ಐಪಿಎಲ್‌ 2025 – ಪ್ಲೇ ಆಫ್‌ ಪ್ರವೇಶಿಸಿದ ನಾಲ್ಕು ತಂಡಗಳು

ಇಂಡಿಯನ್ ಪ್ರೀಮಿಯರ್‌ ಲೀಗ್‌ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ಲೀಗ್‌ನ ಮುಂದಿನ ಹಂತವನ್ನು ನಾಲ್ಕು ತಂಡಗಳು ಪ್ರವೇಶಿಸಿವೆ. ಆದರೆ ಈ ನಾಲ್ಕು ತಂಡಗಳಲ್ಲಿ ಮೊದಲ ಎರಡು ಸ್ಥಾನಕ್ಕಾಗಿ ಫೈಟ್‌ ನಡೆಯುತ್ತಿದೆ. ಸದ್ಯ ಅಗ್ರ ಸ್ಥಾನದಲ್ಲಿರುವ ಗುಜರಾತ್‌ ಟೈಟಾನ್ಸ್‌ ಈ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಗುರುವಾರ ಮೈದಾನ ಪ್ರವೇಶಿಸಲಿದೆ. ಐಪಿಎಲ್‌

ಇನ್ನು ಆರ್‌ಸಿಬಿ ಸಹ ಈ ಸ್ಥಾನವನ್ನು ಪಡೆಯಲು ಬಿಗ್ ಫೈಟ್ ನಡೆಸಲಿದೆ. ಈ ಬಾರಿ ಪ್ಲೇ ಆಫ್‌ಗೆ ಗುಜರಾತ್‌ ಟೈಟಾನ್ಸ್‌, ಆರ್‌ಸಿಬಿ, ಪಂಜಾಬ್‌ ಕಿಂಗ್ಸ್‌ ತಂಡಗಳು ಈ ಮೊದಲೇ ಅರ್ಹತೆ ಪಡೆದಿದ್ದವು. ಇನ್ನು ಒಂದು ತಂಡಕ್ಕಾಗಿ ಬುಧವಾರ ರೋಚಕ ಫೈಟ್ ನಡೆದಿತ್ತು. ಈ ವೇಳೆ ಮುಂಬೈ ಇಂಡಿಯನ್ಸ್‌ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್‌ ಪ್ರವೇಶಿಸುವ ಲೆಕ್ಕಾಚಾರ ನುಚ್ಚುನೂರಾಗಿದೆ. ಪ್ಲೇ ಆಫ್‌ನಲ್ಲಿ ಕಾದಾಟ ನಡೆಸಲಿರುವ ನಾಲ್ಕು ತಂಡಗಳು ಫೈನಲ್‌ ಆಗಿದ್ದು, ಈ ನಾಲ್ಕು ತಂಡಗಳು ಈಗ ಅಗ್ರ ಎರಡು ಸ್ಥಾನಕ್ಕಾಗಿ ಫೈಟ್ ನಡೆಸುತ್ತಿವೆ. ಐಪಿಎಲ್‌ 

ಇದನ್ನೂ ಓದಿ : ಭಾರತದ ಭವ್ಯ ಪರಂಪರೆ ಎತ್ತಿಹಿಡಿದ ಆ ನಾಲ್ವರು ಮಹಿಳೆಯರು ಐಪಿಎಲ್‌ 

ಗುಜರಾತ್‌ ಟೈಟಾನ್ಸ್‌

ಪ್ರಸಕ್ತ ಲೀಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಗುಜರಾತ್ ಟೈಟಾನ್ಸ್‌ ತಂಡ ಭರ್ಜರಿ ಫಾರ್ಮ್‌ನಲ್ಲಿದೆ. ಈ ತಂಡ ಸದ್ಯ ಆಡಿರುವ 12 ಪಂದ್ಯಗಳಿಂದ 18 ಅಂಕವನ್ನು ಕಲೆ ಹಾಕಿ, ಅಗ್ರ ಸ್ಥಾನದಲ್ಲಿದೆ. ಇನ್ನು ಈ ಲೀಗ್‌ನಲ್ಲಿ ಗುಜರಾತ್‌ ಮೇ 22 ರಂದು ಎಲ್‌ಎಸ್‌ಜಿ ವಿರುದ್ಧ, ಮೇ 25 ರಂದು ಸಿಎಸ್‌ಕೆ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ಈ ವೇಳೆ ಒಂದು ಪಂದ್ಯವನ್ನು ಗೆದ್ದರೂ ಸಹ ಗುಜರಾತ್‌ ಅಗ್ರ ಎರಡು ಸ್ಥಾನದಲ್ಲಿ ಒಂದನ್ನು ಭದ್ರ ಪಡಿಸಿಕೊಳ್ಳಬಹುದು.

ಆರ್‌ಸಿಬಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಆಡಿದ 12 ಪಂದ್ಯಗಳಲ್ಲಿ 8 ಜಯ ಸಾಧಿಸಿದ್ದು ಅಂಕ ಪಟ್ಟಿಯಲ್ಲಿ 17 ಅಂಕ ಕಲೆ ಹಾಕಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೇ ಸ್ಥಾನವನ್ನು ಮುಂದುವರೆಸಲು ಆರ್‌ಸಿಬಿ ಮುಂದಿನ ಎರಡೂ ಪಂದ್ಯಗಳಲ್ಲಿ ಎರಡನ್ನು ಗೆದ್ದರೆ ಬೆಸ್ಟ್‌. ಆರ್‌ಸಿಬಿ ಮೇ 23 ರಂದು ಎಸ್‌ಆರ್‌ಎಚ್‌ ವಿರುದ್ಧ, ಮೇ 27 ರಂದು ಎಲ್‌ಎಸ್‌ಜಿ ವಿರುದ್ಧ ತನ್ನ ಲೀಗ್‌ ಹಂತದ ಮುಂದಿನ ಪಂದ್ಯಗಳನ್ನು ಆಡಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ಆರ್‌ಸಿಬಿ 21 ಅಂಕವನ್ನು ಕಲೆ ಹಾಕುತ್ತದೆ. ಒಂದು ಪಂದ್ಯ ಗೆದ್ದಲ್ಲಿ 19 ಅಂಕಗಳನ್ನು ಕಲೆ ಹಾಕುತ್ತದೆ. ಈ ವೇಳೆ ರನ್‌ ರೇಟ್‌ ಇಂಪಾರ್ಟೆಂಟ್ ಅಗುತ್ತದೆ.

ಪಂಜಾಬ್‌ ಕಿಂಗ್ಸ್‌

ಪಂಜಾಬ್‌ ಕಿಂಗ್ಸ್‌ ಈ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ವೇಳೆ ಪಂಜಾಬ್‌ ಆಡಿದ 12 ಪಂದ್ಯಗಳಿಂದ 17 ಅಂಕ ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆರ್‌ಸಿಬಿ ಹಾಗೂ ಪಂಜಾಬ್‌ 17 ಅಂಕಗಳನ್ನೇ ಕಲೆ ಹಾಕಿದ್ದು, ರನ್‌ ರೇಟ್‌ ಆಧಾರದಲ್ಲಿ ಬೆಂಗಳೂರು ಬಲಿಷ್ಠವಾಗಿದೆ. ಪಂಜಾಬ್‌ಗೆ ಮುಂದಿನ ಎರಡು ಪಂದ್ಯಗಳು ಸವಾಲಿನಿಂದ ಕೂಡಿವೆ. ಮೇ 24 ರಂದು ಡೆಲ್ಲಿ ವಿರುದ್ಧ, ಮೇ 26 ರಂದು ಮುಂಬೈ ವಿರುದ್ಧ ಪಂಜಾಬ್ ಫೈಟ್ ನಡೆಸಲಿದೆ. ಈ ವೇಳೆ ಈ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ತಂಡ ಅಗ್ರ ಎರಡು ಸ್ಥಾನಗಳಿಗೆ ಅರ್ಹತೆ ಪಡೆಯಬಹುದಾಗಿದೆ.

ಮುಂಬೈ ಇಂಡಿಯನ್ಸ್‌

ಲೀಗ್‌ನ ಆರಂಭದಲ್ಲಿ ಗೆಲುವು ಸಾಧಿಸಲು ಹೆಣಗಾಟ ನಡೆಸಿದ್ದ ಮುಂಬೈ ಬಳಿಕ ಸತತ 6 ಜಯ ಸಾಧಿಸಿ ಅಬ್ಬರಿಸಿದೆ. ಡೆಲ್ಲಿ ವಿರುದ್ಧ ಪಂದ್ಯವನ್ನು ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ಪಡೆದಿದೆ. ಮುಂಬೈ ಬುಟ್ಟಿಯಲ್ಲಿ 16 ಅಂಕಗಳಿದ್ದು ಈ ತಂಡ ಅಗ್ರ ಎರಡು ಸ್ಥಾನಕ್ಕೇರುವುದು ಕೊಂಚ ಕಷ್ಟ. ಕಾರಣ ಮುಂಬೈಗೆ ಇನ್ನು ಒಂದೇ ಪಂದ್ಯ ಉಳಿದಿದೆ. ಈ ಪಂದ್ಯ ಜೈಪುರ್‌ನಲ್ಲಿ ನಡೆಯಲಿದ್ದು, ಪಂಜಾಬ್‌ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದರೂ ಮುಂಬೈ 18 ಅಂಕಗಳನ್ನು ಕಲೆ ಹಾಕುತ್ತದೆ. ಆದರೆ ಪಂಜಾಬ್‌, ಆರ್‌ಸಿಬಿ ತಂಡಗಳು ಮುಂದಿನ ಎರಡೂ ಪಂದ್ಯಗಳನ್ನು ಸೋತಾಗ ಮಾತ್ರ ಮುಂಬೈ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಬಹುದಾಗಿದೆ. ಇಲ್ಲದಿದ್ದರೆ ಎಲಿಮಿನೇಟರ್‌ ಪಂದ್ಯವನ್ನು ಆಡಲಿದೆ. ಐಪಿಎಲ್‌ 

ಇದನ್ನೂ ನೋಡಿ : ಜಯಂತಿಗಳಿಗೆ ಜಾತಿಮಿತಿ ಬಂದಿರುವ ಕಾಲ ಇದು – ಬರಗೂರು ರಾಮಚಂದ್ರಪ್ಪ Janashakthi Media ಐಪಿಎಲ್‌ 

 

Donate Janashakthi Media

Leave a Reply

Your email address will not be published. Required fields are marked *