ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಚಾರದಲ್ಲಿ, ಪಕ್ಷದ ಸ್ಟಾರ್ ಪ್ರಚಾರಕ ಮತ್ತು ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಪ್ರಣಾಳಿಕೆಯ ಹೆಸರನ್ನು ತೆಗೆದುಕೊಂಡು ತಪ್ಪುದಾರಿಗೆಳೆಯುವ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಚುನಾವಣಾ ಭಾಷಣಗಳ ಮಟ್ಟ ಮತ್ತಷ್ಟು ಕುಸಿಯಲಿದೆಯೇ ಎಂದು ದಿ ವೈರ್ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮತ್ತು ಡಿ.ಯು ಪ್ರೊಫೆಸರ್ ಅಪೂರ್ವಾನಂದ್ ಚರ್ಚಿಸಿರುವ ವಿವರ ಇಲ್ಲಿದೆ.
ಸಿದ್ಧಾರ್ಥ್ ವರದರಾಜನ್ : ಪ್ರಧಾನಿ ಮೋದಿ ಎಷ್ಟರಮಟ್ಟಿಗೆ ರಾಜಕೀಯ ಮಟ್ಟದ ಚರ್ಚೆಯನ್ನು ಕೀಳುಮಟ್ಟಕ್ಕೆ ಇಳಿಸಿದ್ದಾರೆ ಎನ್ನುವುದು ಅವರ ಭಾಷಣಗಳಲ್ಲಿ ಪದೇಪದೇ ಮುಸ್ಲಿಂರನ್ನು ಟಾರ್ಗೆಟ್ ಮಾಡಿಟ್ಟುಕೊಂಡು ಮಾತನಾಡುತ್ತಿರುವುದು, ಹೇಳಿಕೆಯನ್ನು ನೀಡುತ್ತಿರುವುದನ್ನು ಸತತವಾಗಿ ಗಮನಿಸಲಾಗುತ್ತದೆ.
ಡಿ.ಯು ಪ್ರೊಫೆಸರ್ ಅಪೂರ್ವಾನಂದ್:ವಿಕ್ರಮಾದಿತ್ಯನ ಸಿಂಹಾಸನದ ಮೇಲೆ ಕೂತಿದ್ದೀರಿ ಎಂದಾದರೆ, ನಿಮ್ಮ ಸ್ವಭಾವ ಬದಲಾಗುತ್ತದೆ ಎಂಬ ನಾಣ್ನುಡಿ ಇದೆ. ಇದು ಬಹುತೇಕರ ಅಭಿಪ್ರಾಯ. ಪಂಚರ ಸ್ಥಾನದಲ್ಲಿ ಕೂತರೂ ಇದಾಗುತ್ತದೆ ಎಂಬ ಮಾತಿದೆ. ಆದರೆ, ನರೇಂದ್ರ ಮೋದಿ ತಮ್ಮ ಖುರ್ಚಿಯ ಸ್ಥಾನವನ್ನೇ ಬದಲಾಯಿಸಿಬಿಟ್ಟಿದ್ದಾರೆ. ಇಂತಹ ಸ್ವಭಾವ ಮೋದಿಯದ್ದಾಗಿದೆ, ಕ್ರೂರ ಮನೋಭಾವ ಆಗುತ್ತಾ ಇದೆ. ಅವರು ಯಾವ ಮಟ್ಟಕ್ಕಾದರೂ ರಾಜಕೀಯಕ್ಕಾಗಿ ಏನಾದರೂ ಸಿಗುತ್ತದೆ? ಜನತೆ ಉತ್ತೇಜನಗೊಳ್ಳುತ್ತಾರೆ? ಎಂಬುದು ಸ್ಪಷ್ಟವಾದರೆ ಮೋದಿ, ಹಾಗೂ ಬಿಜೆಪಿಯ ನಾಯಕರು ಮತ್ತು ಬಿಜೆಪಿಯ ಬೆಂಬಲಿಗರು ಕಾರ್ಯಕರ್ತರು ಹಲ್ಲೆಯನ್ನು ಪ್ರತ್ಯಕ್ಷವಾಗಿಯೂ ಅಲ್ಲದೇ ಪರೋಕ್ಷವಾಗಿ ಮಾಡುತ್ತಿದ್ದಾರೆ ಎಂದರೆ, ಅದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ನಾವು ಮೋದಿಯನ್ನಷ್ಟೇ ಉದ್ದೇಶಿಸಿ ಈ ವಿಚಾರವನ್ನು ಚರ್ಚಿಸಿದರೆ, ಅದು ಅನ್ಯಾಯವಾಗುತ್ತದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬಾನ್ಸ್ ವಾರಾ ಭಾಷಣ – factcheck
ಇದು ಬಿಜೆಪಿಯ ಇತರೆ ನಾಯಕರಿಗೂ ಅನ್ವಯವಾಗುತ್ತದೆ. ಇತ್ತೀಚೆಗೆ ಅನುರಾಗ್ ಠಾಕೂರ್ , ರಾಜನಾಥ್ ಸಿಂಗ್, ಜೆ.ಪಿ.ನಡ್ಡಾ ಹೇಳಿಕೆಗಳನ್ನು ನೀಡಿದ್ದನ್ನು ನಾವು ಗಮನಿಸಲೇಬೇಕು.ಕರ್ನಾಟಕದಲ್ಲಿ ನಡೆದಂತಹ ನೇಹಾ ಹತ್ಯೆ ಪ್ರಕರಣದಲ್ಲಿ ರಾಜಕೀಯಗೊಳಿಸಿ ಜೆ.ಪಿ.ನಡ್ಡಾ ನೀಡಿರುವ ಹೇಳಿಕೆಯನ್ನು ನಾವು ನೋಡಬಹುದು. ಇದೆಲ್ಲವನ್ನು ನೋಡಿದರೆ, ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ವಿರೋಧಿ ದೃಷ್ಟಿಕೋನದ ಅಜೆಂಡಾವನ್ನಿಟ್ಟುಕೊಂಡು ಭಾಷಣಗಳನ್ನು ರಾಜಕಾರಣವನ್ನು ಮಾಡಲಾರಂಭಿಸಿದ್ದಾರೆ.ಇದೆಲ್ಲವನ್ನು ನೋಡಿದರೆ, ಈ ಬಿಜೆಪಿಯವರು ಸಂಘಪರಿವಾರದವರು ಈಗಾಗಲೇ ಮುಸ್ಲಿಂ ವಿರೋಧದ ಅಲೆಯನ್ನು ಈಗಾಗಲೇ ಕದಡಿಬಿಟ್ಟಿದ್ದಾರೆ.
ಸಿದ್ದಾರ್ಥ್: ಜಾರ್ಖಂಡ್ನಲ್ಲಿ ಬಟ್ಟೆಗಳನ್ನು ಉದ್ದೇಶಿಸಿ ಮಾತನಾಡಿದ್ದರ ಮೋದಿಯವರು. ಹಿಂದೂ ಮಕ್ಕಳ ಮಂಗಳಸೂತ್ರವನ್ನು ಕಿತ್ತು ಮುಸ್ಲಿಂರಿಗೆ ನೀಡುತ್ತಾರೆ ಎಂದು ಮೊದಲು ಭಾಷಣದಲ್ಲಿ ಹೇಳಿ ನಂತರ ಅದನ್ನು ಬೇರೆತರಹ ಹೇಳಿದ್ದು, ಇನ್ನೊಂದು ಕಡೆ ಹೆಚ್ಚು ಮಕ್ಕಳನ್ನು ಪಡೆಯುವ ಸಮುದಾಯ ಎಂದಿರುವುದು ಇಲ್ಲಿ ಉಲ್ಲೇಖನೀಯ. ಈ ಹೆಚ್ಚು ಮಕ್ಕಳನ್ನು ಪಡೆಯುತ್ತಾರೆ ಎಂಬ ನೇರಬಾಣ ಯಾವ ಸಮುದಾಯಕ್ಕಾಗಿತ್ತು ಎಂದು ದೇಶದ ಜನತೆ ತಿಳಿದುಕೊಳ್ಳದ ಮಟ್ಟಿಗೆ ದಡ್ಡರೇನಿಲ್ಲ. ನಿಜವಾಗಿ ನೋಡಿದರೆ, ಮೋದಿ ಬರುವ ಪರಿವಾರದಲ್ಲಿ
5 ಅಥವಾ 6 ಸಹೋದರ-ಸಹೋದರಿಯರು ಇದ್ದಾರೆ ಎನ್ನುವುದು ಕಡಿಮೆ ಏನಲ್ಲ. ಅದು ಇಲ್ಲಿ ಗಮನಾರ್ಹವಾಗಿದೆ. ಇದು 60 ವರ್ಷದ ಹಿಂದೆ ಎನ್ನುವುದು ಇದ್ದರೂ ಇಲ್ಲಿ ಗಮನಿಸಲೇಬೇಕು. ಸಂಘಪರಿವಾರದ ಪ್ರೊಪೋಘಂಢಾದಲ್ಲಿ ಮುಸ್ಲಿಂರು ಹೆಚ್ಚಿನ ಮಕ್ಕಳನ್ನು ಹೊಂದುವುದನ್ನು ನಿಲ್ಲಿಸಬೇಕೆಂದಿದೆ. ಇವರ ಕೋಡ್ ವರ್ಡನ್ನು ಜನತೆ ಬಹಳ ನೀಟಾಗಿ ತಿಳಿದುಕೊಂಡು ಬಿಡುತ್ತಾರೆ. ಯೋಗಿ ಆದಿತ್ಯನಾಥರ ಹೇಳಿಕೆ ನೋಡಿದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಷರಿಯತ್ತನ್ನು ಜಾರಿ ಮಾಡುತ್ತಾರೆ ಎಂದಿರುವುದು , ಇಷ್ಟೆಲ್ಲಾ ಇವರೆಲ್ಲಾ ಬಹಳ ಸುಲಭವಾಗಿ ಸುಳ್ಳನ್ನು ಹೇಳಿ ಅದನ್ನು ತೇಲಿಬಿಡುತ್ತದೆ. ಇಂತಹ ಅದೆಷ್ಟು ಆರ್ಡಿನರಿ ಕ್ರಿಮಿನಲ್ ಲಾ ಹೇಳಿಕೆಗಳನ್ನು ತಿಳಿಯಹುದು.
ಹಿಂದೂರಾಷ್ಟ್ರದ ಹೆಸರಿನಲ್ಲಿ ದ್ವೇಷ ಹುಟ್ಟಿಹಾಕುವುದು ಎಷ್ಟರಮಟ್ಟಿಗೆ ಸರಿ. ಚುನಾವಣಾ ಆಯೋಗದ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರು ಆಯೋಗದಿಂದ ಯಾವುದೇ ಕ್ರಮ ಇಲ್ಲ.
ಮಂಗಳಸೂತ್ರವನ್ನು ಧರಿಸದೇ ಇರುವ ಅದೆಷ್ಟೋ ಸಮುದಾಯದ ಮಹಿಳೆಯರಿದ್ದಾರೆ.ಆದಿವಾಸಿ ಸೇರಿದಂತೆ ಬಹಳಷ್ಟು ಸ್ತ್ರೀಸಮುದಾಯ ತಾಳಿಯನ್ನೇ ಧರಿಸುವುದಿಲ್ಲ. ಇವರ ಉದ್ದೇಶ ದೃಷ್ಟಿಕೋನ ಯಾವುದಾಗಿತ್ತು. ಹಿಂದೂ, ಮುಸ್ಲಿಂ ಸಿಖ್ ಎಲ್ಲರನ್ನು ಉದ್ದೇಶಿಸಿ ಮಾತನಾಡುವ ಉದ್ದೇಶವಾಗಿದ್ದರೂ ಪ್ರೊಪೋಗಂಢಾವೇ ಒಡೆಯುವುದು ಆಗಿದೆ. ಇದು ಮುಸ್ಲಿಂರ ರಕ್ಷಣೆಯ ಅಂಶವೇ ಆಗಿದ್ದರೂ ಎಲ್ಲರೂ ಇದನ್ನು ಗಮನಿಸಲೇಬೇಕು.
ಸಿದ್ಧಾರ್ಥ್: ಪ್ರಧಾನಮಂತ್ರಿ.ಇನ್ ಎನ್ನುವ ವೆಬ್ಸೈಟ್ ಅನ್ನು ನೋಡಬೇಕು. ಇದು ಯಾವುದೇ ಸರ್ಕಾರಿ ವೆಬ್ಸೈ ಅಲ್ಲ. ಇದನ್ನು ಮೋದಿಯವರು ಮತ್ತು ಬಿಜೆಪಿ ಸ್ವತಃ ನಡೆಸುತ್ತದೆ. ಇದರಲ್ಲಿ ಅವರ ಇಂತಹಹೇಳಿಕೆಗಳನ್ನು ತೆಗೆದುಹಾಕಲಾಗಿದೆ. ಅಂದರೆ, ಅವರಿಗೆ ಗೊತ್ತು ಇದೆಲ್ಲಾ ಲೀಗಲ್ ಮ್ಯಾಟರ್ ಎಂದು. ಮೊದಲು ಮುಸ್ಲಿಂ ಎಂದು ಈಗ ಅವರ ಹತ್ತಿರದವರು ಎಂದುವಿರೋಧವಾಗಿ ಕಾಂಗ್ರೆಸಿಗೆ ಹೇಳುತ್ತಿರುವುದು. ಅಧಿಕಾರವನ್ನು ಇನ್ನಷ್ಟು ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿರುವುದು. 400 ಸಂಖ್ಯೆಯಿಂದ ಇವರೀಗ ಸ್ವಲ್ಪ ದೂರವಾಗಿದ್ದಾರೆ. ವಿಕಾಸ ಹಾಗೂಇಂತಹ ಸುಳ್ಳು ಹೇಳಿಕೆಗಳಿಂದ ಜನರು ಆಕರ್ಷಿತರಾಗುತ್ತಿಲ್ಲ. ಅಂದರೆ ಅವರ ಹೇಳಿಕೆಗಳನ್ನು ಇನ್ನಷ್ಟು ಪ್ರಖರಗೊಳಿಸಬೇಕೆಂದಿದೆ.
ಪ್ರತಿಯೊಂದು ಹಾಳೆಯಲ್ಲೂಮುಸ್ಲೀಂ ಲೀಗ್ ನ ಪ್ರಸ್ತಾಪ ಇದೆ. ಇವರ ಭಾಷಣದಲ್ಲಿದೆ ಎನ್ನುವುದು ಚುನಾವಣೆಯ ಮೊದಲ ಹಂತದ ಭಾಷಣದಿಂದಲೇ ನೋಡಬಹುದು.
ದಲಿತರು, ಆದಿವಾಸಿಗಳು ಯಾರೂ ಸಿಗುವುದಿಲ್ಲ. ಬರೀ ಮುಸ್ಲಿಂರೇ ಸಿಗುತ್ತಾರೆ ಎನ್ನುವ ಇವರ ಹೇಳಿಕೆಗಳು ಯಾವ ಹಿಂದಿನ ಉದ್ದೇಶದಿಂದ ಎನ್ನುವುದನ್ನು ಇಲ್ಲಿ ತಿಳಿಯಬೇಕು. ನರೇಂದ್ರ ಮೋದಿ ಮತ್ತು ಬಿಜೆಪಿ ಕೆಲವು ದಿನಗಳಿಂದ ಹತ್ತು ವರ್ಷಗಳಿಂದ ಅಲ್ಲ, ವಿಷವನ್ನು ನಮ್ಮ ಸಮಾಜದಲ್ಲಿ ಬಹಳ ವರ್ಷಗಳ ವರೆಗೆ ಹರಡುವಂತೆ ಮಾಡಿದ್ದಾರೆ.
( ಇದು ದಿ ವೈರ್ನ ಹಿಂದಿಯ ಮೂಲ ಸಂದರ್ಶನವಾಗಿದ್ದು, ಇದನ್ನು ಕನ್ನಡಕ್ಕೆ ನಮ್ಮ ವರದಿಗಾರರು ಅನುವಾದಿಸಿ ನೀಡಿದ್ದಾರೆ)
ಇದನ್ನೂ ನೋಡಿ: ಏನಯ್ಯಾ ಏನೀ ದರ್ಬಾರು? ಆ ದಿಲ್ಲಿ ದೊರೆಯ ದೌಲತ್ನಲ್ಲಿ ಹೇಳಿದ್ದೇಳಲ್ಲ ಸುಳ್ಳುಗಳೆ ನೋಡು Janashakthi Media