಿ, ಭಾರತ ಅಮೆರಿಕ ನಡುವೆ ಒಂದು ವ್ಯಾಪಾರ ಒಪ್ಪಂದ ಉಂಟಾಯಿತು. ಆ ಒಪ್ಪಂದದ ಪ್ರಕಾರ ಶೇಕಡಾ 18 ರಷ್ಟು ಸುಂಕದೊಂದಿಗೆ ಮೋದಿ ಸರ್ಕಾರ ಅಮೆರಿಕದಿಂದ 500 ಬಿಲಿಯನ್ ಡಾಲರಿನಷ್ಟು ಸರಕನ್ನು (ತೈಲ ಮತ್ತು ಅನಿಲವನ್ನೂ ಒಳಗೊಂಡಂತೆ) ಖರೀದಿಸುವುದಾಗಿ ಒಪ್ಪಿಕೊಂಡಿತು. ಇದು ಶರಣಾಗತಿಯಲ್ಲದೇ ಮತ್ತೇನು?

ದೊಡ್ಡಣ್ಣ ಅಮೆರಿಕವು  ತೋರಿದ ‘ರಿಯಾಯಿತಿ’ಯು ಭಾರತಕ್ಕೆ ಸಹಾಯ ಮಾಡಲಿಕ್ಕಲ್ಲ. ಭಾರತೀಯ ತೈಲ ಸಂಸ್ಕರಣ ಕಂಪನಿಯು (ರಿಲಯನ್ಸ್ ಉದ್ದಿಮೆ) ಕಚ್ಛಾ ತೈಲವನ್ನು ಸಂಸ್ಕರಿಸಿ ಜಾಗತಿಕ ಮಾರುಕಟ್ಟೆಗೆ ರವಾನೆ ಮಾಡುವ ಸಲುವಾಗಿಯಷ್ಟೆ – ಏಕೆಂದರೆ ಇರಾನಿನ ಮೇಲಿನ ದಾಳಿಯಿಂದಾಗಿ ತೈಲ ಬೆಲೆ ಬಹಳ ಹೆಚ್ಚು ಏರದಿರಲಿ ಎನ್ನುವ ಉದ್ದೇಶ ಅದರದ್ದು. ಪ್ರಾಸಂಗಿಕವಾಗಿ, ಭಾರತದತ್ತ ತಿರುಗಿದ ಆ ಕಚ್ಛಾ ತೈಲದ ಹಡಗು ಚೈನಾದತ್ತ ಹೋಗುತ್ತಿತ್ತು. ಅಂದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ!

ವಿನೀತ ಶರಣಾಗತಿ

ಮೋದಿ ಸರ್ಕಾರವು ಇತ್ತೀಚಿನ ವಾರಗಳಲ್ಲಿ ಅಮೆರಿಕವನ್ನು  ಓಲೈಸಲು ಮುಂದಾದ ಹಲವಾರು ನಿದರ್ಶನಗಳಿವೆ. ಮೋದಿ ಇಸ್ರೇಲಿಗೆ ಭೇಟಿ ನೀಡಿದರು ಮತ್ತು ಅಲ್ಲಿಯ ಜಿಯೊನಿಸ್ಟರ ಉದ್ದೇಶಸಾಧನೆಗೆ ಸಂಪೂರ್ಣ ಬೆಂಬಲದ ಪ್ರತಿಜ್ಞೆಗೈದರು. ಇದಕ್ಕಾಗಿ ಅವರನ್ನು ಗಾಜಾದಲ್ಲಿ ಮಕ್ಕಳು ಮಹಿಳೆಯರನ್ನೂ ಒಳಗೊಂಡಂತೆ ಸಾವಿರಾರು ಜನರ ಮಾರಣಹೋಮಕ್ಕೆ ಕಾರಣನಾದ ಹಾಗೂ ನಂತರದಲ್ಲಿ ಇರಾನ್ ಹಾಗೂ ಲೆಬನಾನ್ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಲ್ಲಿಯ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹುರನ್ನು ಹಾಡಿಹೊಗಳಿದರು. ಪ್ಯಾಲೆಸ್ತೀನ್ ವಿಮೋಚನಾ ಹೋರಾಟಕ್ಕೆ ಬೆಂಬಲ ನೀಡುವ ಹಾಗೂ ಇಸ್ರೇಲಿ ಯುದ್ಧದಾಹ ಮತ್ತು ಜನಾಂಗವಾದದ ವಿರುದ್ಧ ಸ್ಪಷ್ಟ ನಿಲುವು ಹೊಂದಿದ್ದ ಭಾರತದ ಐತಿಹಾಸಿಕ ದಾಖಲೆಯನ್ನು ಮೋದಿ ನುಚ್ಚುನೂರು ಮಾಡಿದ್ದಾರೆ.

ಇರಾನ್ ಹಾಗೂ ಲೆಬನಾನ್ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಲ್ಲಿಯ ಬೆಂಜಮಿನ್ ನೇತನ್ಯಾಹುರನ್ನು ಹಾಡಿಹೊಗಳಿದರು; ಇರಾನಿನ ಧಾರ್ಮಿಕ ಮುಖಂಡ ಮತ್ತು ಪ್ರಭುತ್ವದ ಮುಖ್ಯಸ್ಥ ಅಯತೊಲ್ಲಾ ಅಲಿ ಖಮೇನಿಯೆ ಒಬ್ಬ ಭಯೋತ್ಪಾದಕರ ನಾಯಕ, ಆತನ ಸಾವು ಸ್ವಾಗತಾರ್ಹ ಎಂಬ ಅಮೆರಿಕದ ನಿಲುವಿಗೆ ಪರೋಕ್ಷ ಅನುಮೋದನೆಯೆಂಬಂತೆ ಅಮೆರಿಕ- ಇಸ್ರೇಲಿ ವಾಯು ದಾಳಿಯಲ್ಲಿ ಆತನ ಹತ್ಯೆಯ ಬಗ್ಗೆ ಮೌನ ವಹಿಸಿದರು; ನಮ್ಮ ನೌಕಾದಳದ ಆಹ್ವಾನದ ಮೇಲೆ ವಿಶಾಖಪಟ್ಟಣದಲ್ಲಿ ನಡೆದ ಕವಾಯತಿನಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಇರಾನಿನ ಹಡಗು IRIS ದೇನಾ ವನ್ನು ಅಮೆರಿಕದ ನಮ್ಮ  ಕರಾವಳಿಯ ಬಳಿಯೇ ಹೊಡೆದು ಮುಳುಗಿಸಿ  87 ಸಿಬ್ಬಂದಿಯ ಸಾವಿಗೆ ಕಾರಣವಾದ ಕಾನೂನುಬಾಹಿರ  ಕೃತ್ಯವನ್ನೂ ಖಂಡಿಸಲಿಲ್ಲ.

ಇದನ್ನೂ ಓದಿ : ಯುದ್ಧದ ಪರಿಣಾಮ: ಭಾರತದಲ್ಲಿ ಅಡುಗೆ ಅನಿಲ ಕೊರತೆ, ಹೋಟೆಲ್‌ಗಳಿಗೆ ಸಂಕಷ್ಟ

ಅಮೆರಿಕ- ಇಸ್ರೇಲಿ ವಾಯು ದಾಳಿಯಲ್ಲಿ ಮೂಲಕ ಇರಾನಿನ ಧಾರ್ಮಿಕ ಮುಖಂಡ ಮತ್ತು ಪ್ರಭುತ್ವದ ಮುಖ್ಯಸ್ಥ ಅಯತೊಲ್ಲಾ ಅಲಿ ಖಮೇನಿಯೆರವರ ಹತ್ಯೆಯಾದ ಬಗ್ಗೆ ಮೌನ ವಹಿಸಿದ ನಾಚಿಕೆಗೇಡೀ ದೃಶ್ಯವನ್ನು ಕಂಡಿದ್ದೇವೆ. ಇದು ಅಯತೊಲ್ಲಾ ಒಬ್ಬ ಭಯೋತ್ಪಾದಕರ ನಾಯಕ, ಆತನ ಸಾವು ಸ್ವಾಗತಾರ್ಹ ಎಂಬ ಅಮೆರಿಕದ ನಿಲುವಿಗೆ ಪರೋಕ್ಷ ಅನುಮೋದನೆಯಾಗಿ ತೋರುತ್ತದೆ. ಹಲವು ದಿನಗಳು ಕಳೆದ ನಂತರವಷ್ಟೆ ಅದೂ ದೇಶದಲ್ಲಿ ಆ ಕುರಿತು ವ್ಯಾಪಕ ಟೀಕೆಗಳು ಬಂದನಂತರ ಮೋದಿ ಸರ್ಕಾರ ಒಂದು ಸಾಂಕೇತಿಕ ಕ್ರಮವಾಗಿ ನವದೆಹಲಿಯಲ್ಲಿರುವ ಇರಾನಿನ ರಾಯಭಾರಿ ಕಛೇರಿಗೆ ವಿದೇಶಾಂಗ ಕಾರ್ಯದರ್ಶಿಯನ್ನು ಕಳಿಸಿ ಔಪಚಾರಿಕ ಸಂತಾಪ ಪುಸ್ತಕದಲ್ಲಿ ಸಹಿಮಾಡಿ ಬರುವಂತೆ ಮಾಡಲಾಯಿತು. ಮಾರ್ಚ್ 4 ನೇ ತಾರೀಖಿನಂದು ಇರಾನಿನ ಹಡಗು IRIS ದೇನಾ ವನ್ನು ಅಮೆರಿಕದ ಜಲಾಂತರ್ಗಾಮಿಯೊಂದು ಶ್ರೀಲಂಕಾದ ಕರಾವಳಿಯ ಬಳಿ ಹೊಡೆದು ಮುಳುಗಿಸಿದ್ದರಿಂದ ಅದರಲ್ಲಿದ್ದ 87 ಜನ ಸಿಬ್ಬಂದಿಯ ಸಾವಿಗೆ ಕಾರಣವಾಯಿತು. ವಾಸ್ತವದಲ್ಲಿ ಆ ಹಡಗು ನಮ್ಮ ದೇಶದ ನೌಕಾದಳದ ಆಹ್ವಾನದ ಮೇಲೆ ವಿಶಾಖಪಟ್ಟಣದಲ್ಲಿ ನಡೆದ ಭಾರತೀಯ ನೌಕಾ ದಳದ ಕವಾಯತಿನಲ್ಲಿ ಪಾಲ್ಗೊಂಡು ಹಿಂದಿರುಗುತ್ತಿತ್ತು. ಅಂತಹ ಕಾನೂನುಬಾಹಿರ  ಕೃತ್ಯವನ್ನೂ ಖಂಡಿಸದೆ ದಿವ್ಯಮೌನ ವಹಿಸಿದೆ ಮೋದಿ ಸರ್ಕಾರ.

ದಾಸ್ಯದ ಬೇರುಗಳು

ಮೋದಿ ಸರ್ಕಾರದ ಈ ಕೃತ್ಯಗಳು ಸಾಮ್ರಾಜ್ಯವಾದಕ್ಕೆ ಹೇಡಿತನದ ಶರಣಾಗತಿ ಬಿಜೆಪಿ/ಆರೆಸ್ಸೆಸ್ಸಿನಲ್ಲಿ ಆಳವಾದ ಬೇರುಗಳನ್ನು ಬಿಟ್ಟಿದೆ ಎಂಬುದನ್ನು ಬಯಲುಮಾಡಿದೆ. ಅಷ್ಟೇ ಅಲ್ಲ,ಅವರ ‘ರಾಷ್ಟ್ರವಾದ’ದ ಮತ್ತು ‘ವಸುದೈವ ಕುಟುಂಬಕಂ’ ಮುಂತಾದ ಸೂತ್ರಗಳ ಅಥವಾ ‘ವಿಶ್ವಗುರು’ ಎಂಬ ಮಹತ್ವಾಕಾಂಕ್ಷೆಯ ಟೊಳ್ಳುತನವನ್ನು ಪ್ರಕಟಗೊಳಿಸಿದೆ. ಇಲ್ಲಿ ಆರೆಸ್ಸೆಸ್ ಬಹಳವಾಗಿ ಗೌರವಿಸುವ ವಿ.ಡಿ.ಸಾವರ್ಕರ್ ಅಂಡಮಾನ್ ಸೆಲ್ಯುಲರ್ ಜೈಲಿನಿಂದ ಬಿಡುಗಡೆಗಾಗಿ 1911 ಹಾಗೂ 1920 ರಲ್ಲಿ ಬ್ರಿಟಿಷರಲ್ಲಿ ಗೋಗರೆದು ಕ್ಷಮೆ ಕೇಳಿದ ಸಂಗತಿಯನ್ನು ನಾವು ನೆನಪು ಮಾಡಿಕೊಳ್ಳಬಹುದು. ಇಡೀ ದೇಶ ಬ್ರಿಟಿಷ್ ವಸಾಹತುಶಾಹಿಗಳನ್ನು ಭಾರತದಿಂದ ಒದ್ದೋಡಿಸುವ ಯತ್ನದಲ್ಲಿ ಮಗ್ನರಾಗಿದ್ದಾಗ, ಸಾವರ್ಕರ್ ಬ್ರಿಟಿಷ್ ರಾಣಿಗೆ ತನ್ನ ಸೇವೆಯನ್ನು ಮುಡಿಪಾಗಿಡಲು ಸಿದ್ಧನಾಗಿದ್ದರು. 1925 ರಲ್ಲಿ ಹುಟ್ಟಿಕೊಂಡ ಆರೆಸ್ಸೆಸ್ ಕೂಡ ಸ್ವಾತಂತ್ರ್ಯ ಸಂಗ್ರಾಮದಿಂದ ದೂರ ಉಳಿದಿತ್ತು ಮತ್ತು ಹಿಂದೂ ಸಮುದಾಯದವರನ್ನು “ಒಗ್ಗೂಡಿಸಲು” ಮತ್ತು ಅವರಲ್ಲಿ ‘ಮರುಜಾಗೃತಿ’  ಮೂಡಿಸಲು ಪ್ರಯತ್ನಿಸುತಿತ್ತು. ಸಾಮಾಜಿಕ ಸೇವೆಯ ಹೆಸರಿನಲ್ಲಿ ತನ್ನ ಕಬಂಧಬಾಹುಗಳನ್ನು ಪಸರಿಸುತ್ತಲೇ ಕೋಮುಸಂಘರ್ಷಗಳಲ್ಲಿ ತನ್ನನ್ನು ತೊಡಗಿಸಿಕೊಂಡಿತು. 1948 ರಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆಯಲ್ಲಿ ದೋಷಾರೋಪಣೆ ಹೊತ್ತಿತ್ತು ಮತ್ತು ಅಂದಿನ ಭಾರತದ ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲ್ ಅದನ್ನು ನಿಷೇಧಿಸಿದ್ದರು ಕೂಡ.

ಆಸಕ್ತಿದಾಯಕ ಸಂಗತಿಯೆಂದರೆ, ಆರೆಸ್ಸೆಸ್ ನ ಎರಡನೇ ಸರಸಂಘಚಾಲಕ ಮತ್ತು ಅದರ ಮುಖ್ಯ ಸಿದ್ಧಾಂತಿಯಾಗಿದ್ದ ಎಂ.ಎಸ್. ಗೋಲ್ವಾರ್ಕರ್, ಜರ್ಮನಿಯ ನಾಜಿ ಪಕ್ಷವು ಯೆಹೂದಿಗಳ ವಿರುದ್ಧ ನಡೆಸಿದ ಕ್ರೂರ ಹತ್ಯಾಕಾಂಡಗಳನ್ನು ಬಹಿರಂಗವಾಗಿಯೇ ಅವು“ಅತ್ಯಂತ ಉನ್ನತ ಮಟ್ಟದ ಜನಾಂಗದ ಹೆಮ್ಮೆ” ಎಂದು ಅವರು ಬರೆದು 1939 ರಲ್ಲಿ ಪ್ರಕಟಿಸಿದ ‘ನಾವು, ಅಥವಾ ನಮ್ಮ ರಾಷ್ಟ್ರೀಯತೆಯ ನಿರೂಪಣೆ’ (We, Or Our Nationhood Defined )ಎಂಬ ಪುಸ್ತಕದಲ್ಲಿ ಹಾಡಿಹೊಗಳಿದ್ದರು. ಅಷ್ಟೂ ಸಾಲದೆಂಬಂತೆ, ಮುಂದುವರಿದು “ಆಳದಲ್ಲಿ ವಿಭಿನ್ನವಾಗಿರುವ ಜನಾಂಗಗಳು ಹಾಗೂ ಸಂಸ್ಕೃತಿಗಳು ಒಗ್ಗಟ್ಟಿನಿಂದ ಇರಲು ಬಹುಮಟ್ಟಿಗೆ ಅಸಾಧ್ಯ ಎನ್ನುವುದನ್ನು ಜರ್ಮನಿ ತೋರಿಸಿಕೊಟ್ಟಿದೆ, ಹಿಂದೂಸ್ತಾನದಲ್ಲಿ ಇರುವ ನಮಗೆ ಅದು ಪಾಠವಾಗಬೇಕು ಮತ್ತು ಅದರಿಂದ ಲಾಭ ಪಡೆಯಬೇಕು” ಎಂದಿದ್ದರು. ಆರೆಸ್ಸೆಸ್ ನ ವಿಷಪೂರಿತ ಸಿದ್ಧಾಂತದ ಜನಾಂಗದ್ವೇ಼ಷಿ ಬೇರುಗಳನ್ನು ನಾವು ಇಲ್ಲಿ ಕಾಣಬಹುದು. ಮುಸ್ಲಿಮರ ವಿರುದ್ಧದ ಅವರ ಹಗೆತನ ಯೆಹೂದಿಗಳ ವಿರುದ್ಧ ನಾಜಿಗಳಿಗೆ ಇದ್ದಂತೆ ಎನ್ನಬಹುದು.

ವಿದೇಶಿ ವಿಚಾರಗಳಿಗೆ ಅವರು ಎಷ್ಟು ಗುಲಾಮರಾಗಿದ್ದರೆಂದರೆ, ಇಟಲಿಯ ಫ್ಯಾಸಿಸ್ಟರ ಸಮವಸ್ತ್ರವನ್ನೂ – ಖಾಕಿ ಚಡ್ಡಿ, ಬಿಳಿ ಅಂಗಿ ಹಾಗೂ ಕರಿ ಟೋಪಿಯನ್ನೂ – ಆರೆಸ್ಸೆಸ್ ಮೂಂಜೆಯವರು ಇಟಲಿಗೆ ಹೋಗಿ ಬೆನಿಟೋ ಮುಸೊಲಿನಿಯವರನ್ನು ಭೇಟಿ ಮಾಡಿ ಬಂದ ನಂತರ ಎರವಲು ಪಡೆದುಕೊಂಡಿತು.  .

ಮೋದಿ ಸರ್ಕಾರದ ಈ ಕೃತ್ಯಗಳು ಸಾಮ್ರಾಜ್ಯವಾದಕ್ಕೆ ಹೇಡಿತನದ ಶರಣಾಗತಿ ಬಿಜೆಪಿ/ಆರೆಸ್ಸೆಸ್ಸಿನಲ್ಲಿ ಆಳವಾದ ಬೇರುಗಳನ್ನು ಬಿಟ್ಟಿದೆ ಎಂಬುದನ್ನು ಬಯಲುಮಾಡಿದೆ. ಅಷ್ಟೇ ಅಲ್ಲ,ಅವರ ‘ರಾಷ್ಟ್ರವಾದ’ದ ಮತ್ತು ‘ವಸುದೈವ ಕುಟುಂಬಕಂ’ ಮುಂತಾದ ಸೂತ್ರಗಳ ಅಥವಾ ‘ವಿಶ್ವಗುರು’ ಎಂಬ ಮಹತ್ವಾಕಾಂಕ್ಷೆಯ ಟೊಳ್ಳುತನವನ್ನು ಪ್ರಕಟಗೊಳಿಸಿದೆ.

ದೊಡ್ಡ ಬಂಡವಾಳದೊಂದಿಗಿನ ನಂಟು

ಭಾರತದಿಂದ ಹೊರಗೆ ವಿವಿಧೆಡೆಗಳಲ್ಲಿರುವರ ಭಾರತೀಯ ಮೂಲದ ಜನಗಳ ನಡುವೆ ತನ್ನ ಹಲವಾರು ಅಂಗಸಂಘಟನೆಗಳ ಮೂಲಕ ಆರೆಸ್ಸೆಸ್ ಅಮೆರಿಕದ ಬಲಪಂಥೀಯರೊಂದಿಗೆ ಆಳವಾದ ಸಂಪರ್ಕ ಹೊಂದಿದೆ. ಅದರ 107 ಅಂಗ ಸಂಘಟನೆಗಳು ಅಮೆರಿಕದಲ್ಲಿ ಕೆಲಸ ಮಾಡುತ್ತಿವೆ ಮತ್ತು ಯುನೈಟೆಡ್ ಕಿಂಗ್ ಡಂನಲ್ಲಿ ಇತರ 27 ಕೆಲಸ ಮಾಡುತ್ತಿವೆ. ಅದರಲ್ಲಿ ಹಲವು ನೆರವು ನಿಧೀ ಸಂಗ್ರಹಿಸುವ ದತ್ತಿ ಸಂಸ್ಥೆಗಳು ಆಗಿದ್ದು ಹಣ ಸಂಗ್ರಹ ಮಾಡುತ್ತವೆ ಮತ್ತು ಭಾರತದಲ್ಲಿರುವ ಆರೆಸ್ಸೆಸ್ ನ ಅಂಗಸಂಘಟನೆಗಳಿಗೆ ತಲುಪಿಸುತ್ತವೆ.

ಸಾಮ್ರಾಜ್ಯವಾದದೊಂದಿಗಿನ ಹಿತಾಸಕ್ತಿಗಳಿಗೆ ಬಿಜೆಪಿ/ಆರೆಸ್ಸೆಸ್ ನ ಬದ್ಧತೆಯು ಭಾರತದಲ್ಲಿನ ದೊಡ್ಡ ಬಂಡವಾಳಶಾಹಿಗಳ ಏಜೆಂಟಾಗಿ ಕಾರ್ಯಾಚರಣೆ ನಡೆಸುವ ಅದರ ಆಕ್ರಮಣಕಾರಿ ನೀತಿಯೊಂದಿಗೆ ತಾಳೆ ಹೊಂದುತ್ತದೆ. ಜನಕಲ್ಯಾಣ ಕ್ರಮಗಳಲ್ಲಿ ಸರ್ಕಾರದ ಮಧ್ಯಪ್ರವೇಶವನ್ನು ಆದಷ್ಟೂ ಕಡಿಮೆ ಮಾಡುವುದು, ಸಾರ್ವಜನಿಕ ಆಸ್ತಿಗಳ ಖಾಸಗೀಕರಣವನ್ನು ಹೆಚ್ಚಿಸುವುದು, ಕಾರ್ಪೊರೇಟುಗಳಿಗೆ ತೆರಿಗೆ ಕಡಿಮೆ ಮಾಡಿಸುವುದು, ಕಾರ್ಮಿಕರನ್ನು ಬೇಕಾಬಿಟ್ಟಿಯಾಗಿ ಕೆಲಸದಿಂದ ವಜಾ ಮಾಡುವಲ್ಲಿ ಮುಕ್ತ ಅವಕಾಶ ಒದಗಿಸುವುದು ಹಾಗೂ ಅವರನ್ನು ಹೆಚ್ಚೂಕಮ್ಮಿ ಗುಲಾಮರಂತೆ ನಡೆಸಿಕೊಳ್ಳುವುದು, ಭಾರತದ ಅಪಾರ ಕೃಷಿ ವಲಯವನ್ನು ಸ್ವಾಧೀನಪಡಿಸಿಕೊಳ್ಳುವುದು ಮುಂತಾದವುಗಳಲ್ಲಿ  ಈ ವರ್ಗದ ಹಿತಾಸಕ್ತಿಗಳು ಅಡಗಿವೆ. ಸ್ವದೇಶಿ ಹಾಗೂ ವಿದೇಶಿ ದೊಡ್ಡ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಬೆಳೆಸುವುದೇ ಬಿಜೆಪಿ ಸರ್ಕಾರದ ನೀತಿಗಳ ಪ್ರಥಮ ಆದ್ಯತೆಯಾಗಿದೆ.

ಸ್ವದೇಶಿ ಹಾಗೂ ವಿದೇಶಿ ಬಂಡವಾಳದೊಂದಿಗಿನ ಬಿಜೆಪಿ/ಆರೆಸ್ಸೆಸ್ ನ ಈ  ಸಂಪೂರ್ಣ ಸಾಮರಸ್ಯ ಮತ್ತು ಹೊಂದಾಣಿಕೆ – ಪರಸ್ಪರ ವೈರುಧ್ಯಗಳು ಎದ್ದುಬರುವ ಹಾಗೂ ಸಂಧಾನದ ಅಗತ್ಯವಿರುವ ಕೆಲವು ಪ್ರಕರಣಗಳನ್ನು ಹೊರತುಪಡಿಸಿ – ಸಹಜವಾಗಿಯೇ ವಿದೇಶಾಂಗ ನೀತಿಗ ವಿಸ್ತರಿಸಿ ಸಾಮ್ರಾಜ್ಯಶಾಹಿಗಳ ಅಗತ್ಯವನ್ನು ಆರೆಸ್ಸೆಸ್ಸಿನ ಸ್ವಂತ ಸೈದ್ಧಾಂತಿಕ ಅಡಿಯಾಳುತನದ ಮೂಲಕ ಸುಗಮಗೊಳಿಸಲಾಗುತ್ತಿದೆ.

ಗೋಡೆಯ ಮೇಲಿನ ಬರಹ ಸ್ಪಷ್ಟ

ಬಿಜೆಪಿ/ಆರೆಸ್ಸೆಸ್ ಹಿಂದೂ ಮತಾಂಧತೆಯ ಸಿದ್ಧಾಂತವನ್ನು ದೇಶದಲ್ಲಿನ ಒಂದು ವಿಭಾಗದ ಜನರನ್ನು ತನ್ನ ಬೆಂಬಲಕ್ಕಾಗಿ ಸಂಘಟಿಸುವ ಸಲುವಾಗಿ ಬಳಸಿದೆ. ಹಾಗಾಗಿ ಅದು ಕಳೆದ 12 ವರ್ಷದಿಂದ ಅಧಿಕಾರದಲ್ಲಿದೆ. ಆದರೆ, ಅಜೇಯವೆಂದು ತೋರುತ್ತಿದ್ದ ಅದರ ಹಿಡಿತ ಹಾಗೂ ಪ್ರಭಾವ ಕುಸಿಯುತ್ತಿದೆ, ಏಕೆಂದರೆ ಅದರ ಆರ್ಥಿಕ ನೀತಿಗಳು ಜನಸಮುದಾಯದಲ್ಲಿ ತೀವ್ರವಾದ ಕಷ್ಟ ಹಾಗೂ ಅತೃಪ್ತಿಯನ್ನು ಉಂಟುಮಾಡಿವೆ ಅಷ್ಟೇ ಅಲ್ಲ, ಅದರ ಅತಿರಾಷ್ಟ್ರೀಯವಾದ, ಮಿಲಿಟರಿ ಶಕ್ತಿಪ್ರದರ್ಶನ ಹಾಗೂ ಅಂತರರಾಷ್ಟ್ರೀಯ ಮೆಚ್ಚುಗೆಗಳ ಆವರಣಗಳು ಉದುರಿಹೋಗುತ್ತಿವೆ.

ಫೋಟೋ ತೆಗೆಸಿಕೊಳ್ಳುವ ಸಂದರ್ಭಗಳಲ್ಲಿ ಅತ್ಯುತ್ಸಾಹದಿಂದ ಪ್ರಧಾನ ಮಂತ್ರಿಗಳು ಅಪ್ಪಿಕೊಳ್ಳುವ ಪಾಶ್ಚಾತ್ಯ ಮುಖಂಡರುಗಳೇ, ಬಹಳ ಮುಖ್ಯವಾಗಿ ಯುಎಸ ಮಂದಿಯೇ ಪದೇ ಪದೇ ಮೋದಿ ಮತ್ತು ಅವರ ಸರ್ಕಾರಕ್ಕೆ ಅವಮಾನ ಮಾಡುತ್ತಿರುತ್ತಾರೆ, ಛೀಮಾರಿಹಾಕುತ್ತಿದ್ದಾರೆ. ಆಪರೇಷನ್ ಸಿಂಧೂರ್ ಪ್ರಕರಣದಲ್ಲಿ ಕೂಡ, ಟ್ರಂಪ್ ಪದೇ ಪದೇ ತನ್ನ ಮಧ್ಯಸ್ಥಿಕೆಯಿಂದಾಗಿಯೇ ಭಾರತ ಪಾಕಿಸ್ತಾನದ ನಡುವೆ ಸಂಘರ್ಷ ನಿಂತು ಕದನವಿರಾಮ ಘೋಷಣೆ ಆಗಿದೆ ಎಂದು ಹೇಳೀಕೊಂಡಿದ್ದಾರೆ. ಮೋದಿ ಮತ್ತವರ ಮಂತ್ರಿಗಳನ್ನು ತಮ್ಮ ಯಜಮಾನರನ್ನು ಸಂಪ್ರೀತಗೊಳಿಸುವ ತೊತ್ತುಗಳಂತೆ ಕಾಣಲಾಗುತ್ತಿದೆ. ಎಲ್ಲಾ ತೆರನ ಪಾಶ್ಚಾತ್ಯ ದಬ್ಬಾಳಿಕೆಕೋರರನ್ನು ಎದುರಿಸಿದ ಹೆಮ್ಮೆಯ ಇತಿಹಾಸ ಇರುವ ಭಾರತದಲ್ಲಿ ಇಂಥ ನಡವಳಿಕೆಯನ್ನ ಸಹಿಸಲಾಗುವುದಿಲ್ಲ. ಗೋಡೆಯ ಮೇಲಿನ ಬರವಣಿಗೆ ಸ್ಪಷ್ಟವಾಗಿದೆ !

ಮೂಲ: ಪೀಪಲ್ಸ್ ಡೆಮಾಕ್ರಸಿ ವಾರಪತ್ರಿಕೆ, ಮಾರ್ಚ್ 15

ಇದನ್ನೂ ನೋಡಿ : ಓದು ಕಾರ್ಯಾಗಾರ | ವಿದ್ಯಾರ್ಥಿಗಳ ಕಣ್ಣಲ್ಲಿ ಕುವೆಂಪು Janashakthi Media

Donate Janashakthi Media

Leave a Reply

Your email address will not be published. Required fields are marked *